Site icon Vistara News

WTC Final 2023: ಓವಲ್​ ಮೈದಾನದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳ ಟೆಸ್ಟ್​ ಇತಿಹಾಸ ಹೇಗಿದೆ? ಇಲ್ಲಿದೆ ಮಾಹಿತಿ

Kennington Oval, London

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನಾಡು ಸಜ್ಜಾಗಿವೆ. ಇತ್ತಂಡಗಳ ಈ ಪ್ರಶಸ್ತಿ ಸಮರ ಬುಧವಾರದಿಂದ ಲಂಡನ್‌ನ ಅತ್ಯಂತ ಪುರಾತನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯಲಿದೆ. ಉಭಯ ತಂಡಗಳು ಈ ಮೈದಾನದಲ್ಲಿ ಎಷ್ಟು ಪಂದ್ಯಗಳನ್ನು ಆಡಿವೆ? ಎಷ್ಟರಲ್ಲಿ ಗೆಲುವು,ಸೋಲು ಕಂಡಿವೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ತಂಡ ಇಲ್ಲಿ ಇದುವರೆಗೆ ಒಟ್ಟು 14 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಇದರಲ್ಲಿ 2 ಗೆಲುವು, 5 ಸೋಲು, 7 ಡ್ರಾ ಸಾಧಿಸಿದೆ. ಭಾರತ ಇಲ್ಲಿ ಮೊದಲ ಗೆಲುವು ದಾಖಲಿಸಿದ್ದು 1971ರಲ್ಲಿ ಈ ಪಂದ್ಯವನ್ನು ಭಾರತ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳಿಂದ ಗೆದ್ದಿತ್ತು. ಕೊನೆಯ ಬಾರಿ ಭಾರತ ಗೆಲುವು ಕಂಡಿದ್ದು 2021ರಲ್ಲಿ ಈ ಪಂದ್ಯದಲ್ಲಿ ಆಂಗ್ಲರನ್ನು 157 ರನ್​ಗಳಿಂದ ಬಗ್ಗುಬಡಿದಿತ್ತು. ಆ ಬಳಿಕ ಭಾರತ ಇಲ್ಲಿ ಪಂದ್ಯವನ್ನಾಡಿಲ್ಲ.

ಆಸ್ಟ್ರೇಲಿಯಾ ತಂಡ ಇಲ್ಲಿ ಒಟ್ಟು 38 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಇದರಲ್ಲಿ 7 ಗೆಲುವು, 17 ಸೋಲು, 14 ಪಂದ್ಯಗಳನ್ನು ಡ್ರಾ ಗೊಳಿಸಿದೆ. ಆಸ್ಟ್ರೇಲಿಯಾ ಇಲ್ಲಿ ಕೊನೆಯಾ ಬಾರಿ ಆಡಿದ್ದು 2019ರಲ್ಲಿ ಈ ಪಂದ್ಯವನ್ನು 135 ರನ್​ಗಳಿಂದ ಗೆದ್ದಿತ್ತು. ವಿಶೇಷ ಎಂದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಮೈದಾನದಲ್ಲಿ ಇದೇ ಮೊದಲ ಬಾರಿ ಟೆಸ್ಟ್​ ಪಂದ್ಯದಲ್ಲಿ ಮುಖಾಮುಖಿಯಗುತ್ತಿವೆ.

ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್​ ಫೈನಲ್ ​ಪಂದ್ಯಕ್ಕೆ ಮಳೆ ಸಾಧ್ಯತೆ ಇದೆಯೇ? ಹೇಗಿದೆ ಹವಾಮಾನ ವರದಿ?

ಈ ಸ್ಟೇಡಿಯಂನಲ್ಲಿ ಒಟ್ಟು 104 ಟೆಸ್ಟ್​ ಪಂದ್ಯಗಳು ನಡೆದಿವೆ. ಇದರಲ್ಲಿ 38 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಭೇರಿ ಮೊಳಗಿಸಿದೆ. 29 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಮೇಲುಗೈ ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡಕ್ಕೆ ಹೆಚ್ಚು ಲಾಭ ಎಂಬಂತೆ ಕಾಣುತ್ತಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ದುಕೊಳ್ಳುವ ಸಾಧ್ಯತೆ ಅಧಿಕ.

Exit mobile version