Site icon Vistara News

Mahindra PickUp : 2000 ಕೆ.ಜಿ ಸಾಮರ್ಥ್ಯದ ಮಹೀಂದ್ರಾ ಬೊಲೆರೊ ಮ್ಯಾಕ್ಸ್ ​ಪಿಕ್​ ಅಪ್​ ಬಿಡುಗಡೆ

#image_title

ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಏಪ್ರಿಲ್​ 25ರಂದು ಬೊಲೆರೊ ಮ್ಯಾಕ್ಸ್​ ಪಿಕ್​ಅಪ್​ ವಾಹನವನ್ನು ಭಾರತದ ರಸ್ತೆಗಿಳಿಸಿದೆ. 1.3 ಟನ್​ನಿಂದ 2 ಟನ್​ ಲೋಡ್​ ಸಾಗಿಸಬಹುದಾದ ಈ ಪಿಕ್​ಅಪ್ ವಾಹನ ಎಚ್​ಡಿ ಹಾಗೂ ಸಿಟಿ ಎಂಬ ಎರಡು ಸೀರಿಸ್​ನಲ್ಲಿ ಲಭ್ಯವಿದೆ. 7.85 ಲಕ್ಷ ರೂಪಾಯಿ (ಎಕ್ಸ್​ ಶೋರೂಮ್​) ಆರಂಭಿಕ ಬೆಲೆ ನಿಗದಿ ಮಾಡಲಾಗಿದ್ದು, ಗ್ರಾಹಕರು 24,999 ರೂಪಾಯಿ ಡೌನ್​ಪೇಮೆಂಟ್​ ಮಾಡುವ ಮೂಲಕ ಬುಕ್​ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

2023ನೇ ಆವೃತ್ತಿಯ ಬೊಲೆರೊ ಮ್ಯಾಕ್ಸ್​ ಪಿಕ್​ ಅಪ್​ನ ಎರಡು ಸೀರಿಸ್​ಗಳು ಇಂತಿವೆ. ಎಚ್​ಡಿ ಸೀರಿಸ್​ನಲ್ಲಿ 2.0 ಲೀಟರ್​, 1.7 ಲೀಟರ್​, 1.3 ಲೀಟರ್​​ ಆಯ್ಕೆಯಿದ್ದರೆ, ಸಿಟಿ ಸೀರಿಸ್​ನಲ್ಲಿ 1.3, 1.4, 1.5 ಹಾಗೂ ಸಿಜಿ ಸಿಎನ್​ಜಿ ಎಂಬ ಆಯ್ಕೆಯನ್ನು ನೀಡಲಾಗಿದೆ. ಈ ರೇಂಜ್​ನ ಪಿಕ್​ಅಪ್​ನಲ್ಲಿ ಬೇರೆಬೇರೆ ಪ್ಲೇಲೋಡ್​ ಆಯ್ಕೆಯೂ ಇದೆ. ಗರಿಷ್ಠ 3050 ಎಮ್​ಎಮ್​ ಉದ್ದದ ಕಾರ್ಗೊ ಬೆಡ್ ಕೂಡ ನೀಡಲಾಗಿದೆ.

ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಲ್ಲ ಡ್ರೈವರ್​ ಸೀಟ್​, ಡಿಜಿಟಲ್​ ಇನ್​ಸ್ಟ್ರುಮೆಂಟ್​ ಕ್ಲಸ್ಟರ್​, 20 ಸಾವಿರ ಕಿಲೋ ಮೀಟರ್​ ಸರ್ವಿಸ್ ಇಂಟರ್ವಲ್​ ಹಾಗೂ ಎಲ್​ಇಡಿ ಟೇಲ್​ ಲ್ಯಾಂಪ್​ಗಳನ್ನು ನೀಡಲಾಗಿದೆ. ಅದೇ ರೀತಿ iMAXX ಕನೆಕ್ಟೆಡ್​ ಸೊಲ್ಯುಶನ್​ ಕೂಡ ನೀಡಲಾಗಿದ್ದು 50 ಫೀಚರ್​ಗಳನ್ನು ನೀಡಲಾಗಿದೆ. ರೂಟ್​ ಪ್ಲಾನಿಂಗ್, ವೆಚ್ಚ ನಿರ್ವಹಣೆ, ವೆಹಿಕಲ್​ ಟ್ರ್ಯಾಕಿಂಗ್​, ಹೆಲ್ತ್​ ಮಾನಿಟರಿಂಗ್ ಹಾಗೂ ಜಿಯೊ ಫೆನ್ಸಿಂಗ್​ ಇದರಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ : SUV Cars : ಭಾರತದ ಮಾರುಕಟ್ಟೆಯಲ್ಲಿರುವ 1.5 ಲೀಟರ್​ ಡೀಸೆಲ್​ ಎಂಜಿನ್ ಇರುವ ಎಸ್​ಯುವಿ ಕಾರುಗಳು

