ರಾಜ್ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ(India vs England 3rd Test) ಟೆಸ್ಟ್ ಪಂದ್ಯದಲ್ಲಿ ದ್ವಿಶತಕ(yashasvi jaiswal double century) ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ರಾಜ್ಕೋಟ್ನಲ್ಲಿ ರಾಜನಾಗಿ ಮರೆದಿದ್ದಾರೆ. ಜತೆಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಜೈಸ್ವಾಲ್ ಬರೆದ ದಾಖಲೆಗಳ(Yashasvi Jaiswal records) ಸಂಪೂರ್ಣ ಪಟ್ಟಿ ಇಲ್ಲಿದೆ.
104 ರನ್ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಜೈಸ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಮೂರನೇ ದಿನದಾಟದ ವೇಳೆ ಬೆನ್ನು ನೋವಿನ ಕಾರಣದಿಂದ ಅರ್ಧದಲ್ಲೇ ಪಂದ್ಯದಿಂದ ನಿವೃತ್ತರಾಗಿದ್ದರು. ಆದರೆ, ಭಾನುವಾರ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಜೈಸ್ವಾಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ನೆರದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸಿದರು. ಜತೆಗೆ ಆಂಗ್ಲ ಬೌಲರ್ಗಳ ಬೆವರಿಳಿಸಿದರು. ಅದರಲ್ಲೂ 41 ವರ್ಷದ ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರಿಗೆ ಹ್ಯಾಟ್ರಿಕ್ ಸಿಕ್ಸರ್ಗಳ ಬಿಸಿ ಮುಟ್ಟಿಸಿದ್ದು ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು. ಒಟ್ಟು 236 ಎಸೆತ ಎದುರಿಸಿ ನಿಂತ ಜೈಸ್ವಾಲ್ ಬರೋಬ್ಬರಿ 12 ಸಿಕ್ಸರ್ ಮತ್ತು 14 ಬೌಂಡರಿ ನೆರವಿನಿಂದ ಅಜೇಯ 214 ರನ್ ಬಾರಿಸಿದರು.
ದಾಖಲೆ ನಂ.1
ಬಿರುಸಿನ ಬ್ಯಾಟಿಂಗ್ ಮೂಲಕ ದ್ವಿಶತಕ ಬಾರಿಸಿದ ಜೈಸ್ವಾಲ್ ಅವರು ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಎಡಗೈ ಬ್ಯಾಟ್ರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಸೌರವ್ ಗಂಗೂಲಿ ಹೆಸರಿನಲ್ಲಿತ್ತು. ಗಂಗೂಲಿ 2007ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 534 ರನ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಜೈಸ್ವಾಲ್ ಮುರಿದಿದ್ದಾರೆ. ಜೈಸ್ವಾಲ್ 545 ರನ್ ಬಾರಿಸಿದ್ದಾರೆ.
ಭಾರತದ ಪರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಬ್ಯಾಟರ್ಗಳು
ಯಶಸ್ವಿ ಜೈಸ್ವಾಲ್-545* ರನ್
ಸೌರವ್ ಗಂಗೂಲಿ-534 ರನ್
ಗೌತಮ್ ಗಂಭೀರ್-463 ರನ್
A phenomenal double century from Yashasvi Jaiswal 🔥#WTC25 #INDvENG pic.twitter.com/OrNDZ37bTM
— ICC (@ICC) February 18, 2024
ದಾಖಲೆ ನಂ.2
ಒಟ್ಟು 12 ಸಿಕ್ಸರ್ ಬಾರಿಸಿದ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ಈ ಮೂಲಕ ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ದಾಖಲೆಯನ್ನು ಸರಿಗಟ್ಟಿದರು. 1996ರಲ್ಲಿ ಜಿಂಬಾಬ್ವೆ ವಿರುದ್ಧದ ಟೆಸ್ಟ್ನಲ್ಲಿ ಅಕ್ರಮ್ ಇನಿಂಗ್ಸ್ ಒಂದರಲ್ಲಿ 12 ಸಿಕ್ಸರ್ ಬಾರಿಸಿದ್ದರು. ಈ ಸಾಧರಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ಗೆ ದ್ವಿತೀಯ ಸ್ಥಾನ. ಹೇಡನ್ 11 ಸಿಕ್ಸರ್ ಬಾರಿಸಿದ್ದರು.
ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ಯಶಸ್ವಿ ಜೈಸ್ವಾಲ್- 12 ಸಿಕ್ಸರ್, ಇಂಗ್ಲೆಂಡ್ ವಿರುದ್ಧ
ವಾಸಿಂ ಅಕ್ರಮ್-12 ಸಿಕ್ಸರ್, ಜಿಂಬಾಬ್ವೆ ವಿರುದ್ಧ
ಮ್ಯಾಥ್ಯೂ ಹೇಡನ್-11 ಸಿಕ್ಸರ್, ಜಿಂಬಾಬ್ವೆ ವಿರುದ್ಧ
ನಾಥನ್ ಆಸ್ಟಲ್-11 ಸಿಕ್ಸರ್, ಇಂಗ್ಲೆಂಡ್ ವಿರುದ್ಧ
ಬ್ರೆಂಡನ್ ಮೆಕಲಮ್-11 ಸಿಕ್ಸರ್, ಪಾಕಿಸ್ತಾನ ವಿರುದ್ಧ
ಬ್ರೆಂಡನ್ ಮೆಕಲಮ್-11 ಸಿಕ್ಸರ್, ಶ್ರೀಲಂಕಾ ವಿರುದ್ಧ
ಬೆನ್ ಸ್ಟೋಕ್ಸ್-11 ಸಿಕ್ಸರ್, ದಕ್ಷಿಣ ಆಫ್ರಿಕಾ ವಿರುದ್ಧ
ಕುಸಾಲ್ ಮೆಂಡೀಸ್–11 ಸಿಕ್ಸರ್, ಐರ್ಲೆಂಡ್ ವಿರುದ್ಧ
ಇದನ್ನೂ ಓದಿ IND vs ENG: ದ್ವಿಶತಕದ ಜತೆಗೆ ಸಿಕ್ಸರ್ನಲ್ಲಿಯೂ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
𝙃𝙖𝙩-𝙩𝙧𝙞𝙘𝙠 𝙤𝙛 𝙎𝙄𝙓𝙀𝙎! 🔥 🔥
— BCCI (@BCCI) February 18, 2024
Yashasvi Jaiswal is smacking 'em all around the park! 💥💥💥
Follow the match ▶️ https://t.co/FM0hVG5pje#TeamIndia | #INDvENG | @ybj_19 | @IDFCFIRSTBank pic.twitter.com/OjJjt8bOsx
ದಾಖಲೆ ನಂ.3
10 ಸಿಕ್ಸರ್ ಬಾರಿಸಿದ ವೇಳೆ ಜೈಸ್ವಾಲ್ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತದ ಪರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರನಾಗಿ ಮೂಡಿಬಂದರು. ಈ ಹಿಂದೆ 8 ಸಿಕ್ಸರ್ ಬಾರಿಸಿದ್ದ ನವಜೋತ್ ಸಿಂಗ್ ದಾಖಲೆ ಪತನಗೊಂಡಿತು.
ಭಾರತದ ಪರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ಯಶಸ್ವಿ ಜೈಸ್ವಾಲ್-10* ಸಿಕ್ಸರ್ (2024 ಇಂಗ್ಲೆಂಡ್ ವಿರುದ್ಧ).
ನವಜೋತ್ ಸಿಂಗ್ ಸಿಧು- 8 ಸಿಕ್ಸರ್(1994 ಶ್ರೀಲಂಕಾ ವಿರುದ್ಧ).
ಮಯಾಂಕ್ ಅಗರ್ವಾಲ್-8 ಸಿಕ್ಸರ್(2019 ಬಾಂಗ್ಲಾದೇಶ ವಿರುದ್ಧ).
HISTORY – Yashasvi Jaiswal becomes the FIRST Indian to hit 10 sixes in a Test innings 💥
— Kausthub Gudipati (@kaustats) February 18, 2024
10* – Yashasvi Jaiswal v ENG, 2024
8 – Navjot Sidhu v SL, 1994
8 – Mayank Agarwal v BAN, 2019 pic.twitter.com/785s53n3SF
ದಾಖಲೆ ನಂ.4
ಜೈಸ್ವಾಲ್ ಅವರು 10 ಸಿಕ್ಸರ್ ಬಾರಿಸುತ್ತಿದ್ದಂತೆ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಅವರ ದಾಖಲೆಯನ್ನು ಹಿಂದಿಕ್ಕಿದರು. ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪೈಕಿ ಜೈಸ್ವಾಲ್ ಅಗ್ರಸ್ಥಾನಕ್ಕೇರಿದ್ದಾರೆ. ಜೈಸ್ವಾಲ್ ಸದ್ಯ 20 ಸಿಕ್ಸರ್ ಬಾರಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮ ಅವರ ಹೆಸರಿನಲ್ಲಿತ್ತು. ರೋಹಿತ್ 19 ಸಿಕ್ಸರ್ ಬಾರಿಸಿದ್ದರು. ಸರಣಿ ಆಡುತ್ತಿರುವ ರೋಹಿತ್ಗೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಒಟ್ಟಾರೆ ಈ ಸರಣಿಯಲ್ಲಿ ಉಭಯ ಆಟಗಾರರ ಮಧ್ಯೆ ಸಿಕ್ಸರ್ ದಾಖಲೆಯ ಪೈಪೋಟಿಯೊಂದು ನಡೆಯಲಿದೆ.