Site icon Vistara News

Yuvraj Singh: ಲೋಕಸಭಾ ಸ್ಪರ್ಧೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಯುವರಾಜ್​ ಸಿಂಗ್​

Yuvraj Singh

ಮುಂಬಯಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ(Lok Sabha polls 2024) ಮಾಜಿ ಕ್ರಿಕೆಟರ್‌ ಯುವರಾಜ್‌ ಸಿಂಗ್‌(Yuvraj Singh) ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೆಲವು ದಿನಗಳಿಂದ ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಯುವರಾಜ್​ ಸಿಂಗ್ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಯುವರಾಜ್​ ಸಿಂಗ್​ ಅವರು ಪಂಜಾಬ್​ನ ಬಿಜೆಪಿ(Bharatiya Janata Party) ಅಧ್ಯಕ್ಷ ಸುನೀಲ್​ ಜೊಹಾರ್(Sunil Jakhar)​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿರುವ ಯುವ ಲೀಡರ್​ ಒಬ್ಬರ ಸಂಪರ್ಕದಲ್ಲಿದ್ದಾರೆ ಎಂದು ನ್ಯೂಸ್​ 18 ವರದಿ ಮಾಡಿತ್ತು. ಅವರು ಶೀಘ್ರದಲ್ಲೇ ಬಿಜೆಪಿ ಸೇರಿ ಗುರುದಾಸ್‌ಪುರದಿಂದ(Gurdaspur) ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಎಲ್ಲ ಊಹಾಪೋಹ ಸುದ್ದಿಗಳಿಗೆ ಯುವಿ ಈಗ ಸ್ಪಷ್ಟನೆ ನೀಡಿದ್ದಾರೆ.

​”ಗುರುದಾಸ್‌ಪುರದಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಸುಳ್ಳು ಸುದ್ದಿ. ನಾನು ಸ್ಪರ್ಧಿಸುವುದಿಲ್ಲ. ಆದರೆ, ನಾನು ವಿವಿಧ ರೀತಿಯಲ್ಲಿ ಜನರನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ಬಯಸುತ್ತೇನೆ. ಇದನ್ನು YOUWECAN ಫೌಂಡೇಷನ್ ಮೂಲಕ ಮುಂದುವರಿಸುತ್ತೇನೆ” ಎಂದು ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ X ಮೂಲಕ ಹಂಚಿಕೊಂಡಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಯುವರಾಜ್​ ಸಿಂಗ್​ಗೆ ಬಿಜೆಪಿ ಟಿಕೆಟ್​ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರಲು ಪ್ರಮುಖ ಕಾರಣವೆಂದರೆ, ಇತ್ತೀಚೆಗೆ ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಭೇಟಿಯಾಗಿದ್ದರು. ಹೀಗಾಗಿ, ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿತ್ತು. ಇದೀಗ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎನ್ನುವುದನ್ನು ಸ್ವತಃ ಯುವಿಯೇ ಖಚಿತಪಡಿಸಿದ್ದಾರೆ.

ಇದನ್ನೂ ಓದಿ Gautam Gambhir: ರಾಜಕೀಯಕ್ಕೆ ಗುಡ್‌ಬೈ ಹೇಳಿದ ಗೌತಮ್‌ ಗಂಭೀರ್‌; ಮಾಜಿ ಕ್ರಿಕೆಟಿಗನ ಈ ನಿರ್ಧಾರಕ್ಕೆ ಕಾರಣವೇನು?

ಭಾರತದ ಸುದೀರ್ಘ‌ ವಿಶ್ವಕಪ್‌ ಬರಗಾಲವನ್ನು ನೀಗಿಸಿದ್ದು 2011ರ ಪಂದ್ಯಾವಳಿ(2011 World Cup). ಇದು ಯುವರಾಜ್‌ ಪಾಲಿಗೆ ಹೆಚ್ಚು ಸ್ಮರಣೀಯ. ಒಂದು ಶತಕ, 4 ಅರ್ಧ ಶತಕ, 15 ವಿಕೆಟ್‌, 4 ಪಂದ್ಯಶ್ರೇಷ್ಠ ಪ್ರಶಸ್ತಿ, ಕೊನೆಗೆ ಸರಣಿಶ್ರೇಷ್ಠ ಸಮ್ಮಾನ! ವಿಶ್ವಕಪ್‌ ಕೂಟವೊಂದರಲ್ಲಿ 300 ಪ್ಲಸ್‌ ರನ್‌ ಜತೆಗೆ 15 ವಿಕೆಟ್‌ ಸಂಪಾದಿಸಿದ ಮೊದಲ ಆಲ್‌ರೌಂಡರ್‌ ಎಂಬ ಗರಿಮೆ. ಯುವರಾಜ್‌ ಸಿಂಗ್‌ ನೈಜ ವರ್ಲ್ಡ್ ಚಾಂಪಿಯನ್‌ ಆಗಿ ಮೆರೆದಿದ್ದರು.

Exit mobile version