Site icon Vistara News

ಕರ್ನಾಟಕದ ಮಹಿಳಾ ಹಾಕಿ ತಂಡಕ್ಕೆ ಕೊಡಗಿನ ಕೊಡುಗೆ!

ಮಡಿಕೇರಿ: ಕರ್ನಾಟಕದ ಮಹಿಳಾ ಸೀನಿಯರ್ ಹಾಕಿ ತಂಡಕ್ಕೆ ಕೊಡಗಿನ ಮರದಾಳು ಯಶಿಕಾ ಆಯ್ಕೆಯಾಗಿದ್ದಾರೆ. ಭೋಪಾಲ್‌ನಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕದ ಮಹಿಳಾ ಸೀನಿಯರ್ ಹಾಕಿ ತಂಡವನ್ನು ಪ್ರತಿನಿಧಿದುತ್ತಿದ್ದಾರೆ.

ಯಶಿಕಾ ಸಾಧನೆ:

ಯಶಿಕಾ ತಮ್ಮ ಎಳೆಯ ವಯಸ್ಸಿನಿಂದಲೇ ಹಾಕಿಯನ್ನು ಆಡುತ್ತಿದ್ದವರು. ಹಾಕಿಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು. ಹಾಗೂ 8 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗಲೇ ಜಾರ್ಖಾಂಡ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದರು. ನಂತರ, ದೆಹಲಿ, ಪಂಜಾಬ್, ಒರಿಸ್ಸಾ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಬಾರಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಯಶಿಕ ಈವರೆಗೆ ಸುಮಾರು 63ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ, ಒಂದು ವರ್ಷದ ಅವಧಿ ನಾಯಕಿಯಾಗಿಯೂ ಕರ್ನಾಟಕ ತಂಡವನ್ನು ಮುನ್ನಡೆಸಿದ್ದಾರೆ.

2020ರಲ್ಲಿ ಚೆನ್ನೈನಲ್ಲಿ ನಡೆದ ದಕ್ಷಿಣ ವಿಭಾಗದ ಕ್ರೀಡಾಕೂಟ ಹಾಗೂ ಪೊನ್ನಂಪೇಟೆಯಲ್ಲಿ ನಡೆದ ವಿಶ್ವ ವಿದ್ಯಾನಿಲಯ ಮಟ್ಟದ ದಕ್ಷಿಣ ವಿಭಾಗದ ಪಂದ್ಯಾವಳಿಯಲ್ಲಿ ಇವರು ಭಾಗಿಯಾಗಿದ್ದರು. ಹಾಗೂ ಇವರ ನೇತೃತ್ವದ ತಂಡ ಈ ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಯಶಿಕ ರಾಜಸ್ಥಾನದಲ್ಲಿ ನಡೆದ ಆಲ್ ಇಂಡಿಯಾ ಕ್ರೀಡಾಕೂಟದಲ್ಲಿ ಕೂಡ ಭಾಗವಹಿಸಿದ್ದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಯಶಿಕಾ ಪ್ರತಿನಧಿಸಿದ್ದು, ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ. ಈ ಪಂದ್ಯಾವಳಿಯಲ್ಲಿ 8 ಗೋಲುಗಳನ್ನು ಬಾರಿಸಿ ದಾಖಲೆಯನ್ನು ಬರೆದಿದ್ದಾರೆ. ಅಪೂರ್ವ ಸಾಧನೆ ಮಾಡಿದ ಇವರು ಯಶಸ್ವೀ ಹಾಕಿಪಟು ಎನಿಸಿಕೊಂಡಿದ್ದಾರೆ.

ಯಶಿಕಾ ಅವರು ಫಾರವರ್ಡ್ ಆಟಗಾರ್ತಿ ಮತ್ತು ಮುಖ್ಯ ಸ್ಟ್ರೈಕರ್ ಆಗಿ ಉತ್ತಮ ಆಟವನ್ನು ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಈವರೆಗೆ ಯಶಿಕ ಒಟ್ಟು 45ಕ್ಕೂ ಅಧಿಕ ಗೋಲ್‌ಗಳನ್ನು ದಾಖಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಈಜಿ ಚಿನ್ನ ಗೆದ್ದ ಮಾಧವನ್‌ ಪುತ್ರ: ವೇದಾಂತ್‌ ಸಾಧನೆಗೆ ಮೆಚ್ಚುಗೆಯ ಸುರಿಮಳೆ

Exit mobile version