ನವದೆಹಲಿ: ಖಾಸಗಿ ವಲಯದ ಟೆಲಿಕಾಂ ಸೇವೆ ಪೂರೈಕೆದಾರ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ (Airtel and Jio Offer) ಗ್ರಾಹಕರನ್ನು ಸೆಳೆಯುವುದಕ್ಕಾಗಿ ನಾನಾ ತಂತ್ರಗಳನ್ನು ಮಾಡುತ್ತವೆ. ಚಂದಾದಾರರನ್ನು ಸೆಳೆಯುವುದಕ್ಕಾಗಿ ಪ್ರೀಪೇಯ್ಡ್ ಪ್ಲಾನ್‌ಗಳಲ್ಲಿ ಸಾಕಷ್ಟು ಆಫರ್ಸ್ ನೀಡುತ್ತಿವೆ. ವಿಶೇಷವಾಗಿ ಡೇಟಾ ಬಳಕೆಗೆ ಸಂಬಂಧಿಸಿದಂತೆ ಆಫರ್ ಮಾಡಲಾಗುತ್ತಿದೆ. ಏರ್‌ಟೆಲ್ ಮತ್ತು ಜಿಯೋ ಎರಡೂ 2.5GB ದೈನಂದಿನ ಡೇಟಾ ಪ್ಲ್ಯಾನ್ ಗಳನ್ನು 30 ದಿನಗಳಿಂದ 1 ವರ್ಷದವರೆಗೆ ವ್ಯಾಲಿಡಿಟಿಯೊಂದಿಗೆ ಪಟ್ಟಿ ಮಾಡಿವೆ. ಕರೆ, ಎಸ್ಸೆಮ್ಮೆಸ್ ಮತ್ತು ಒಟಿಟಿ ಪ್ರಯೋಜನಗಳ ಜೊತೆಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳನ್ನು ನೀಡುವ ಪ್ಲ್ಯಾನ್‌ಗಳನ್ನು ಜಿಯೋ ಮತ್ತು ಏರ್‌ಟೆಲ್ ಹೊಂದಿವೆ.
ಏರ್‌ಟೆಲ್‌ನ 999 ರೂ. ಪ್ಲ್ಯಾನ್ ನೋಡೋಣ ಬನ್ನಿ
ಈ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, ನಿತ್ಯ 110 ಎಸ್ಸೆಮ್ಮೆಸ್‌ಗಳ ಲಾಭ ದೊರೆಯುತ್ತದೆ. ಈ ಪ್ಲ್ಯಾನ್ 84 ದಿನಗಳ ಸಿಂಧುತ್ವವನ್ನು ಹೊಂದಿರುತ್ತದೆ. ಇಷ್ಟು ಮಾತ್ರವಲ್ಲದೇ, ತ್ರೈಮಾಸಿಕ ಪ್ಲ್ಯಾನ್‌ನಲ್ಲಿ, ಅರ್ಹ ಬಳಕೆದಾರರಿಗೆ 5ಜಿ ಡೇಟಾ ದೊರೆಯಲಿದೆ. 84 ದಿನಗಳವರೆಗೆ ಅಮೆಜಾನ್ ಪ್ರೈಮ್ ಮೇಂಬರ್‌ಶಿಪ್, ಏರ್‌ಟೆಲ್ ಎಕ್ಸ್‌ಟ್ರೀಮ್ ಆ್ಯಪ್ ಅಕ್ಸೆಸ್ ಸೇರಿದಂತೆ ಇನ್ನಿತರ ಪ್ರಯೋಜನಗಳು ದೊರೆಯಲಿವೆ.
ಏರ್‌ಟೆಲ್ 3359 ಪ್ಲ್ಯಾನ್‌ನಲ್ಲಿ ಸಖತ್ ಆಫರ್ಸ್
ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಪ್ರಯೋಜನಗಳು ದೊರೆಯುತ್ತವೆ. ಮಿತಿ ಇಲ್ಲದ ಕರೆಗಳು, ನಿತ್ಯ 100 ಎಸ್ಸೆಮ್ಮೆಸ್, ಜತೆಗೆ ನಿತ್ಯ 2.5 ಜಿಬಿ ಡೇಟಾ ದೊರೆಯಲಿದೆ. ಇದಕ್ಕೆ ಹೆಚ್ಚುವರಿಯಾಗಿ ಅರ್ಹ ಗ್ರಾಹಕರಿಗೆ 5ಜಿ ಡೇಟಾ ದೊರೆಯಲಿದೆ. ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಒಂದು ವರ್ಷದವರೆಗೆ ಸಿಗಲಿದೆ. ಅಪೋಲೋ ಸರ್ಕಲ್ ಲಾಭ ಸೇರಿದಂತೆ ಇನ್ನಿತರ ಪ್ರಯೋಜನಗಳು ಬಳಕೆದಾರರಿಗೆ ದೊರೆಯಲಿವೆ.
