ನವದೆಹಲಿ: ಹೋಂಡಾ 2 ವ್ಹೀಲರ್ಸ್ 2023ರ ಡಿಯೋ ಸ್ಕೂಟರ್ ಅನ್ನು ಹಲವಾರು ಹೊಸ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಕೂಟರ್ನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.70,211 ಗಳಾಗಿದೆ. ಇದು ಹಳೆಯ ಮಾಡೆಲ್ಗಿಂತ 1586 ರೂಪಾಯಿ ದುಬಾರಿಯಾಗಿದೆ. ಒಬಿಡಿ2 ಮಾನದಂಡಗಳನ್ನು ಪೂರೈಸುವ ಪ್ರಮುಖ ಉದ್ದೇಶದಿಂದ ಸ್ಕೂಟರ್ ಅನ್ನು ನವೀಕರಿಸಲಾಗಿದೆ. ಅದರ ಹೊರತಾಗಿಯೂ ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಟಾಪ್ ಎಂಡ್ ವೇರಿಯೆಂಟ್ ಗ್ರಾಹಕರ ಸೇರಲಿದೆ. ಈ ಹಿಂದೆ ಲಭ್ಯವಿದ್ದ ಸ್ಟ್ಯಾಂಡರ್ಡ್ (ಎಸ್ಟಿಡಿ) ಮತ್ತು ಡಿಲಕ್ಸ್ (ಡಿಎಲ್ಎಕ್ಸ್) ಟ್ರಿಮ್ಗಳನ್ನು ಹೊಸ ಸ್ಮಾರ್ಟ್ ವೇರಿಯೆಂಟ್ನೊಂದಿಗೆ ಮಾರಲಾಗುತ್ತದೆ.
ನವೀಕರಿಸಿದ ಡಿಲಕ್ಸ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.74,212ಗಳಾದರೆ, ಸ್ಮಾರ್ಟ್ ಮಾದರಿಯ ಬೆಲೆಯು ರೂ.77,712ಗಳಾಗಿದೆ. ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೇರಿಯೆಟ್ಗಳು ಒಬಿಡಿ2 ಅಲ್ಲದ ಹಿಂದಿನ ವೇರಿಯೆಂಟ್ಗಳಿಗಿಂತ 1,586 ರೂಪಾಯಿ ದುಬಾರಿಯಾಗಿದೆ.
ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೇರಿಯೆಂಟ್ಗಳ ಬಾಡಿ ಗ್ರಾಫಿಕ್ಸ್ ಬದಲಾವಣೆ ಮಾಡಿರುವ ಜತೆಗೆ ಎಂಜಿನ್ ನವೀಕರಣಗಳನ್ನು ಪಡೆದುಕೊಂಡಿದೆ. ಹೋಂಡಾ ಬ್ರಾಂಡ್ನ ಎಚ್-ಸ್ಮಾರ್ಟ್ ರಿಮೋಟ್ ಕೀ ಆಧಾರಿತ ವ್ಯವಸ್ಥೆ ಡಿಯೊ ಅಭಿಮಾನಿಗಳಿಗೆ ಹೊಸ ಫೀಚರ್ ಎನಿಸಿಕೊಳ್ಳಲಿದೆ. ಇದರಿಂದ ಬಟನ್ ಒತ್ತುವ ಮೂಲಕ ಸ್ಕೂಟರ್ ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸಾಧ್ಯವಿದೆ. ಅದೇ ರೀತಿ ಕೀಯನ್ನು ಮ್ಯಾನುಯಲ್ ಆಗಿ ಬಳಸುವ ಅವಶ್ಯಕತೆಯೂ ಇರುವುದಿಲ್ಲ. ಅದೇ ರೀತಿ ಲೈಟ್ ಫ್ಲ್ಯಾಶ್ ಮಾಡುವ ಮೂಲಕ ಪಾರ್ಕಿಂಗ್ನಲ್ಲಿ ಸ್ಕೂಟರ್ ಪತ್ತೆ ಮಾಡುವುದಕ್ಕೂ ಅನುಕೂಲಕರವಾಗಿದೆ.
ಎಂಜಿನ್ ಬಗ್ಗೆ ಹೇಳುವುದಾದರೆ, 110 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟೆಡ್ ವ್ಯವಸ್ಥೆ ಹೊಂದಿದೆ. ಇದೀಗ ಒಬಿಡಿ -2 ಕಾಂಪ್ಲೈಂಟ್ ಆಗಿದೆ.. ನವೀಕರಿಸಿದ ಡಿಯೋ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಕ್ಸೊಮ್ 110 ಬೈಕಿಗೆ ಪೈಪೋಟಿ ನೀಡಲಿದೆ.
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುತ್ಸುಮು ಒಟಾನಿ, ಓಬಿಡಿ2 ಮಾನದಂಡ ಹೊಂದಿರು ಹೊಚ್ಚ ಹೊಸ 2023 ಡಿಯೊವನ್ನು ಬಿಡುಗಡೆ ಮಾಡುವುದರೊಂದಿಗೆ, ಅತ್ಯಾಕರ್ಷಕ ದಿಟ್ಟ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದಿಂದ ತುಂಬಿದ ಸ್ಕೂಟರ್ ಅನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಹೊಸ ಡಿಯೊ ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ನಮ್ಮ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಇದು ಅಸಾಧಾರಣ ಗ್ರಾಹಕ ಅನುಭವವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Hardik Pandya : ಹಾರ್ದಿಕ್ ಪಾಂಡ್ಯಗೆ ಹೊಸ ಆಫರ್, ಹ್ಯುಂಡೈಯ ಹೊಸ ಕಾರಿಗೆ ಅವರೇ ಬ್ರಾಂಡ್ ಅಂಬಾಸಿಡರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕರಾದ ಶ್ರೀ ಯೋಗೇಶ್ ಮಾಥುರ್, ಮೊದಲ ಬಾರಿಗೆ 2002ರಲ್ಲಿ ಪ್ರಾರಂಭವಾದಾಗಿನಿಂದ, ಹೋಂಡಾದ ಡಿಯೊದ ಮೂಲಕ ಸ್ಪೋರ್ಟಿ ಲುಕ್ನ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಇದೀಗ ಸ್ಮಾರ್ಟ್ ಕೀ ಸಿಸ್ಟಮ್ ಎಂಬ ಸುಧಾರಿತ ತಂತ್ರಜ್ಞಾನದೊಂದಿಗೆ ರಸ್ತೆಗಿಳಿಯುತ್ತಿದೆ ಎಂದು ಹೇಳಿದರು.