Site icon Vistara News

Yashasvi Jaiswal: ಅಮೋಘ ಶತಕ ಬಾರಿಸಿ ಸಚಿನ್​ ಜತೆ ಎಲೈಟ್​ ಪಟ್ಟಿಗೆ ಸೇರಿದ ಜೈಸ್ವಾಲ್

Yashasvi Jaiswal brought up his second Test century

ವಿಶಾಖಪಟ್ಟಣಂ: ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್(India vs England 2nd Test)​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ತವರಿನ ಮತ್ತು ವಿದೇಶದ ಟೆಸ್ಟ್​ ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ವಿಶಾಖಪಟ್ಟಣದಲ್ಲಿ(Visakhapatnam) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತಕ್ಕೆ ಜೈಸ್ವಾಲ್​ ಉತ್ತಮ ಆರಂಭ ಒದಗಿಸಿದರು. ಆಂಗ್ಲರ ಬೌಲಿಂಗ್​ ದಾಳಿಗೆ ಸೂಕ್ಷವಾಗಿ ಬ್ಯಾಟ್​ ಬೀಸಿ ಸೊಗಸಾದ ಶತಕ ಬಾರಿಸಿದರು. ಈ ಮೂಲಕ 23 ವರ್ಷ ತುಂಬುವ ಮೊದಲು ತವರು ಮತ್ತು ವಿದೇಶದ ಟೆಸ್ಟ್​ನಲ್ಲಿ ಶತಕ ಬಾರಿಸಿದ ಭಾರತೀಯ ಆಟಗಾರರ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು.

ರವಿ ಶಾಸ್ತ್ರಿ(Ravi Shastri), ಸಚಿನ್ ತೆಂಡೂಲ್ಕರ್(Shastri,Sachin Tendulkar), ವಿನೋದ್ ಕಾಂಬ್ಳಿ(Vinod Kambli) ಈ ಸಾಧನೆ ಮಾಡಿದ ಉಳಿದ ಮೂವರು ಆಟಗಾರರಾಗಿದ್ದಾರೆ. ಇದೀಗ ಈ ಪಟ್ಟಿಗೆ ನಾಲ್ಕನೇ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಸೇರಿದ್ದಾರೆ. ಅಚ್ಚರಿ ಎಂದರೆ ಈ ಸಾಧನೆ ಮಾಡಿದ ನಾಲ್ಕು ಮಂದಿ ಆಟಗಾರರು ಕೂಡ ಮುಂಬೈ ಪರ ರಣಜಿ ಆಡಿದ ಆಟಗಾರರು ಎನ್ನುವುದು ಸಾರಸ್ಯಕರ ಸಂಗತಿಯಾಗಿದೆ.

ಇದನ್ನೂ ಓದಿ Joe Root : ಟೆಸ್ಟ್​ ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಇಂಗ್ಲೆಂಡ್ ಆಟಗಾರ ಜೋ ರೂಟ್

2023ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್​ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅವರು 171 ರನ್​ ಬಾರಿಸಿ ಅನೇಕ ದಾಖಲೆ ಬರೆದಿದ್ದರು. ಇದೀಗ ತವರಿನ ಪಂದ್ಯದಲ್ಲಿ ಶತಕ ಬಾರಿಸಿ ಗಮನಸೆಳೆದಿದ್ದಾರೆ. ಸದ್ಯ ಅವರು ಅಜೇಯ ಶತಕದಾಟ ಮುಂದುವರಿಸಿದ್ದಾರೆ. ಇವರ ಈ ಅಜೇಯ ಶತಕದ ಆಟದಿಂದ ಭಾರತ ಉತ್ತಮ ರನ್​ ಕೂಡ ಗಳಿಸಿದೆ.

ಎರಡನೇ ಟೆಸ್ಟ್ ಪಂದ್ಯದಿಂದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಕೈಬಿಡಲಾಗಿದೆ. ಎಲ್ಲಾ ಸ್ವರೂಪಗಳಲ್ಲಿ ನಿರಂತರವಾಗಿ ಆಡುತ್ತಿರುವ ಸಿರಾಜ್ ಅವರ ಕಾರ್ಯದೊತ್ತಡ ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಿರಾಜ್ ಅವರ ಅನುಪಸ್ಥಿತಿಯು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ವಿಶೇಷವಾಗಿ ಟೆಸ್ಟ್​ ಸರಣಿಯು ಸರಣಿಯು ಸುದೀರ್ಘ ಮತ್ತು ಕಠಿಣ ಸ್ಪರ್ಧೆಯಾಗಿದೆ. ಹೀಗಾಗಿ ತಂಡದ ನಿರ್ಧಾರವು ವೇಗಿಯ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಮತ್ತು ಭವಿಷ್ಯದ ಕಾರ್ಯತಂತ್ರಗಳಿಗೆ ಅವರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಯೋಜನೆಯಾಗಿದೆ.

Exit mobile version