Site icon Vistara News

Year Ender 2023: ನೀಗಿದ ಕೊಹ್ಲಿ ಟೆಸ್ಟ್‌ ಶತಕದ ಬರ, ಟೆನಿಸ್​ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ…

virat kohli and sania mirza

ಬೆಂಗಳೂರು: ನಾವೆಲ್ಲರು 2023ರ ಅಂತಿಮಘಟ್ಟದಲ್ಲಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. 2023ರಲ್ಲಿ ಭಾರತದ ಕ್ರೀಡಾ ಕ್ಷೇತ್ರದಲ್ಲಿ(Year Ender 2023) ನಡೆದ ಪ್ರಮುಖ ಘಟನೆಗಳ ಇಣುಕು ನೋಡ ಇಲ್ಲಿದೆ.

ಮೂರು ವರ್ಷಗಳ ಬಳಿಕ ಟೆಸ್ಟ್​ ಶತಕ ಬಾರಿಸಿದ ಕೊಹ್ಲಿ

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ, ರನ್ ಮಷೀನ್ ಖ್ಯಾತಿಯ ವಿರಾಟ್​ ಕೊಹ್ಲಿ ಅವರು 2019ರ ಬಳಿಕ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಿದ್ದರು. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ. ಅವರ ಕಳಪೆ ಬ್ಯಾಟಿಂಗ್​ ಫಾರ್ಮ್ ಮೂರು ವರ್ಷಗಳ ಕಾಲ ಮುಂದುವರೆದಿತ್ತು. ಈ ವೇಳೆ ಕೊಹ್ಲಿ ಅವರ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು. ಎಲ್ಲ ಟೀಕೆಗಳನ್ನು ಸಹಿಸಿಕೊಂಡು ನಿಂತ ಕೊಹ್ಲಿ ಮೂರುವರೆ ವರ್ಷದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಇದೇ ವರ್ಷ ನಡದಿದ್ದ ಆಸ್ಟ್ರೇಲಿಯಾ ಎದುರಿನ ಅಹಮದಾಬಾದ್‌ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಸಿಡಿಸಿ ಮಿಂಚಿದರು.

ಇದನ್ನೂ ಓದಿ Year Ender 2023: ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಸಾಧನೆ

santosh trophy karnataka


ಯೋ-ಯೋ ಟೆಸ್ಟ್‌ ಕಡ್ಡಾಯ

ಆಟಗಾರರು ಪದೇಪದೆ ಗಾಯಕ್ಕೀಡಾಗಿ ಸರಣಿಗೆ ಅಲಭ್ಯರಾಗುತ್ತಿರುವುದುನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ಫಿಟ್​ನೆಸ್​ ವಿಚಾರದಲ್ಲಿ ಕಠಿಣ ನಿಯಮವೊಂದನ್ನು ಜಾರಿಗೆ ತಂದಿತ್ತು. ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಬೇಕಾದರೆ ಎಲ್ಲ ಆಟಗಾರರು ಯೋ-ಯೋ ಫಿಟ್ನೆಸ್‌ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪಾಸಾಗಬೇಕು ಎಂಬ ನಿಯಮವನ್ನು ಜಾರಿಗೆ ತಂದಿತ್ತು. 2016ರಿಂದ ಜಾರಿಯಲ್ಲಿದ್ದ ಈ ಪರೀಕ್ಷೆಯನ್ನು ಕೋವಿಡ್‌ ಬಳಿಕ ಕೈಬಿಡಲಾಗಿತ್ತು. ಆದರೆ ಅನೇಕ ಆಟಗಾರರು ಪದೇಪದೆ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಜುಗರಕ್ಕೆ ಒಳಗಾದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ), ಯೋ-ಯೋ ಫಿಟ್ನೆಸ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿತು.

