Site icon Vistara News

Yashasvi Jaiswal: 14 ವರ್ಷಗಳಿಂದ ರೋಹಿತ್​ ಶರ್ಮ ಹೆಸರಿನಲ್ಲಿದ್ದ ದಾಖಲೆ ಮುರಿದ ಜೈಸ್ವಾಲ್​

PLAYER OF THE MATCH Yashasvi Jaiswal

ಫ್ಲೋರಿಡಾ: ಪ್ರಚಂಡ ಬ್ಯಾಟಿಂಗ್​ ಮೂಲಕ ವೆಸ್ಟ್​ ಇಂಡೀಸ್(West Indies vs India, 4th T20)​ ವಿರುದ್ಧದ ನಾಲ್ಕನೆ ಟಿ20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ ಟೀಮ್​ ಇಂಡಿಯಾದ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್(Yashasvi Jaiswal)​, 14 ವರ್ಷಗಳ ಹಿಂದೆ ರೋಹಿತ್​ ಶರ್ಮ(Rohit Sharma) ನಿರ್ಮಿಸಿದ ದಾಖಲೆಯೊಂದನ್ನು ಮುರಿದಿದ್ದಾರೆ.

ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ಶನಿವಾರ ನಡೆದ ವೆಸ್ಟ್‌ಇಂಡೀಸ್‌ ಎದುರಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಅಮೋಘ ಜಯ ಸಾಧಿಸಿ ಸರಣಿ ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ನಿಗದಿತ ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರ ಅಮೋಘ ಜತೆಯಾಟದಿಂದ 17 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 179 ರನ್ ಗಳಿ ಗೆಲುವಿನ ನಗೆ ಬೀರಿತು.

ರೋಹಿತ್​ ದಾಖಲೆ ಪತನ

ಜೈಸ್ವಾಲ್​ ಅವರು ಅರ್ಧಶತಕ ಬಾರಿಸುತ್ತಿದ್ದಂತೆ ನಾಯಕ ರೋಹಿತ್​ ಶರ್ಮ ಅವರ ಹೆಸರಿನಲ್ಲಿದ್ದ ದಾಖಲೆಯೊಂದು ಪತನಗೊಂಡಿತು. ಟೀಮ್​ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಅತಿ ಕಿರಿಯ ವಯಸ್ಸಿನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ 14 ವರ್ಷಗಳಿಂದ ರೋಹಿತ್​ ಶರ್ಮ ಅವರ ಹೆಸರಿನಲ್ಲಿದ್ದ ದಾಖಲೆ ಉಡೀಸ್​ ಆಯಿತು. ರೋಹಿತ್(22 ವರ್ಷ 41 ದಿನ)​ ಅವರು 2009ರಲ್ಲಿ ಇಂಗ್ಲೆಂಡ್​ ವಿರುದ್ಧ ಈ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್​(21 ವರ್ಷ 227 ದಿನ) ಹಿಂದಿಕ್ಕಿದ್ದಾರೆ.

ಈ ಸಾಧನೆ ಮಾಡಿದವರ ಪೈಕಿ ಇಶಾನ್ ಕಿಶನ್​(22 ವರ್ಷ 41 ದಿನ) ಮೂರನೇ ಸ್ಥಾನದಲ್ಲಿದ್ದಾರೆ. ಇಶಾನ್​ 2021ರಲ್ಲಿ ಇಂಗ್ಲೆಮಡ್​ ವಿರುದ್ಧ ಈ ಸಾಧನೆ ಮಾಡಿದ್ದರು. ಹಿರಿಯ ಮತ್ತು ಅನುಭವಿ ಆಟಗಾರ ಅಜಿಂಕ್ಯ ರಹಾನೆ(Ajinkya Rahane) ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರೂ ಕೂಡ 2111ರಲ್ಲಿ ಇಂಗ್ಲೆಂಡ್​ ವಿರುದ್ಧವೇ ಈ ಸಾಧನೆ ಮಾಡಿದ್ದರು. ಒಟ್ಟು ಮೂವರು ಆಟಗಾರರು ಇಂಗ್ಲೆಂಡ್​ ತಂಡದ ವಿರುದ್ಧವೇ ಈ ಸಾಧನೆ ಮಾಡಿರುವುದು ಅಚ್ಚರಿ.

ಇದನ್ನೂ ಓದಿ Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

ಈ ದಾಖಲೆಯಲ್ಲಿ ರೋಹಿತ್​ ಮುಂದು

​ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಸಾಧನೆ ನಾಯಕ ರೋಹಿತ್​ ಶರ್ಮ(Rohit Sharma) ಹೆಸರಿನಲ್ಲಿದೆ. ಅವರು 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ವರ್ಷ 143 ದಿನಗಳಲ್ಲಿ ಅಜೇಯ 50 ರನ್​ ಬಾರಿಸಿದ್ದರು. ಈ ಸಮಯದಲ್ಲಿ ರೋಹಿತ್​ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಇನ್ನು ಈ ಪಟ್ಟಿಯಲ್ಲಿ ಜೈಸ್ವಾಲ್​ ನಾಲ್ಕನೇ ಸ್ಥಾನದಲ್ಲಿದ್ದಾರೆ. ತಿಲಕ್​ ವರ್ಮಾ ಮತ್ತು ರಿಷಭ್​ ಪಂತ್​ ಜೈಸ್ವಾಲ್​ಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.

Exit mobile version