ಬೆಂಗಳೂರು : ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು (Honda Motorcycle) 2023ರ ಶೈನ್ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಹೊಸ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸಿರುವ ಬೈಕ್ ಆಗಿದೆ. ಇತ್ತೀಚೆಗೆ ಹೋಂಡಾ ತನ್ನ ಯೂನಿಕಾರ್ನ್ ಬೈಕ್ ಅನ್ನು ನವೀಕರಿಸಿ ರಸ್ತೆಗೆ ಇಳಿಸಿತ್ತು. ಇದೀಗ ಮತ್ತೊಂದು ಜನಪ್ರಿಯ ಬೈಕ್ ಶೈನ್ ಕೂಡ ಅಪ್ಡೇಟ್ ಅಗಿದೆ. ಈ ಕಮ್ಯೂಟರ್ ಮೋಟಾರ್ ಸೈಕಲ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಬೆಲೆ 79,800 ರೂ.ಗಳಿಂದ ಪ್ರಾರಂಭವಾಗುತ್ತವೆ.
ಎರಡು ವೇರಿಯೆಂಟ್ಗಳು ಒಂದೇ ರೀತಿಯ ಬಣ್ಣದ ಪ್ಯಾಲೆಟ್ ಅನ್ನು ಹಂಚಿಕೊಳ್ಳುತ್ತವೆ. ಇದು ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ, ರೆಬೆಲ್ ರೆಡ್ ಮೆಟಾಲಿಕ್ ಮತ್ತು ಡಿಸೆಂಟ್ ಬ್ಲೂ ಮೆಟಾಲಿಕ್ ಎಂಬ ಐದು ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಈ ಎರಡೂ ವೇರಿಯೆಂಟ್ಗಳು ಹೆಡ್ ಲೈಟ್ ಕೌಲ್, ಸೈಡ್ ಪ್ಯಾನೆಲ್ಗಳು ಮತ್ತು ಮಫ್ಲರ್ ಹೀಟ್ ಕವರ್ ಹೊಂದಿದೆ. ಬಾಡಿ-ಬಣ್ಣದ ಕೌಲ್ ಮತ್ತು ಫ್ರಂಟ್ ಫೆಂಡರ್ ಹೊಂದಿರುವ ಸಿಂಗಲ್-ಪಾಡ್ ಹೆಡ್ಲೈಟ್, ಸಿಂಗಲ್-ಪೀಸ್ ಸ್ಯಾಡಲ್, ಸೈಡ್-ಸ್ಲಂಗ್ ಎಕ್ಸಾಸ್ಟ್ ಮತ್ತು ಟ್ಯೂಬ್ ಲೆಸ್ ಟೈರ್ಗಳಲ್ಲಿ ಲಭ್ಯವಿದೆ. ಬೇಸ್ ಮಾದರಿಯ ಬೆಲೆಯು 79,800 ರೂಪಾಯಿಗಳಾಗಿದ್ದರೆ, ಡಿಸ್ಕ್ ಬ್ರೇಕ್ ಮಾದರಿಯ ಬೆಲೆಯು 83,800 ರೂಪಾಯಿ.
ಎರಡೂ ವೇರಿಯೆಂಟ್ಗಳಲ್ಲಿ ಎಂಜಿನ್ ಒಂದೇ ಆಗಿದೆ. 125 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿದೆ. ಇದು ವರ್ಧಿತ ಸ್ಮಾರ್ಟ್ ಪವರ್ (ಇಎಸ್ಪಿ) ಮತ್ತು ಹೋಂಡಾ ಎಸಿಜಿ ಸ್ಟಾರ್ಟರ್ ಅನ್ನು ಬಳಸುತ್ತವೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಎಂಜಿನ್ 7,500 ಆರ್ ಪಿಎಂನಲ್ಲಿ 10.6 ಬಿಎಚ್ಪಿ ಪವರ್ ಮತ್ತು 6,000 ಆರ್ ಪಿಎಂನಲ್ಲಿ 11 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ ಈಗ ಒಬಿಡಿ 2 ಮತ್ತು ಇ 20 ಇಂಧನಕ್ಕೆ ಕಾಂಪ್ಲೈಟ್ ಆಗಿದೆ.
ಇದನ್ನೂ ಓದಿ : Volkswagen : ಫೋಕ್ಸ್ವ್ಯಾಗನ್ ಕಾರುಗಳಿಗೆ ಭರ್ಜರಿ 1.4 ಲಕ್ಷ ರೂಪಾಯಿ ತನಕ ಡಿಸ್ಕೌಂಟ್!
ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಗಳು ಮತ್ತು ಐದು-ಹಂತದ ಅಡ್ಜಸ್ಟ್ ಮಾಡಬಹುದಾದ ಸ್ಪ್ರಿಂಗ್ ಸಸ್ಪೆನ್ಷನ್ ಇದು ಹೊಂದಿದೆ. ಎರಡೂ ಚಕ್ರಗಳಿಗೆ 130 ಎಂಎಂ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ. ಟಾಪ್ ವೇರಿಯೆಂಟ್ಗೆ 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ಹಿಂಭಾಗದ ಡ್ರಮ್ ಕೊಡಲಾಗಿದೆ. ಸಣ್ಣ ನವೀಕರಣಗಳನ್ನು ಹೊರತುಪಡಿಸಿ, ಬೈಕಿನಲ್ಲಿ ದೃಷ್ಟಿಗೋಚರವಾಗಿ ಅಥವಾ ಯಾಂತ್ರಿಕವಾಗಿ ಬೇರೆ ಯಾವುದೇ ಬದಲಾವಣೆಗಳಿಲ್ಲ.
10 ವರ್ಷದ ವಾರಂಟಿ
ಜಪಾನಿನ ಈ ಮೋಟಾರ್ ಸೈಕಲ್ ತಯಾರಕ ಕಂಪನಿ ಈಗ 10 ವರ್ಷಗಳ ವಾರಂಟಿ ಪ್ಯಾಕೇಜ್ ಆಯ್ಕೆಯನ್ನು ನೀಡುತ್ತಿದೆ. ಇದರಲ್ಲಿ ಗ್ರಾಹಕರು ಈಗ 3 ವರ್ಷಗಳ ಸ್ಟ್ಯಾಂಡರ್ಡ್ + 7 ವರ್ಷಗಳ ವಿಸ್ತೃತ ವಾರಂಟಿಯನ್ನು ಆರಿಸಿಕೊಳ್ಳಬಹುದು.