santosh trophy karnataka


ಪಂತ್​ಗೆ ಶಸ್ತ್ರ ಚಿಕಿತ್ಸೆ

2022ರ ಡಿಸೆಂಬರ್ 30ರಂದು ಬೆಳಗಿನ ಜಾವ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಟೀಮ್​ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಕಾರು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿತ್ತು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡಸಲಾಗಿತ್ತು. ಸದ್ಯ ಚೇತರಿಕೆ ಕಂಡಿರುವ ಪಂತ್​ ಮುಂದಿನ ವರ್ಷ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Year Ender 2023: ಗೂಗಲ್‌ನಲ್ಲಿ  ಪ್ರವಾಸಿಗರು ಹುಡುಕಿದ ಜಾಗತಿಕ ಟಾಪ್‌ 10 ಪಟ್ಟಿಯಲ್ಲಿ ಕರ್ನಾಟಕದ ಸ್ಥಳವೂ ಇದೆ!

santosh trophy karnataka


ಟೆನಿಸ್ ಬದುಕಿಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

ಭಾರತ ಟೆನಿಸ್‌ ಲೋಕದಲ್ಲಿ ದಶಕಗಳ ಕಾಲ ಮಿಂಚಿದ್ದ ಮೂಗುತಿ ಸುಂದರಿ ಖ್ಯಾತಿಯ ಸಾನಿಯಾ ಮಿರ್ಜಾ ಅವರು ಜನವರಿಯ ಆರಂಭದಲ್ಲೇ ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸುವ ತೀರ್ಮಾನ ಪ್ರಕಟಿಸಿದ್ದರು. 2023ರ ಆಸ್ಟ್ರೇಲಿಯನ್ ಓಪನ್​ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್​ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್​ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್​ ಅಪ್ ಆದರು.

santosh trophy karnataka


ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ಚಾಲನೆ

ಪುರುಷರ ಐಪಿಎಲ್ ಮಾದರಿಯಲ್ಲೇ ಮಹಿಳಾ ಕ್ರಿಕೆಟ್​ ಆಟಗಾರ್ತಿಯರಿಗೂ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ಇದೇ ವರ್ಷ ಚಾಲನೆ ನೀಡಲಾಯಿತು. ಒಟ್ಟು 5 ತಂಡಗಳು ಈ ಟೂರ್ನಿಯಲ್ಲಿ ಆಡಲಿಳಿದ್ದವು. 23 ದಿನಗಳ ಕಾಲ ನಡೆದ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇದನ್ನೂ ಓದಿ Year Ender 2023: ಈ ವರ್ಷ ಕಲಿತ ಆರೋಗ್ಯ ಪಾಠಗಳ ಮುಖ್ಯಾಂಶಗಳೇನು?

santosh trophy karnataka


54 ವರ್ಷಗಳ ಬಳಿಕ ಫುಟ್ಬಾಲ್ ಚಾಂಪಿಯನ್‌ ಪಟ್ಟ ಅಲಂಕರಿಸಿದ ಕರ್ನಾಟಕ

ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಬರೋಬ್ಬರಿ 54 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ಮೇಘಾಲಯ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ಸಾಧಿಸಿದ ಕರ್ನಾಟಕ ತಂಡವು ಒಟ್ಟಾರೆ 5ನೇ ಟ್ರೋಫಿ ಗೆದ್ದ ಸಾಧನೆ ಮಾಡಿತು. ಈ ಹಿಂದೆ ಮೈಸೂರು ಸಂಸ್ಥಾನವಿದ್ದಾಗ ರಾಜ್ಯ 4 ಬಾರಿ ಟ್ರೋಫಿ ಎತ್ತಿಹಿಡಿದಿತ್ತು. ಇದಾದ ಬಳಿಕ ಕಪ್​ ಒಲಿದಿರಲಿಲ್ಲ. ಅಂತೂ 54 ವರ್ಷಗಳ ಬಳಿಕ ಮತ್ತೆ ಕಪ್​ ಗೆದ್ದ ಸಾಧನೆ ಮಾಡಿತ್ತು.

santosh trophy karnataka
Exit mobile version