ನವ ದೆಹಲಿ : ಜಪಾನ್ ಮೂಲದ ಸೂಪರ್ ಬೈಕ್‌ಗಳ ತಯಾರಿಕಾ ಕಂಪನಿ ಕವಾಸಕಿ ೨೦೨೩ನೇ ಆವೃತ್ತಿಯ Kawasaki Z900 ಅನ್ನು ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್‌ನಲ್ಲಿ ಯಾವುದೇ ಮೆಕ್ಯಾನಿಕಲ್ ಅಪ್‌ಡೇಟ್ ಮಾಡಿಲ್ಲ. ಕೇವಲ ಕಾಸ್ಮೆಟಿಕ್ ಅಪ್‌ಡೇಟ್ ಮಾಡಲಾಗಿದ್ದು, ಪ್ರಮುಖವಾಗಿ ಡ್ಯುಯಲ್ ಟೋನ್ ಪೇಟಿಂಗ್ ಆಯ್ಕೆ ಕೊಡಲಾಗಿದೆ. ಮೆಟಾಲಿಕ್ ಪ್ಯಾಂಥಮ್, ಮೆಟಾಲಿಕ್ ಕಾರ್ಬನ್, ಮೆಟಾಲಿಕ್ ಗ್ರಾಫೆನ್ ಸ್ಟೀಲ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಬೈಕ್ ಬಿಡುಗಡೆಯಾಗಿದೆ. ಬೈಕ್‌ನ ಬೆಲೆ ೮.೯೩ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ (ಎಕ್ಸ್ ಶೋರೂಮ್ ಬೆಲೆ).
ಫ್ರೇಮ್ ಹಾಗೂ ಅಲಾಯ್ ವೀಲ್ ಅನ್ನು ಬಣ್ಣಕ್ಕೆ ತಕ್ಕ ಹಾಗೆ ಕೆಂಪು ಮತ್ತು ಹಸಿರು ಬಣ್ಣದ ಫ್ರೇಮ್ ಕೊಡಲಾಗಿದೆ. ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಮಸ್ಕ್ಯುಲರ್ ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್, ಹಾಗೂ ಝಡ್ ಶೇಪ್‌ನ ಎಲ್‌ಇಡಿ ಟೈಲ್ ಲ್ಯಾಂಪ್ ಕೊಡಲಾಗಿದೆ.
ಕವಾಸಕಿ ಝಡ್‌೯೦೦ ಬೈಕ್‌ನಲ್ಲಿ ೯೪೮ ಸಿಸಿ ಸಾಮರ್ಥ್ಯದ ೪ ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಇದ್ದು, ಬಿಎಸ್‌೬ ಮಾನದಂಡವನ್ನು ಹೊಂದಿದೆ. ಇದು ೯೦೦೦ ಆರ್‌ಪಿಎಮ್‌ನಲ್ಲಿ ೧೨೩.೬ ಬಿಎಚ್‌ಪಿ ಪವರ್ ಹಾಗೂ ೭೭೦೦ ಆರ್‌ಪಿಎಮ್‌ನಲ್ಲಿ ೯೮.೬ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಇದರಲ್ಲಿ ೬ ಸ್ಪೀಡ್‌ನ ಗೇರ್ ಬಾಕ್ಸ್ ಹೊಂದಿದೆ.
ಬೈಕ್ ಎರಡು ಪವರ್ ಮೋಡ್‌ನೊಂದಿಗೆ ಮಾರುಕಟ್ಟೆಗೆ ಇಳಿದಿದ್ದು, ಲೋ ಪವರ್ ಹಾಗೂ ಫುಲ್ ಪವರ್ ಎಂಬ ಎರಡು ಪವರ್ ಮೋಡ್‌ಗಳಿವೆ. ಸ್ಪೋರ್ಟ್ಸ್, ರೋಡ್, ರೇನ್ ಹಾಗೂ ರೈಡರ್ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿವೆ. ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಟಿಎಫ್‌ಟಿ ಸ್ಕ್ರೀನ್ ಅಳವಡಿಸಲಾಗಿದ್ದು, ಎಲ್ಲ ಮಾಹಿತಿಗಳನ್ನು ನೀಡುತ್ತದೆ. ಇದು ಬ್ಲೂಟೂತ್‌ನೊಂದಿಗೆ ಸಂಪರ್ಕ ಸಾಧಿಸುತ್ತದೆ.
ಮುಂಬದಿಯಲ್ಲಿ ೪೧ ಎಮ್‌ಎಮ್‌ನ ಯುಎಸ್‌ಡಿ ಫೋರ್ಕ್‌ಗಳು ಸಸ್ಪೆನ್ಷನ್ ಇದ್ದರೆ, ಹಿಂಬದಿಯಲ್ಲಿ ಮೋನೊ ಶಾಕ್ ಅಬಾಬ್ಸರ್ ನೀಡಲಾಗಿದೆ. ಮುಂಬದಿಯಲ್ಲಿ ೩೦೦ ಎಮ್‌ಎಮ್ ಡಿಸ್ಕ್ ಬ್ರೇಕ್ ಇದ್ದರೆ ಹಿಂಬದಿಯಲ್ಲಿ ೨೫೦ ಎಮ್‌ಎಮ್‌ನ ಡಿಸ್ಕ್ ಬ್ರೇಕ್ ಇದೆ.
ಇದನ್ನೂ ಓದಿ | XUV 400 | ಮಹೀಂದ್ರಾದ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ; ಏನೆಲ್ಲ ಫೀಚರ್‌ಗಳಿವೆ?