Site icon Vistara News

WTC Final 2023: ಟ್ರೋಲ್​ಗಳಿಗೆ ಸಿಕ್ಸರ್​ ಬಾರಿಸಿದ ವಿರಾಟ್​ ಕೊಹ್ಲಿ

virat kohli angry pic

ಲಂಡನ್​: ಔಟಾದ ಬಳಿಕ ಆಹಾರ ಸೇವಿಸಿದ ವಿಚಾರಕ್ಕೆ ಅತ್ಯಂತ ಕೀಳು ಮಟ್ಟದಲ್ಲಿ ಟ್ರೋಲ್(troll)​ ಮಾಡಿದ ನೆಟ್ಟಿಗರಿಗೆ ವಿರಾಟ್​ ಕೊಹ್ಲಿ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ(WTC Final 2023) ದ್ವಿತೀಯ ದಿನದಾಟದ ವೇಳೆ ಭಾರತೀಯ ಆಟಗಾರರ ವಿಕೆಟ್​ ಒಂದೆಡೆ ಬೀಳುತ್ತಿದ್ದರೂ ಯಾವುದೇ ಚಿಂತೆ ಇಲ್ಲದಂತೆ ವಿರಾಟ್​ ಕೊಹ್ಲಿ ವಿಕೆಟ್​ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದ ತಕ್ಷಣ ಇಶಾನ್​ ಕಿಶನ್​ ಮತ್ತು ಗಿಲ್​ ಜತೆ ಹರಾಟೆ ಹೊಡೆಯುತ್ತಾ ಆಹಾರ ಸೇವಿಸಿದ್ದರು. ಇದರ ಫೋಟೊ ಮತ್ತು ವಿಡಿಯೊ ಎಲ್ಲಡೆ ವೈರಲ್​ ಆಗಿತ್ತು.

ಕೊಹ್ಲಿಯ ಈ ವರ್ತನೆ ಕಂಡ ಅನೇಕ ಟೀಮ್​ ಇಂಡಿಯಾದ ಅಭಿಮಾನಿಗಳು ಮತ್ತು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದರು. ಐಪಿಎಲ್​ನಲ್ಲಿ ಪಂದ್ಯ ಸೋತಾಗ ಕಣ್ಣೀರು ಸುರಿಸುವ ನೀವು ಭಾರತ ತಂಡಕ್ಕೆ ಆಡುವಾಗ ಮಾತ್ರ ಈ ರೀತಿ ಮಾಡುತ್ತೀರಿ ಇದರ ಅರ್ಥ ನೀವು ಹಣಕ್ಕಾಗಿ ಆಡುತ್ತೀರಿ, ದೇಶಕಾಕ್ಕಾಗಿ ಅಲ್ಲ ಎಂದು ತೀಕ್ಷ್ಣ ಮಾತುಗಳಿಂದ ಕೊಹ್ಲಿಯನ್ನು ಟ್ರೋಲ್​ ಮಾಡಿದ್ದರು.

“ಎಷ್ಟ್ರೇ ಸಾಧನೆ ಮಾಡಿದ್ದರೂ ಹಣಕ್ಕೆ ಆಸೆಪಡುವ ವಿರಾಟ್​ ಕೊಹ್ಲಿಯನ್ನು ಸಚಿನ್​ ತೆಂಡೂಲ್ಕರ್​ ಜತೆ ಯಾವತ್ತೂ ಹೋಲಿಕೆ ಮಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲ ಟೀಕೆ ಮತ್ತು ಟ್ರೋಲ್​ಗಳಿಗೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿಯೊಂದನ್ನು ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಹಾಕಿರುವ ಕೊಹ್ಲಿ, ಅಮೆರಿಕದ ಖ್ಯಾತ ಲೇಖಕ ಮಾರ್ಕ್ ಮ್ಯಾನ್ಸನ್ ಅವರ, “ಇತರ ಜನರ ಅಭಿಪ್ರಾಯದ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು” ಎಂಬ ಹೇಳಿಕೆಯನ್ನು ಫೋಸ್ಟ್​ ಮಾಡುವ ಮೂಲಕ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಸದ್ಯ ಕೊಹ್ಲಿ ಈ ಪೋಸ್ಟ್​ ಎಲ್ಲಡೆ ವೈರಲ್​ ಆಗಿದೆ. ಕೊಹ್ಲಿ ಅವರು ಮೊದಲ ಇನಿಂಗ್ಸ್​ನಲ್ಲಿ 14 ರನ್​ ಗಳಿಸಿದ್ದರು.

Exit mobile version