ಜಿಯೋ ಕೂಡ ಹಿಂದೆ ಬಿದ್ದಿಲ್ಲ, ಉಂಟು ಸಾಕಷ್ಟು ಪ್ರಯೋಜನ
ಜಿಯೋ ಕಂಪನಿಯ 399 ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ನಿತ್ಯ 2.5 ಜಿಬಿ ಮಿತಿಯೊಂದಿಗೆ 75 ಜಿಬಿ ಡೇಟಾ ದೊರೆಯಲಿದೆ. ಅನ್‌ಲಿಮಿಟೆಡ್ ಕಾಲಿಂಗ್ ಸೇವೆ ಜತೆಗೆ ನಿತ್ಯ 100 ಎಸ್ಸೆಮ್ಮೆಸ್ ದೊರೆಯಲಿದೆ. ಜಿಯೋಟಿವಿ, ಜಿಯೋ ಸಿನಿಮಾ, ಜಿಯೋಕ್ಲೌಡ್ ಒಳಗೊಂಡ ಜಿಯೋ ಆ್ಯಪ್ಸ್ ಚಂದಾದಾರಿಕೆ ದೊರೆಯಲಿದೆ. ವಿಶೇಷ ಎಂದರೆ, ಜಿಯೋ ಸಿನಿಮಾದಲ್ಲೀಗ ಐಪಿಎಲ್ 2023 ಲೈವ್ ಸ್ಟ್ರೀಮಿಂಗ್ ಆಗುತ್ತಿದೆ. ಹಾಗಾಗಿ, ಕ್ರಿಕೆಟ್ ಪ್ರಿಯರಿಗೆ ಈ ಪ್ಲ್ಯಾನ್ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದು. ಹಾಗೆಯೇ, ಅರ್ಹ ಬಳಕೆದಾರರು 5ಜಿ ಸೇವೆಯನ್ನೂ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Jio: 2026ರ ಹೊತ್ತಿಗೆ 50 ಕೋಟಿ ದಾಟಲಿದೆ ಜಿಯೋ ಚಂದಾದಾರರ ಸಂಖ್ಯೆ!
ಜಿಯೋ 899 ರೂ. ಪ್ಲ್ಯಾನ್ ಕೂಡ ಹೊಂದಿದೆ. ಈ ಪ್ಲ್ಯಾನ್ ವ್ಯಾಲಿಡಿಟಿ 90 ದಿನಗಳದ್ದಾಗಿದೆ. ನಿತ್ಯ 2.5 ಜಿಬಿಯಂತೆ 225 ಜಿಬಿ ಡೇಟಾ ದೊರೆಯುತ್ತದೆ. ಉಳಿದಂತೆ ಎಸ್ಸೆಮ್ಮೆಸ್ ಸೇರಿದಂತೆ ಇತ ಪ್ರಯೋಜನಗಳು ಬಳಕೆದಾರರಿಗೆ ದೊರೆಯುತ್ತವೆ. ಜಿಯೋ ಸಿನಿಮಾ ಸೇರಿದಂದೆ ಜಿಯೋ ಆ್ಯಪ್ ಅಕ್ಸೆಸ್ ಪಡೆಯಬಹುದು. 5ಜಿ ಡೇಟಾ ಕೂಡ ಲಭ್ಯವಾಗುತ್ತದೆ. ಜಿಯೋ 6 ತಿಂಗಳ ಪ್ಲ್ಯಾನ್ ಕೂಡ ಹೊಂದಿದೆ ಜಿಯೋ 2023 ರೂ. ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2.5 ಜಿಬಿಯಂತೆ 630 ಜಿಬಿ ಡೇಟಾ ಪಡೆದುಕೊಳ್ಳಲಿದ್ದಾರೆ. ಹಾಗೆಯೇ ಇತರ ಜಿಯೋ ಪ್ಲ್ಯಾನ್‌ಗಳಲ್ಲಿರುವ ಎಲ್ಲ ಪ್ರಯೋಜನಗಳು ಈ ಪ್ಲ್ಯಾನ್ ಬಳಕೆದಾರರಿಗೂ ಸಿಗಲಿವೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.