ನವ ದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ 2023ರ ಆವೃತ್ತಿಯ ಬಲೆನೊಗೆ ಹೊಸ ಫೀಚರ್ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಸುರಕ್ಷತಾ ಫೀಚರ್ಗಳು ಸೇರ್ಪಡೆಗೊಂಡಿವೆ. ಬಲೆನೊದ ಬೇಸ್ ಸಿಗ್ಮಾ ವೇರಿಯೆಂಟ್ ಹಲವಾರು ಅಪ್ಡೇಟ್ಗಳನ್ನು ಪಡೆದಿದೆ. ಸುಧಾರಿತ 2023 ಬಲೆನೊದ ವೀಡಿಯೊವನ್ನು ಇತ್ತೀಚೆಗೆ ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ. ಆ ಕಾರು ಆಕ್ಸೆಸರಿಗಳಿಂದ ಲೋಡ್ ಮಾಡಲಾಗಿದೆ
ಹೊಸ 2023 ಬಲೆನೊ ಸಿಗ್ಮಾ ವೇರಿಯೆಂಟ್ನ ಎಡಬ್ಲ್ಯುಡಿ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ. ವಿಡಿಯೊದಲ್ಲಿ ಕಾರಿನಲ್ಲಿ ಸುರಕ್ಷತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ಸಿಗ್ಮಾ ಈಗ ಹಿಂಭಾಗ ಮಧ್ಯದ ಸೀಟಿನಲ್ಲಿರುವವರಿಗೆ ಹೆಡ್ರೆಸ್ಟ್ ನೀಡುತ್ತಿದೆ. ಇದರಿಂದಾಗಿ ಹಿಂಭಾಗದ ಪ್ರಯಾಣಿಕರಿಗೆ ಪ್ರಯಾಣದ ಅವಧಿಯಲ್ಲಿ ಹೆಚ್ಚುವರಿ ರಕ್ಷಣಾ ಸುರಕ್ಷತೆ ನೀಡುತ್ತದೆ.
ರಸ್ತೆ ಸುರಕ್ಷತೆ ವಿಚಾರವಾಗಿ ಮಾರುತಿ ಸುಜುಕಿ ಕಂಪನಿಯು ಬಲೆನೊ ಕಾರಿನ ಹಿಂಬದಿ ಸೀಟ್ಗೆ 3-ಪಾಯಿಂಟ್ ಸೀಟ್ ಬೆಲ್ಟ್ ಸೇರಿಸಿದೆ. ಈ ಸುರಕ್ಷತಾ ವೈಶಿಷ್ಟ್ಯವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಇತ್ತೀಚಿನ ಘೋಷಣೆಯಾಗಿದೆ. ಹೊಸ ನಿಯಮದ ಪ್ರಕಾರ ಹಿಂಭಾಗದ ಎಲ್ಲಾ ಪ್ರಯಾಣಿಕರು 3 ಪಾಯಿಂಟ್ ಸೀಟ್ ಬೆಲ್ಟ್ ಅನ್ನು ಹಾಕುವುದು ಕಡ್ಡಾಯವಾಗಿದೆ. ಇದರಿಂದಾಗಿ 2025ರ ಅಂತ್ಯದ ವೇಳೆಗೆ ಭಾರತದಲ್ಲಿ ರಸ್ತೆ ಅಪಘಾತಗಳನ್ನು ಅರ್ಧದಷ್ಟು ಕಡಿಮೆ ಮಾಡುವ ದೊಡ್ಡ ಗುರಿ ಹೊಂದಿದೆ.
ಹೊಸ ಸಿಗ್ಮಾ ವೇರಿಯೆಂಟ್ ಇದು ಮ್ಯಾಟ್ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದೆ. ಆದರೂ ಫಾಗ್ ಲ್ಯಾಂಪ್ ಗಳನ್ನು ನೀಡಿಲ್ಲ. ಹೆಡ್ ಲ್ಯಾಂಪ್ಗಳು ಪ್ರೊಜೆಕ್ಟರ್ ಸೆಟಪ್ ನೊಂದಿಗೆ ಬರುತ್ತವೆ. ಆದರೆ ಅವು ಹಳದಿ ಬಣ್ಣವನ್ನು ಹೊಂದಿದೆ. ಸೈಡ್ ಪ್ರೊಫೈಲ್ನಲ್ಲಿ , ಸಿಗ್ಮಾ ವೇರಿಯೆಂಟ್ ಸಿಲ್ವರ್ ಬಣ್ಣದ ರಿಮ್ಗಳನ್ನು ಹೊಂದಿದೆ. ಶೋರೂಂನಿಂದ ಅಕ್ಸೆಸರಿ ಪ್ಯಾಕೇಜ್ ನ ಭಾಗವಾಗಿ ಸಿಲ್ವರ್ ವೀಲ್ ಕವರ್ ನೀಡಲಾಗಿದೆ. ಹೆಚ್ಚುವರಿಯಾಗಿ ಕಾರ್ಬನ್ ಫೈಬರ್ ಮಿರರ್ ಕ್ಯಾಪ್ಗಳು, ಕ್ರೋಮ್ ಡೋರ್ ಹ್ಯಾಂಡಲ್ಗಳು ವಿಂಡೋ ವೈಸರ್ಗಳು ಮತ್ತು ಕೆಳಭಾಗದಲ್ಲಿರುವ ಕ್ರೋಮ್ ಬಾರ್ನ ನೋಟವನ್ನು ಹೆಚ್ಚಿಸಿದೆ.
ಇದನ್ನೂ ಓದಿ : Tata Punch CNG : ಟಾಟಾ ಪಂಚ್ ಸಿಎನ್ಜಿ ಕಾರಿನಲ್ಲಿ ಇರಲಿದೆ ಸನ್ರೂಫ್, ಇನ್ನೇನಿವೆ ವೈಶಿಷ್ಟ್ಯಗಳು?
2023 ಬಲೆನೊ ಸಿಗ್ಮಾದ ಇಂಟೀಯರ್ನಲ್ಲಿ ಮಾರುತಿ ಸುಜುಕಿ ಕಂಪನಿಯು ಲೆದರ್ ಕವರ್ ಸೀಟ್ ನೀಡಿದೆ. ಪ್ರಯಾಣಿಕರಿಗೆ ಆಹ್ಲಾದಕರ ಮತ್ತು ಆರಾಮದಾಯಕ ಸ್ಥಳ ಕಲ್ಪಿಸಿದೆ. ಡ್ಯಾಶ್ಬೋರ್ಡ್ ಬೇಸಿಕ್ ಅಗಿದ್ದರೂ ಪ್ರಯಾಣಿಕರ ಅನುಕೂಲಕ್ಕಾಗಿ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯನ್ನು ಹೊಂದಿದೆ.
ಬಲೆನೊ ಸಿಗ್ಮಾ 1.2-ಲೀಟರ್ ಕೆ 12 ಸಿ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 90ಪಿಎಸ್ ಗರಿಷ್ಠ ಶಕ್ತಿ ಮತ್ತು 113 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ನೀಡುತ್ತಿದೆ.