ಬೆಂಗಳೂರು: ಸರಿಯಾಗಿ 4 ವರ್ಷಗಳ ಹಿಂದೆ ಅಂದರೆ 2019ರಲ್ಲಿ ವಿಜಯ್ ಹಜಾರೆ ಏಕದಿನ ಕೂಟದಲ್ಲಿ ಮುಂಬೈ ಪರ ಯಶಸ್ವಿ ಜೈಸ್ವಾಲ್(Yashasvi Jaiswal) ಎಂಬ ಹುಡುಗ 203 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದೇ ತಡ, ಎಲ್ಲ ಮಾಧ್ಯಮಗಳಲ್ಲೂ ಆತನದ್ದೇ ಹೆಸರು ರಾರಾಜಿಸುತ್ತಿತ್ತು. ದೇಶೀಯ ಏಕದಿನ ಪಂದ್ಯವೊಂದರಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಗ ಜೈಸ್ವಾಲ್ಗೆ ಕೇವಲ 17 ವರ್ಷ ವಯಸ್ಸು.
ಅದು ಜಾರ್ಖಂಡ್ ವಿರುದ್ಧದ ಪಂದ್ಯವಾಗಿತ್ತು. ಅಲ್ಲಿ 154 ಎಸೆತಗಳಲ್ಲಿ 17 ಬೌಂಡರಿ, 12 ಸಿಕ್ಸರ್ ಸಮೇತ 203 ರನ್ ಚಚ್ಚಿದ್ದೇ ತಡ, ಜೈಸ್ವಾಲ್ ಸಾಧನೆಯ ಹಿಂದಿನ ವೇದನೆಯ ಕಥೆಗಳು ಹೊರಬಿದ್ದವು. ಬರೀ 11 ವರ್ಷಕ್ಕೆ ಉತ್ತರಪ್ರದೇಶದ ಬಡಕುಟುಂಬವನ್ನು ಬಿಟ್ಟು, ಕ್ರಿಕೆಟ್ ಆಡಲು ಜೈಸ್ವಾಲ್ ಮುಂಬೈಗೆ ಬಂದರು. ಅಲ್ಲಿ ಉಳಿದುಕೊಳ್ಳಲು ಜಾಗವಿಲ್ಲದೇ ಒಂದು ಡೈರಿಯಲ್ಲಿದ್ದರು. ಹಗಲಿಡೀ ಕ್ರಿಕೆಟ್ ಅಭ್ಯಾಸ ನಡೆಸಿ ಸುಸ್ತಾಗಿದ್ದ ಅವರಿಗೆ ರಾತ್ರಿ ಡೈರಿಯಲ್ಲಿ ಮಲಗಿ ನಿದ್ರೆ ಹೋಗಿದ್ದೇ ತಿಳಿಯುತ್ತಿರಲಿಲ್ಲ.
ಒಂದು ದಿನ ಡೈರಿಯಿಂದ ಅವರನ್ನು ಹೊರಹಾಕಿದರು. ಕಡೆಗೆ ಮುಸ್ಲಿಮ್ ಯುನೈಟೆಡ್ ಕ್ಲಬ್‌ನ ಟೆಂಟ್‌ನಲ್ಲಿ ಆಶ್ರಯ ಪಡೆದರು. ಇಲ್ಲಿ ಎಷ್ಟೋ ದಿನ ರಾತ್ರಿ ಹಸಿದು ಮಲಗಿದ್ದಾರೆ. ವಾರವಿಡೀ ದಿನದೂಡಲು ರಾಮಲೀಲಾ ಮೈದಾನದಲ್ಲಿ ಪಾನಿಪೂರಿ ಮಾರಿದ್ದಾರೆ. ಆಗ ತನ್ನ ತಂಡದ ಸಹ ಆಟಗಾರರು ನೋಡಿದರೇನು ಮಾಡುವುದು ಎಂದು ಅಂಜಿಕೊಂಡಿದ್ದಾರೆ. ಅಷ್ಟೆಲ್ಲ ಬೇಗೆಯಲ್ಲಿ ಬೆಂದ ಹುಡುಗ ಈಗ ತನ್ನ ಸಾಧನೆಗೆ ಫಲ ಪಡೆದುಕೊಂಡಿದ್ದಾರೆ. ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ತಮ್ಮ ಕನಸಿನ ಭಾರತ ಕ್ರಿಕೆಟ್ ತಂಡವನ್ನು ಸೇರಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅವರಿಂದ ಕ್ಯಾಪ್ ಪಡೆದು ಟೆಸ್ಟ್(yashasvi jaiswal test) ಕ್ರಿಕೆಟ್ಗೆ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.
ಇದನ್ನೂ ಓದಿ IND vs WI 1st Test: ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಜೈಸ್ವಾಲ್,ಇಶಾನ್ ಕಿಶನ್
2023ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್ ಐದು ಅರ್ಧಶತಕಗಳು ಮತ್ತು ಶತಕಗಳೊಂದಿಗೆ 14 ಇನ್ನಿಂಗ್ಸ್‌ಗಳಲ್ಲಿ 625 ರನ್ ಗಳಿಸಿದ್ದರು. ಜತೆಗೆ 15 ಪಂದ್ಯಗಳಲ್ಲಿ 1845 ರನ್ ಗಳಿಸಿದ ಅತ್ಯುತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. ಇದೇ ಮಾರ್ಚ್ನಲ್ಲಿ ನಡೆದ ಇರಾನಿ ಕಪ್ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲೇ ದ್ವಿಶತಕ ಮತ್ತು ಶತಕ ಗಳಿಸಿದ 12 ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.
Watch 📹📹- Proud moment for the two youngsters as they receive their Test caps from Captain Rohit Sharma and Virat Kohli.#WIvIND pic.twitter.com/D9QXRQvX35
— BCCI (@BCCI) July 12, 2023
ದೇಶಿಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ಗಮನ ಸೆಳೆದಿರುವ 21 ವರ್ಷದ ಕುಡಿ ಮೀಸೆಯ ಹುಡುಗ ಜೈಸ್ವಾಲ್ ಇದೀಗ ಭಾರತ ಕ್ರಿಕೆಟ್ ತಂಡದ ಪರವೂ ಉತ್ತಮ ಪ್ರದಶರ್ದನ ತೋರುವ ಮೂಲಕ ಹಲವು ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.