ಬೆಂಗಳೂರು: 2023ನೇ ವರ್ಷ(Year Ender 2023) ಇನ್ನೇನು ಮುಗಿಯುತ್ತಾ ಬಂದಿದೆ. ಈ ವರ್ಷ ಕ್ರಿಕೆಟ್ ರಂಗದಲ್ಲಿ ಅನೇಕ ದಾಖಲೆಗಳು ನಿಮಾರ್ಣವಾಗಿದೆ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿಯೂ ಈ ವರ್ಷ ಅತ್ಯಧಿಕ ರನ್ಗಳಿಸಿದ(Most Runs in 2023 Across All Formats) ಟಾಪ್ 10 ಆಟಗಾರರು ಯಾರು?, ಅವರ ಸಾಧನೆ ಏನು? ಸಂಪೂರ್ಣ ಮಾಹಿತಿಯೊಂದು ಇಲ್ಲಿದೆ.
ಶುಭಮನ್ ಗಿಲ್
ಭಾರತ ತಂಡ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ಈ ವರ್ಷದ ಅತ್ಯಧಿಕ ರನ್ ಗಳಿಸಿದ ಸಾಧಕನಾಗಿದ್ದಾರೆ. ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 50 ಇನಿಂಗ್ಸ್ ಆಡಿರುವ ಬಲಗೈ ಬ್ಯಾಟರ್ ಗಿಲ್ 2126 ರನ್ ಬಾರಿಸಿದ್ದಾರೆ. 208 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 7 ಶತಕ ಮತ್ತು 10 ಅರ್ಧಶತಕ ದಾಖಲಾಗಿದೆ.
ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರು ವರ್ಷದ ಅತ್ಯಧಿಕ ರನ್ ಗಳಿಸಿದ 2ನೇ ಆಟಗಾರನಾಗಿದ್ದಾರೆ. ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿಯೂ ಮಿಚೆಲ್ ಬಹುಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು. ಈ ವರ್ಷ 52 ಇನಿಂಗ್ಸ್ ಆಡಇರುವ ಅವರು ಒಟ್ಟು 41.61 ಸ್ಟ್ರೈಕ್ ರೇಟ್ನೊಂದಿಗೆ 1956 ರನ್ ಗಳಿಸಿದ್ದಾರೆ. 134 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಒಟ್ಟು 6 ಶತಕ ಮತ್ತು 9 ಅರ್ಧಶತಕ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ರನ್ ಮೆಷಿನ್ ಖ್ಯಾತಿಯ ಟೀಮ್ ಇಂಡಿಯಾದ ವಿರಾಟ್ಗ ಕೊಹ್ಲಿ ಸದ್ಯ ಈ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಈ ಸ್ಥಾನದಿಂದ ಮೇಲೇರುವ ಅವಕಾಶ ಇದೆ. ಏಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಒಂದು ಪಂದ್ಯ ಇದೇ ವರ್ಷ ಕೊನೆಗೊಳ್ಳಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಅತ್ಯಧಿಕ ರನ್ಗಳಿಸಿದರೆ ಅವರಿಗೆ ಮೇಲಿನ ಕ್ರಮಾಂಕಕ್ಕೇರಬಹುದು. ಸದ್ಯ ಕೊಹ್ಲಿ 34 ಇನಿಂಗ್ಸ್ ಆಡಿ 1934 ರನ್ ಬಾರಿಸಿದ್ದಾರೆ. 186 ವೈಯಕ್ತಿಕ ಗರಿಷ್ಠ ರನ್. 8 ಶತಕ ಮತ್ತು 9 ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ Year Ender 2023: ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಸಾಧನೆ
ರೋಹಿತ್ ಶರ್ಮ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಸದ್ಯ 37 ಇನಿಂಗ್ಸ್ಗಳನ್ನು ಆಡಿ 1795 ರನ್ ಬಾರಿಸಿದ್ದಾರೆ. 131 ವೈಯಕ್ತಿಕ ಗರಿಷ್ಠ ರನ್. 4 ಶತಕ ಮತ್ತು 11 ಅರ್ಧಶತಕ ಒಳಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಇರುವ ಕಾರಣ ರೋಹಿತ್ಗೂ ಈ ಸ್ಥಾನದಿಂದ ಮೇಲೇರುವ ಅವಕಾಶ ಇದೆ.
