ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಲಂಡನ್ನಲ್ಲಿಯೇ ನಡೆಯುತ್ತಿರುವುದು ಏಕೆ ಎಂಬ ಕುತೂಹಲವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಎರಡನೇ ಆವೃತ್ತಿಯ ಫೈನಲ್ ಪಂದ್ಯ ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಇಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. 2025ರಲ್ಲಿ ನಡೆಯುವ ಫೈನಲ್ ಪಂದ್ಯವೂ ಲಂಡನ್ನಲ್ಲೇ ನಡೆಯಲಿದೆ. ಇದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಇಲ್ಲಿ ವಿವರಿಸಲಾಗಿದೆ.
ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನ ಜನತೆಗೆ ಟೆಸ್ಟ್ ಎಂದರೆ ಅಚ್ಚುಮೆಚ್ಚು. ಲಂಡನ್ನಲ್ಲಿ ನಡೆಯುವ ಯಾವುದೇ ಟೆಸ್ಟ್ ಪಂದ್ಯವಾದರೂ ಅಲ್ಲಿ ಕಿಕ್ಕಿರಿದು ಜನ ಸೇರುತ್ತಾರೆ. ಅದರಲ್ಲೂ ಇಂಗ್ಲೆಂಡ್ ಕ್ರಿಕೆಟ್ ಪ್ರಿಯರು ಈ ಆಟವನ್ನು ಬಹಳ ಶಿಸ್ತಿನಿಂದ ವೀಕ್ಷಣ ಮಾಡುತ್ತಾರೆ ಯಾವುದೇ ಬೊಬ್ಬೆ ಗದ್ದಲಗಳಿಲ್ಲದೆ ಸಿಕ್ಸರ್, ಬೌಂಡರಿ ಸಿಡಿಸಿದಾಗ ಕೇವಲ ಚಪ್ಪಾಳೆಯ ಸದ್ದು ಮಾತ್ರ ಕೇಳಿಬರುತ್ತದೆ. ತಲೆಗೊಂದು ಹ್ಯಾಟ್, ಕೈಯಲ್ಲೊಂದು ಬಿಯರ್ ಹಿಡಿದು ಪಂದ್ಯ ವೀಕ್ಷಿಸುತ್ತಿರುತ್ತಾರೆ. ಆದ್ದರಿಂದ ಇಲ್ಲಿ ನಡೆಯುವ ಪಂದ್ಯಗಳಿಗೆ ವೀಕ್ಷಕರ ಕೊರತೆ ಎಂದಿಗೂ ಕಾಡಲಾರದು. ಹೀಗಾಗಿ ಐಸಿಸಿ ಮಹತ್ವದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಲಂಡನ್ ತಾಣವನ್ನೇ ಆಯ್ಕೆ ಮಾಡಿದೆ.
ಬೇರೆ ದೇಶದಲ್ಲಾದರೆ ಟೆಸ್ಟ್ ಪಂದ್ಯದಕ್ಕೆ ಹೆಚ್ಚು ಜನ ಪ್ರಾಶಸ್ತ್ಯ ನೀಡುವುದಿಲ್ಲ. ಆದರೆ ಇಂಗ್ಲೆಂಡಿನ ಕ್ರಿಕೆಟ್ ಪ್ರೇಮಿಗಳು ಟೆಸ್ಟ್ ಕ್ರಿಕೆಟ್ ಬಹಳ ಆನಂದಿಸುತ್ತಾರೆ. ಇದಕ್ಕೆ ಕಾರಣವೂ ಇದೆ ಏಕೆಂದರೆ ಇಂಗ್ಲೆಂಡ್ನಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದದ್ದು ಟೆಸ್ಟ್ ಕ್ರಿಕೆಟ್ ಸರಣಿಯೇ ಆಗಿತ್ತು.
ಇದನ್ನೂ ಓದಿ WTC Final 2023 : ವಿಕೆಟ್ ಕೀಪರ್ ಕೆಎಸ್ ಭರತ್ ಹಿಡಿದ ರೋಮಾಂಚಕಾರಿ ಕ್ಯಾಚ್ ಹೀಗಿತ್ತು
ಅದರಲ್ಲೂ ಈಗಿನ ಜಾಯಮಾನದ ಜನತೆಗೆ ತಾಳ್ಮೆ ಎಂಬುದು ಇಲ್ಲವೇ ಎಲ್ಲದಂತಾಗಿದೆ. ಟಿ20 ಮತ್ತು ಟಿ10 ಕ್ರಿಕೆಟ್ ಪಂದ್ಯಗಳು ಆರಂಭವಾದ ಬಳಿಕ ಇದೀಗ ಏಕದಿನ ಕ್ರಿಕೆಟ್ನಲ್ಲಿಯೂ ಕ್ರೇಜ್ ಕಡಿಮೆಯಾಗಿದೆ. ಆದರೆ ಇಂಗ್ಲೆಂಡ್ನಲ್ಲಿ ಮಾತ್ರ ಟೆಸ್ಟ್ ಕ್ರಿಕೆಟ್ ಕ್ರೇಜ್ ಈಗಲೂ ಜೀವಂತವಾಗಿದೆ.