ಬೆಂಗಳೂರು: ಕೇಂದ್ರ ಸರಕಾರ ಬಿಎಸ್6ನ ಸೆಕೆಂಡ್ ಸ್ಟೇಜ್ ಅನ್ನು ಏಪ್ರಿಲ್1ರಿಂದ ಕಡ್ಡಾಯವಾಗಿ ಜಾರಿ ಮಾಡುವಂತೆ ವಾಹನ ತಯಾರಿಕಾ ಕಂಪನಿಗಳಿಗೆ ಹೇಳಿದೆ. ಹೀಗಾಗಿ ಪ್ರತಿಯೊಂದು ಕಂಪನಿಗಳು ತಮ್ಮ ವಾಹನಗಳ ಅಪ್ಡೇಟೆಡ್ ಆವೃತ್ತಿಯನ್ನು ಬಿಡುತ್ತಿವೆ. ಅದೇ ರೀತಿ ಕಿಯಾ ಕಂಪನಿಯು ತನ್ನ ಎಸ್ಯುವಿ ಸೆಲ್ಟೋಸ್ನ (KIA Seltos) 2023ನೇ ಆವೃತ್ತಿಯನ್ನು ಮಾರುಕಟ್ಟೆಗೆ ಇಳಿಸಿದೆ. ಇದರಲ್ಲಿ ಕೆಲವೊಂದು ಅಪ್ಡೇಟ್ಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಈ ಹಿಂದೆ ಇದ್ದ 1.4 ಲೀಟರ್ನ ಟರ್ಬೊ ಎಂಜಿನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಜತೆಗೆ ಡಿಸಿಟಿ ಕ್ಲಚ್ ಕೂಡ ಇಲ್ಲ.
2023ನೇ ಅವೃತ್ತಿಯ ಸೆಲ್ಟೋಸ್ನಲ್ಲಿ ಆರ್ಡಿಇ ಎಮಿಷನ್ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಎಸ್ಯುವಿಯ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿ. ಕಿಯಾ ಸೆಲ್ಟೋಸ್ ಈಗ 1.5 ಲೀಟರ್ನ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.5 ಲೀಟರ್ನ ಟರ್ಬೊ ಡೀಸೆಲ್ ಎಂಜಿನ್ನೊಂದಿಗೆ ಮಾರುಕಟ್ಟೆಗೆ ಇಳಿದಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ 6 ಸ್ಪೀಡ್ನ ಮ್ಯಾನುಯಲ್ ಮತ್ತು ಸಿವಿಟಿ ಆಯ್ಕೆಗಳಿವೆ. ಅದೇ ರೀತಿ 1.5 ಲೀಟರ್ನ ಡೀಸೆಲ್ ಎಂಜಿನ್ 6 ಸ್ಪೀಡ್ನ ಐಎಮ್ಟಿ ಗೇರ್ಬಾಕ್ಸ್ ಹೊಂದಿದೆ. ಅದೇ ರೀತಿ 6 ಸ್ಪೀಡ್ನ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಕೂಡ ಹೊಂದಿದೆ. ಆದರೆ, ಡೀಸೆಲ್ನಲ್ಲಿ ಕೊಡುತ್ತಿದ್ದ 6 ಸ್ಪೀಡ್ನ ಮ್ಯಾನುಯಲ್ ಆಯ್ಕೆಯನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ : Honda Shine : ಸ್ಪ್ಲೆಂಡರ್ಗೆ ಪೈಪೋಟಿ ಕೊಡಲು ಬಂದಿದೆ 100 ಸಿಸಿಯ ಹೋಂಡಾ ಶೈನ್
2023ನೇ ಆವೃತ್ತಿಯಲ್ಲಿ ಹೊಸ 1.4 ಲೀಟರ್ನ ಪೆಟ್ರೋಲ್ ಟರ್ಬೊ ಎಂಜಿನ್ ನಿಲ್ಲಿಸಲಾಗಿದೆ. 1. 5 ಲೀಟರ್ನ ಟರ್ಬೊ ಎಂಜಿನ್ ಬರುವುದಾಗಿ ಹೇಳಲಾಗುತ್ತಿದೆ. ಆದರೆ, ಅದರು ಸದ್ಯಕ್ಕೆ ಲಭ್ಯವಿಲ್ಲ.
ದರ ಏರಿಕೆ
2023ರ ಸೆಲ್ಟೋಸ್ನಲ್ಲಿ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಅಯ್ಕೆಯನ್ನು ನೀಡಲಾಗಿದೆ. ಇದರಿಂದ ಕಾರಿನ ಮೈಲೇಜ್ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಲಿದೆ. ಹೊಸ ತಾಂತ್ರಿಕತೆಯ ಅಳವಡಿಕೆಯ ಪರಿಣಾಮವಾಗಿ ಕಾರಿನ ಬೆಲೆ 50 ಸಾವಿರ ರೂಪಾಯಿಯಷ್ಟು ಹೆಚ್ಚಳವಾಗಿದೆ. ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು ಟಾಪ್ ಎಂಡ್ ಕಾರಿನ ಬೆಲೆ 19.65 ಲಕ್ಷ ರೂಪಾಯಿಗಳು. ಟಾಪ್ ಎಂಡ್ನಲ್ಲಿ ಎಕ್ಸ್-ಎನ್ಲೈನ್ ಡೀಸೆಲ್ ಆಟೋಮ್ಯಾಟಿಕ್ ತಾಂತ್ರಿಕತೆಯಿದೆ.