ಕುಸಾಲ್ ಮೆಂಡಿಸ್
ಶ್ರೀಲಂಕಾದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಕುಸಾಲ್ ಮೆಂಡಿಸ್ ಅವರು ಈ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. 46 ಇನಿಂಗ್ಸ್ ಆಡಿ 1690 ರನ್ ಬಾರಿಸಿದ್ದಾರೆ. 39.30 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 245 ವೈಯಕ್ತಿಕ ಗರಿಷ್ಠ ರನ್. 3 ಶತಕ ಮತ್ತು 10 ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ Year Ender 2023: ನೀಗಿದ ಕೊಹ್ಲಿ ಟೆಸ್ಟ್ ಶತಕದ ಬರ, ಟೆನಿಸ್ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ…
ಟ್ರಾವಿಸ್ ಹೆಡ್
ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತದ ವಿಶ್ವಕಪ್ ಟ್ರೋಫಿಗೆ ಕೊಳ್ಳಿ ಇಟ್ಟಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರು ಈ ವರ್ಷ ಒಟ್ಟು 1681 ರನ್ ಗಳಿಸಿದ್ದಾರೆ. ಆಡಿದ್ದು 40 ಇನಿಂಗ್ಸ್. 163 ವೈಯಕ್ತಿಕ ಗರಿಷ್ಠ ಮೊತ್ತ. 3 ಶತಕ ಮತ್ತು 9 ಅರ್ಧಶತಕ ಒಳಗೊಂಡಿದೆ.
ಇದನ್ನೂ ಓದಿ Year Ender 2023 : ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾ ವೈಭವ ಈ ರೀತಿ ಇತ್ತು
ಮುಹಮ್ಮದ್ ವಸೀಂ
ಯುಎಇ ತಂಡದ ಮುಹಮ್ಮದ್ ವಸೀಂ ಅವರು ಈ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. 45 ಇನಿಂಗ್ಸ್ ಆಡಿ 1588 ರನ್ ಬಾರಿಸಿದ್ದಾರೆ. 119 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 1 ಶತಕ ಮತ್ತು 10 ಅರ್ಧಶತಕ ದಾಖಲಾಗಿದೆ.
ನಜ್ಮುಲ್ ಹೊಸೈನ್ ಶಾಂಟೋ
ಬಾಂಗ್ಲಾದೇಶದ ಯುವ ಎಡಗೈ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೋ ಅವರು ಈ ವರ್ಷ 41 ಇನಿಂಗ್ಸ್ಗಳನ್ನು ಆಡಿದ್ದು, 1563 ರನ್ ಕಲೆಹಾಕಿದ್ದಾರೆ. 42.24 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅವರು 5 ಶತಕ ಮತ್ತು 8 ಅರ್ಧಶತಕ ಬಾರಿಸಿದ್ದಾರೆ. 146 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಮಾರ್ನಸ್ ಲಬುಶೇನ್
ಆಸ್ಟ್ರೇಲಿಯಾ ತಂಡ ಅನುಭವಿ ಮಧ್ಯಮ ಕ್ರಮಾಂಕದ ಆಟಗಾರ ಮಾರ್ನಸ್ ಲಬುಶೇನ್ ಅವರು 43 ಇನಿಂಗ್ಸ್ ಆಡಿ 1562 ರನ್ ಬಾರಿಸಿದ್ದಾರೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಜೇಯ 58 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವರ್ಷ ಒಟ್ಟು 2 ಶತಕ ಮತ್ತು 8 ಅರ್ಧಶತಕ ಬಾರಿಸಿದ್ದಾರೆ. 124 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಏಡನ್ ಮಾರ್ಕ್ರಮ್
ದಕ್ಷಿಣ ಆಫ್ರಿಕಾದ ಭವಿಷ್ಯದ ಆಟಗಾರ ಏಡನ್ ಮಾರ್ಕ್ರಮ್ ಅವರು ಈ ವರ್ಷದ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 36 ಇನಿಂಗ್ಸ್ ಆಡಿ 1548 ರನ್ ಬಾರಿಸಿದ್ದಾರೆ. 175 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಒಟ್ಟು 4 ಶತಕ ಮತ್ತು 6 ಅರ್ಧಶತಕ ಬಾರಿಸಿದ್ದಾರೆ.