ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್(India vs England 2nd Test) ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಯಶಸ್ವಿ ಜೈಸ್ವಾಲ್(Yashasvi Jaiswal) ಅವರ ಅಜೇಯ ಶತಕದ ಬ್ಯಾಟಿಂಗ್ ಸಾಹಸದಿಂದ ಮೊದಲ ದಿನವೇ ಭಾರತ 300ರ ಗಡಿ ದಾಡಿದೆ. ಶತಕ ಬಾರಿಸಿದ ಜೈಸ್ವಾಲ್ ಹಲವು ದಾಖಲೆ ಬರೆದಿದ್ದಾರೆ.
ಜೈಸ್ವಾಲ್ ಶತಕ ಬಾರಿಸುವ ಮೂಲಕ ಟೆಸ್ಟ್‌ನ ಮೊದಲ ದಿನವೇ ಅತಿ ಹೆಚ್ಚು ರನ್ ಬಾರಿಸಿದ 6ನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ವೀರೇಂದ್ರ ಸೆಹವಾಗ್ ಮೊದಲಿಗ. ಸೆಹವಾಗ್ ಪಾಕಿಸ್ತಾನ ವಿರುದ್ಧ 2004ರಲ್ಲಿ ಮುಲ್ತಾನ್ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ 228 ರನ್ ಬಾರಿಸಿದ್ದರು. ದ್ವಿತೀಯ ಸ್ಥಾನದಲ್ಲಿಯೂ ಸೆಹವಾಗ್ ಕಾಣಿಸಿಕೊಂಡಿದ್ದಾರೆ 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೊರ್ನ್ನಲ್ಲಿ ನಡೆದಿದ್ದ ಟೆಸ್ಟ್ನಲ್ಲಿ ಅವರು 195 ರನ್ ಗಳಿಸಿದ್ದರು. ಇದೀಗ ಜೈಸ್ವಾಲ್ ಟೆಸ್ಟ್‌ನ ಮಪದಲ ದಿನವೇ 179* ಬಾರಿಸಿ ಈ ಸಾಧನೆ ಮಾಡಿದ 6ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಟೆಸ್ಟ್‌ನ ಮೊದಲ ದಿನವೇ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ಗಳು
ಆಟಗಾರ | ವಿರುದ್ಧ | ರನ್ | ವರ್ಷ |
ವೀರೇಂದ್ರ ಸೆಹವಾಗ್ | ಪಾಕಿಸ್ತಾನ | 228 | 2004 |
ವೀರೇಂದ್ರ ಸೆಹವಾಗ್ | ಆಸ್ಟ್ರೇಲಿಯಾ | 195 | 2003 |
ವಾಸಿಂ ಜಾಫರ್ | ಪಾಕಿಸ್ತಾನ | 192 | 2007 |
ಶಿಖರ್ ಧವನ್ | ಶ್ರೀಲಂಕಾ | 190 | 2017 |
ವೀರೇಂದ್ರ ಸೆಹವಾಗ್ | ವೆಸ್ಟ್ ಇಂಡೀಸ್ | 180 | 2006 |
ಯಶಸ್ವಿ ಜೈಸ್ವಾಲ್ | ಇಂಗ್ಲೆಂಡ್ | 179 | 2024 |
ಮೂರನೇ ಭಾರತೀಯ ಆಟಗಾರ
ಈ ಸಾಧನೆ ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನ ಒಂದೇ ದಿನದ ಆಟದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಮೂರನೇ ಭಾರತೀಯ ಆಟಗಾರ ಎಂಬ ಹಿರಿಮೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಕನ್ನಡಿಗ ಕರುಣ್ ನಾಯರ್ಗೆ ಅಗ್ರಸ್ಥಾನ. ಅವರು 2016ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಟೆಸ್ಟ್‌ನ ಮೊದಲ ದಿನವೇ ಇಂಗ್ಲೆಂಡ್ ವಿರುದ್ಧ 232 ರನ್ ಬಾರಿಸಿದ್ದರು. ಇದು ಅವರ ಪದಾರ್ಪಣ ಪಂದ್ಯ ಕೂಡ ಆಗಿತ್ತು. ದ್ವಿತೀಯ ದಿನದಾಟದಲ್ಲಿ ಅವರು ತ್ರಿಶತಕ ಕೂಡ ಪೂರ್ತಿಗೊಳಿಸಿದ್ದರು.