ಮಹಿಂದ್ರಾ ಬೊಲೆರೊ ಮ್ಯಾಕ್ಸ್​ಪಿಕ್​ಅಪ್​ ವಾಹನ m2Di ಫೋರ್​ ಸಿಲಿಂಡರ್​ ಎಂಜಿನ್​ ಹೊಂದಿದೆ. ಇದು ಗರಿಷ್ಠ 80 ಬಿಎಚ್​ಪಿ ಪವರ್ ಹಾಗೂ 200 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್​ನ ಗೇರ್​ ಬಾಕ್ಸ್ ಇದೆ.

ಎಚ್​ಡಿ 2.0 ಲೀಟರ್ (Bolero MaXX Pik-Up HD 2.0L)

ಇದು ಬೊಲೆರೊ ಮ್ಯಾಕ್ಸ್​ಪಿಕ್​ ಅಪ್​ನಲ್ಲಿ ಗರಿಷ್ಠ ಲೋಡ್​ ಸಾಗಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿ 3050 ಕಾರ್ಗೊ ಬೆಡ್​ ಇದ್ದು ಗರಿಷ್ಠ 2 ಟನ್ ಲೋಡ್​ ಸಾಗಿಸಬಹುದು. ಈ ಪಿಕ್ಅಪ್​ಗೆ 7ಆರ್​16 ಟೈರ್​ ಬಳಸಲಾಗಿದೆ.

ಎಚ್​ಡಿ 1.7 ಎಲ್​, 1.7, 1.3 (Bolero MaXX Pik-Up HD 1.7L, 1.7 and 1.3)

ಇದು 3050 ಎಮ್​ಎಮ್​ ಕಾರ್ಗೊ ಬೆಡ್​ ಹೊಂದಿದೆ. ಇದರಲ್ಲಿ ಕ್ರಮವಾಗಿ 1.7 ಟನ್​ ಹಾಗೂ 1.3 ಟನ್​ ಸರಕು ಸಾಗಿಸಲು ಸಾಧ್ಯವಿದೆ.

ಸಿಟಿ 1.5, 1.4 (Bolero MaXX Pik-Up City 1.5 and 1.4)

ಸಿಟಿ ಸೀರಿಸ್​ನ ಬೊಲೆರೊ ಮ್ಯಾಕ್ಸ್​ಪಿಕ್​ ಅಪ್​ 1.5 ಹಾಗೂ 1.4 ಟನ್​ ಪ್ಲೇಲೋಡ್​ ಸಾಮರ್ಥ್ಯ ಹೊಂದಿದೆ. ಇದು 17.2 ಕಿಲೋ ಮೀಟರ್​ ಮೈಲೇಜ್​ ನೀಡುತ್ತದೆ. ಇದರ ಕಾರ್ಗೊ ಬೆಡ್​ 2,640 ಎಮ್​ಎಮ್​ ಉದ್ದವಿದೆ.

ಸಿಟಿ 1.3 Bolero MaXX Pik-Up 1.3

ಸಿಟಿ ಸೀರಿಸ್​ನ ಈ ಮಹಿಂದ್ರಾ ಬೊಲೆರೊ ಮ್ಯಾಕ್ಸ್​ ಪಿಕ್ಅಪ್​ನಲ್ಲಿ 1.3 ಟನ್​ ಸರಕು ಸಾಗಾಟ ಮಾಡಬಹುದು. ಇದು 2500 ಎಮ್​ಎಮ್​ ಕಾರ್ಗೊ ಬೆಡ್​ ಹೊಂದಿದೆ. ಈ ಪಿಕ್​ಅಪ್​ ಕೂಡ ಲೀಟರ್​ ಡೀಸೆಲ್​ಗೆ 17.2 ಕಿಲೋಮೀಟರ್​ ಮೈಲೇಜ್​ ನೀಡುತ್ತದೆ.

ಸಿಟಿ ಸಿಎನ್​ಜಿ Bolero MaXX Pik-Up City CNG

ಇದು ಪರಿಸರ ಸ್ನೇಹಿ ಮ್ಯಾಕ್ಸ್ ಪಿಕ್​ಅಪ್​ ಆಗಿದೆ. ಇದರ ಪ್ಲೇಲೋಡ್​ ಸಾಮರ್ಥ್ಯ 1.2 ಟನ್​. ಕಾರ್ಗೊ ಬೆಡ್​ 2500 ಎಮ್​ಎಮ್​ ಉದ್ದವಿದೆ.

Exit mobile version