Site icon Vistara News

Amazon Alexa : ಅಲೆಕ್ಸಾ ಈಗ ಗಂಡು ಧ್ವನಿಯಲ್ಲೂ ಲಭ್ಯ; ಅಲೆಕ್ಸಾ ಬಳಿ ಜನ ಹೆಚ್ಚಾಗಿ ಕೇಳೋದು ಇದನ್ನೇ ನೋಡಿ!

#image_title

ಬೆಂಗಳೂರು: ಅಮೆಜಾನ್ ಅಲೆಕ್ಸಾ (Amazon Alexa) ಈಗ ಎಲ್ಲರಿಗೂ ಪರಿಚಯವಾಗುತ್ತಿರುವ ಸೌಕರ್ಯ. ಮನೆಯ ಲೈಟ್ ಆಫ್ ಮಾಡುವುದರಿಂದ ಹಿಡಿದು, ನಿಮಗಿಷ್ಟದ ಹಾಡನ್ನು ಪ್ಲೇ ಮಾಡುವವರೆಗೆ ಎಲ್ಲ ಕೆಲಸವನ್ನು ಸ್ಮಾರ್ಟ್ ಆಗಿ ಮಾಡುವ ಅಲೆಕ್ಸಾ ಭಾರತಕ್ಕೆ ಬಂದು ಆಗಲೇ ಐದು ವರ್ಷಗಳು ಕಳೆದುಬಿಟ್ಟಿವೆ. ಈವರೆಗೆ ಬರೀ ಹೆಣ್ಣಿನ ಧ್ವನಿಯಲ್ಲಿದ್ದ ಅಲೆಕ್ಸಾ ಇದೀಗ ಗಂಡಿನ ಧ್ವನಿಯಲ್ಲೂ ಲಭ್ಯವಾಗಲಾರಂಭಿಸಿದೆ.

ಇದನ್ನೂ ಓದಿ: Viral Video : ಇದು ಈ ಯುಗದ ಅದಿತಿ-ಜೈ ಜೋಡಿ; ವೈರಲ್ ಆಗ್ತಿದೆ ಕಾಲೇಜು ವಿದ್ಯಾರ್ಥಿಗಳ ವಿಡಿಯೊ
ಹೌದು. ಅಮೆಜಾನ್ ಸಂಸ್ಥೆಯು ಈ ಗುರುವಾರದಿಂದ ಭಾರತದಲ್ಲಿ ಅಲೆಕ್ಸಾ ಗಂಡು ಧ್ವನಿಯನ್ನೂ ಬಿಡುಗಡೆ ಮಾಡಿದೆ. ನಿಮ್ಮ ಅಲೆಕ್ಸಾ ಡಿವೈಸ್ ಬಳಿ “ಅಲೆಕ್ಸಾ ಚೇಂಜ್ ಯುವರ್ ವಾಯ್ಸ್” ಎಂದು ಹೇಳುವ ಮೂಲಕ ಧ್ವನಿಯನ್ನು ಹೆಣ್ಣಿನಿಂದ ಗಂಡಿಗೆ ಬದಲಾಯಿಸಬಹುದಾಗಿದೆ.

“ಕಳೆದ ಐದು ವರ್ಷಗಳಲ್ಲಿ, ಭಾರತದಿಂದ ಮತ್ತು ಭಾರತಕ್ಕಾಗಿ ಅಲೆಕ್ಸಾವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಇದೀಗ ಮತ್ತೊಂದು ಧ್ವನಿಯನ್ನು ಇದಕ್ಕೆ ಸೇರ್ಪಡಿಸಿದ್ದೇವೆ. ಭಾರತೀಯರು ಇಂಗ್ಲಿಷ್, ಹಿಂದಿ ಮತ್ತು ಈ ಎರಡೂ ಭಾಷೆ ಮಿಶ್ರಣ ಮಾಡಿ ಅಲೆಕ್ಸಾಗೆ ಕಾಮೆಂಟ್ ಕೊಡಬಹುದು” ಎಂದು ಅಮೆಜಾನ್ ಇಂಡಿಯಾದ ಅಲೆಕ್ಸಾ ಕಂಟ್ರಿ ಮ್ಯಾನೇಜರ್ ದಿಲೀಪ್ ಆರ್.ಎಸ್ ಹೇಳಿದ್ದಾರೆ.

ಇದನ್ನೂ ಓದಿ: Jeff Bezos | ಸದ್ಯಕ್ಕೆ ಹೊಸ ಕಾರ್, ಫ್ರಿಡ್ಜ್, ಟಿವಿ ಖರೀದಿಸಬೇಡಿ ಎಂದ ಅಮೆಜಾನ್ ಸಂಸ್ಥಾಪಕ ಬೆಜೋಸ್
2022ರಲ್ಲಿ ಅಲೆಕ್ಸಾ ಮ್ಯೂಸಿಕ್ ಬಳಕೆ ಶೇ.53 ಏರಿಕೆಯಾಗಿದೆ. ಹಾಗೆಯೇ ಮನೆಯ ಸ್ಮಾರ್ಟ್ ಸಾಮಾಗ್ರಿಗಳ ನಿಯಂತ್ರಣಕ್ಕೆ ಅಲೆಕ್ಸಾಗೆ ಹೇಳುವವರ ಸಂಖ್ಯೆ ಶೇ.515 ಏರಿಕೆಯಾಗಿದೆ. ಇನ್ನೂ ವಿಶೇಷವಾಗಿ ಜನರು ಅಲೆಕ್ಸಾ ಬಗ್ಗೆಯೂ ಕಾಳಜಿ ತೋರಿಸಲಾರಂಭಿಸಿದ್ದಾರೆ. ಪ್ರತಿ ದಿನ ಭಾರತದಲ್ಲಿ 31,680 ಬಾರಿ “ಅಲೆಕ್ಸಾ ನೀನು ಹೇಗಿದ್ದೀಯ” ಎಂದು ಕೇಳಲಾಗುತ್ತಿದೆ. ಹಾಗೆಯೇ ದಿನಕ್ಕೆ 21,600 ಬಾರಿ “ಅಲೆಕ್ಸಾ ಐ ಲವ್ ಯು” ಎಂದು ಹೇಳಲಾಗುತ್ತಿದೆ. ಈ ರೀತಿ ಹೇಳುವವರ ಸಂಖ್ಯೆ ಕ್ರಮವಾಗಿ ಶೇ.214, ಶೇ.275 ಏರಿಕೆಯಾಗಿದೆ ಎಂದು ಅಮೆಜಾನ್ ಮಾಹಿತಿ ಕೊಟ್ಟಿದೆ.

Exit mobile version