ಇದನ್ನೂ ಓದಿ IND vs ENG: ಯಶಸ್ವಿ ಜೈಸ್ವಾಲ್ ಅಜೇಯ ಶತಕ; ಬೃಹತ್ ಮೊತ್ತದತ್ತ ಭಾರತ
179 ರನ್ ಬಾರಿಸಿದ್ದ ಸುನೀಲ್ ಗವಾಸ್ಕರ್ಗೆ ದ್ವಿತೀಯ ಸ್ಥಾನ. ಅವರು 1979ರಲ್ಲಿ ಲಂಡನ್ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು. ನಾಲ್ಕನೇ ಸ್ಥಾನದಲ್ಲಿರುವ ಮೊಹಮ್ಮದ್ ಅಜರುದ್ಧೀನ್ 1990ರಲ್ಲಿ ಮ್ಯಾಂಚೆಸ್ಟ್ರ್ನಲ್ಲಿ 175 ರನ್ ಬಾರಿಸಿದ್ದರು. ಜೈಸ್ವಾಲ್ 179 ರನ್ ಬಾರಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
A TEST HUNDRED WITH A SIX…!!! 🤯
— Mufaddal Vohra (@mufaddal_vohra) February 2, 2024
– Yashasvi Jaiswal special in Vizag.pic.twitter.com/C3QuPjjRBQ
ತವರು ಮತ್ತು ವಿದೇಶದ ಟೆಸ್ಟ್ನಲ್ಲಿ ಶತಕ ಬಾರಿಸಿದ 4ನೇ ಭಾರತೀಯ ಆಟಗಾರ
ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ಕೊಟ್ಟ ಯಶಸ್ವಿ ಜೈಸ್ವಾಲ್ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತ ನೀಡಿದರು. ಕ್ರೀಸ್ಗೆ ಅಂಟಿಕೊಂಡ ತಕ್ಷಣ ಆಂಗ್ಲರ ಬೌಲಿಂಗ್ ದಾಳಿಯನ್ನು ಪುಡಿಗಟ್ಟಲು ಆರಂಭಿಸಿದ ಅವರು ಸಿಕ್ಸರ್ ಮೂಲಕವೇ ತಮ್ಮ ಶತಕವನ್ನು ಪೂರ್ತಿಗೊಳಿಸಿದರು. ಈ ಶತಕ ಬಾರಿಸುವ ಮೂಲಕ 23 ವರ್ಷ ತುಂಬುವ ಮೊದಲು ತವರು ಮತ್ತು ವಿದೇಶದ ಟೆಸ್ಟ್ನಲ್ಲಿ ಶತಕ ಬಾರಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು. ರವಿ ಶಾಸ್ತ್ರಿ(Ravi Shastri), ಸಚಿನ್ ತೆಂಡೂಲ್ಕರ್(Shastri,Sachin Tendulkar), ವಿನೋದ್ ಕಾಂಬ್ಳಿ(Vinod Kambli) ಈ ಸಾಧನೆ ಮಾಡಿದ ಉಳಿದ ಮೂವರು ಆಟಗಾರರಾಗಿದ್ದಾರೆ. ಅಚ್ಚರಿ ಎಂದರೆ ಈ ಸಾಧನೆ ಮಾಡಿದ ನಾಲ್ಕು ಮಂದಿ ಆಟಗಾರರು ಕೂಡ ಮುಂಬೈ ಪರ ರಣಜಿ ಆಡಿದ ಆಟಗಾರರಾಗಿದ್ದಾರೆ.