Site icon Vistara News

IPL 2024 : ಶೇನ್​ ವಾರ್ನ್​ ದಾಖಲೆ ಮುರಿದ ಯಜ್ವೇಂದ್ರ ಚಹಲ್​

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ರಾಜಸ್ಥಾನ್ ರಾಯಲ್ಸ್ (Rajasthan Royals) ಸ್ಪಿನ್ನರ್ ಯಜುವೇಂದ್ರ ಚಹಲ್ ನೂತನ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅವರು ದಿವಂಗತ ಕ್ರಿಕೆಟಿಗರ್​ ಶೇನ್ ವಾರ್ನ್ ದಾಖಲೆ ಮುರಿದಿದ್ದಾರೆ. ಇದೀಗ ಯಜುವೇಂದ್ರ ಚಾಹಲ್ ರಾಜಸ್ಥಾನ್ ರಾಯಲ್ಸ್ ಪರ ಅತ್ಯಂತ ಯಶಸ್ವಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದೆ. ಈ ಮೂಲಕ ಈ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳ ಬಳಿಕ ಸೋಲಿನ ಸುಳಿಗೆ ಸಿಲುಕಿದೆ. ಜೈಪುರದ ಸವಾಯಿ ಮಾನ್​ಸಿಂಗ್​​ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 10) ನಡೆದ ಪಂದ್ಯದಲ್ಲಿ ರಾಯಲ್ಸ್ ತಂಡ ಟೈಟಾನ್ಸ್ ವಿರುದ್ಧ 3 ವಿಕೆಟ್​ಗಳ ಸೋಲನುಭವಿಸಿದೆ. ತವರು ತಂಡವು ಒಟ್ಟು 196 ರನ್ ಗಳನ್ನು ರಕ್ಷಿಸಲು ವಿಫಲವಾಯಿತು.

ಶೇನ್ ವಾರ್ನ್ ದಾಖಲೆ ಮುರಿದ ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್ ತಮ್ಮ ನಾಲ್ಕು ಓವರ್​ಗಳಲ್ಲಿ 43 ರನ್​ಗಳಿಗೆ ಎರಡು ವಿಕೆಟ್​ ಪಡೆಯುವ ಮೂಲಕ ತಮ್ಮ ಬೌಲಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಬಲಗೈ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿ, ಪಂದ್ಯಾವಳಿಯ ಇತಿಹಾಸದಲ್ಲಿ ಜೈಪುರ ಮೂಲದ ಫ್ರಾಂಚೈಸಿಗಾಗಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚಹಲ್ ತಮ್ಮ ಎರಡನೇ ವಿಕೆಟ್​​ನೊಂದಿಗೆ ಸ್ಪಿನ್ನರ್​ಗಳ ಪೈಕಿ ರಾಜಸ್ಥಾನ್ ರಾಯಲ್ಸ್​​ನ ಅಗ್ರ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಡೆದರು. ಐಪಿಎಲ್​​ನಲ್ಲಿ ರಾಜಸ್ಥಾನ್ ರಾಯಲ್ಸ್​ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ 33 ವರ್ಷದ ಚಹಲ್​​ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

2008ರಲ್ಲಿ ಆರ್​ಆರ್​​ ಪರ ಚೊಚ್ಚಲ ಐಪಿಎಲ್ ಚಾಂಪಿಯನ್ ಆಗಿದ್ದ ವಾರ್ನ್, 55 ಪಂದ್ಯಗಳಿಂದ 25.38ರ ಸರಾಸರಿಯಲ್ಲಿ 57 ವಿಕೆಟ್ ಕಬಳಿಸಿದ್ದರು. ಲೀಗ್​ನಲ್ಲಿ 36ನೇ ಪಂದ್ಯವನ್ನಾಡಿರುವ ಚಹಲ್ ರಾಯಲ್ಸ್ ಪರ 58 ವಿಕೆಟ್​​ಗಳ ಮೈಲಿಗಲ್ಲನ್ನು ತಲುಪಿದ್ದಾರೆ.

ಇದನ್ನೂ ಓದಿ: IPL 2024 : ಬೆಟ್ಟಿಂಗ್ ದಂಧೆ ಭೇದಿಸಿದ ಹೈದರಾಬಾದ್ ಪೊಲೀಸರು, 40 ಲಕ್ಷ ರೂ. ವಶ

ಐಪಿಎಲ್​ನಲ್ಲಿ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸಿದ್ಧಾರ್ಥ್ ತ್ರಿವೇದಿ (65 ವಿಕೆಟ್) ಮತ್ತು ಶೇನ್ ವ್ಯಾಟ್ಸನ್ (61 ವಿಕೆಟ್) ನಂತರದ ಸ್ಥಾನದಲ್ಲಿದ್ದಾರೆ. ತ್ರಿವೇದಿ ಮತ್ತು ವ್ಯಾಟ್ಸನ್ ಹೊರತುಪಡಿಸಿ, ಚಹಲ್ ಮತ್ತು ವಾರ್ನ್ ಮಾತ್ರ ಐಪಿಎಲ್​​ನಲ್ಲಿ ರಾಜಸ್ಥಾನ್​ ಪರ 50 ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳು.

27 ವಿಕೆಟ್ ಪಡೆದ ಚಹಲ್​

ಚಹಲ್ 2022 ರಲ್ಲಿ ರಾಯಲ್ಸ್ ಪರ ತಮ್ಮ ಮೊದಲ ಋತುವಿನಲ್ಲಿ 27 ಬ್ಯಾಟರ್​ಗಳನ್ನು ಔಟ್ ಮಾಡುವ ಮೂಲಕ ಪರ್ಪಲ್ ಕ್ಯಾಪ್ ಪಡೆದಿದದರು.ಆರ್​ಆರ್​​ ತನ್ನ ಪ್ರಭಾವಶಾಲಿ ಪ್ರದರ್ಶನದ ಹೊರತಾಗಿಯೂ ಫೈನಲ್​ನಲ್ಲಿ ಗುಜರಾತ್ ವಿರುದ್ದ ಸೋತಿತ್ತು. ಮುಂದಿನ ಋತುವಿನಲ್ಲಿ ಅವರು ತಮ್ಮ ಫಾರ್ಮ್ ಅನ್ನು ಉಳಿಸಿಕೊಂಡರು, 21 ವಿಕೆಟ್​ಗಳನ್ನು ಪಡೆದಿದ್ದರು. ಅದೇ ರೀತಿ ಪ್ರಮುಖ ಬೌಲರ್​ ಆಗಿ ಸ್ಥಾನಪಡೆದುಕೊಂಡಿದ್ದಾರೆ.

2013 ರಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಪಾದಾರ್ಪಣೆ ಮಾಡಿದ ಚಹಲ್​ ಐಪಿಎಲ್​ನ 150 ಪಂದ್ಯಗಳಲ್ಲಿ 190 ಕ್ಕೂ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಪರ 113 ಪಂದ್ಯಗಳನ್ನು ಆಡಿರುವ ಅವರು ಐಪಿಎಲ್​ನಲ್ಲಿ 100 ಕ್ಕೂ ಹೆಚ್ಚು ವಿಕೆಟ್​ಗಳನ್ನು ಆ ತಂಡದ ಏಕೈಕ ಬೌಲರ್ ಆಗಿದ್ದಾರೆ.

Exit mobile version