Site icon Vistara News

WTC Final 2023: ಭಾರತ ವಿರುದ್ಧ ವಿಶ್ವ ದಾಖಲೆ ಬರೆದ ಟ್ರಾವಿಸ್​ ಹೆಡ್​​

WTC Final 2023

ಲಂಡನ್​: ಭಾರತ ವಿರುದ್ಧ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಟ್ರಾವಿಸ್​ ಹೆಡ್​​ ಅವರು ನೂತನ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿ ಮೂಡಿಬಂದಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ 3 ವಿಕೆಟ್​ಗೆ 300 ರನ್​ಗಳ ಗಡಿ ದಾಟಿ ಬೃಹತ್​ ಮೊತ್ತ ದಾಖಲಿಸುವ ಸೂಚನೆ ನೀಡಿದೆ.

ಮಾರ್ನಸ್​ ಲಬುಶೇನ್​ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಇಳಿದ ಹೆಡ್​ ಏಕದಿನ ಕ್ರಿಕೆಟ್​ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದರು. ಪ್ರತಿ ಎಸೆತವೊಂದಕ್ಕೆ ರನ್​ ಗಳಿಸಿದ ಅವರು 101 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಈ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆ ಬರೆದರು. ಸದ್ಯ ಅವರು 1 ಸಿಕ್ಸರ್​ ಮತ್ತು 19 ಬೌಂಡರಿ ಬಾರಿಸಿ 129 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ WTC Final 2023: ಲಂಡನ್​​ನಲ್ಲೇ ವಿಶ್ವ ಟೆಸ್ಟ್​ ಫೈನಲ್​ ನಡೆಯಲು ಕಾರಣವೇನು

ಇವರ ಜತೆಗಾರ ಸ್ಟೀವನ್​ ಸ್ಮಿತ್​ ಕೂಡ ಶತಕ ಬಾರಿಸಿವ ಸನಿಹದಲ್ಲಿದ್ದಾರೆ. ಒಂದೊಮ್ಮೆ ಅವರು ಕೂಡ ಶತಕ ಬಾರಿಸಿದರೆ ಇದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ದಾಖಲಾದ 2ನೇ ಶತಕವಾಗಲಿದೆ. ಹಾಗೇಯೇ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹಿರಿಮೆಗೆ ಸ್ಮಿತ್​ ಪಾತ್ರರಾಗಲಿದ್ದಾರೆ. ಹೆಡ್​ ಮೊದಲಿಗ.

Exit mobile version