ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್ ಎಚ್ಎಫ್ ಡೀಲಕ್ಸ್ನ 2023ನೇ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.
2023ರ ಎಚ್ಎಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್ ಸಿಗಲಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಹೀರೋ ಎಚ್ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್ಗೆ ಸಿದ್ಧಗೊಂಡಿದೆ. 4 ಸ್ಪೀಡ್ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.
ವೇರಿಯೆಂಟ್ಗಳು ಯಾವುವು?
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.