ಬೆಂಗಳೂರು: ಟಾಟಾ ಮೋಟಾರ್ಸ್ 2023ರ ಮೇ ಆಯ್ದ ಕಾರುಗಳು ಮೇಲೆ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದೆ. ಟಿಯಾಗೊ, ಟಿಗೋರ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳಿಗೆ ವಿನಿಮಯ ಬೋನಸ್ ಅಥವಾ ಕಾರ್ಪೊರೇಟ್ ಆಫರ್ ಸೇರಿದಂತೆ ಹಲವು ಡಿಸ್ಕೌಂಟ್ಗಳನ್ನು ನೀಡಿದೆ. ಆದಾಗ್ಯೂ, ಪಂಚ್ ಮತ್ತು ನೆಕ್ಸಾನ್ಗೆ ಯಾವುದೇ ಆಫರ್ಗಳನ್ನು ಘೋಷಿಸಿಲ್ಲ. ಅಲ್ಲದೆ, ಇವಿ ವಾಹನಗಳಿಗೂ ಕೊಡುಗೆಗಳು ಅನ್ವಯವಾಗುತ್ತಿಲ್ಲ.
ಟಾಟಾ ಹ್ಯಾರಿಯರ್, ಸಫಾರಿ (Tata Harrier and Safari)
ಟಾಟಾದ ಪೂರ್ಣ ಪ್ರಮಾಣದ ಎಸ್ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಗೆ ಮೇ ತಿಂಗಳಲ್ಲಿ ಗರಿಷ್ಠ 35,000 ರೂ.ಗಳವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಎರಡೂ ಎಸ್ವಿಗಳಿಗೆ 25,000 ರೂ.ಗಳ ಎಕ್ಸ್ಚೇಂಜ್ ಬೋನ್ ಮತ್ತು 10,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿ ನೀಡಲಾಗಿದೆ. ಇದು ಎಲ್ಲ ವೇರಿಯೆಂಟ್ಗಳಿಗೆ ಲಭ್ಯ. ಆದರೆ, ಈ ಕಾರುಗಳೀಗೆ ಕಸ್ಟಮರ್ ಬೆನಿಫಿಟ್ ನೀಡಲಾಗಿಲ್ಲ.
ಸಫಾರಿಯಲ್ಲಿ 2.0 ಲೀಟರ್ನ ಡೀಸೆಲ್ ಎಂಜಿನ್ ಮಾತ್ರ ಲಭ್ಯವಿದ್ದು. 170 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 6ಸ್ಪೀಡ್ನ ಮ್ಯಾನುಯಲ್ ಹಾಗೂ ಅಷ್ಟೇ ಸ್ಪೀಡ್ನ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಇದು ಹ್ಯುಂಡೈ ಅಲ್ಕಾಜಾರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಎಕ್ಸ್ ಯುವಿ 700 ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಸಫಾರಿ ಕಾರನ್ನು ಹ್ಯಾರಿಯರ್ನ ಫ್ಲಾಟ್ಫಾರ್ಮ್ನಲ್ಲಿಯೇ ನಿರ್ಮಿಸಲಾಗಿದೆ. ಸಫಾರಿ ಕಾರಿನ ಬೆಲೆ ಪ್ರಸ್ತುತ 15.65 ಲಕ್ಷದಿಂದ 25.02 ಲಕ್ಷ ರೂ.ಗಳವರೆಗೆ ಇದೆ. ಹ್ಯಾರಿಯರ್ ಎಸ್ಯುವಿಯ ಬೆಲೆಯು ರೂ.15 ಲಕ್ಷದಿಂದ ಆರಂಭಗೊಂಡು ರೂ.24.07 ಲಕ್ಷ ರೂಪಾಯಿಗಳ ತನಕ ಇದೆ.
ಟಾಟಾ ಟಿಗೋರ್ Tata Tigor
ತನ್ನ ಸೆಡಾನ್ ಸೆಗ್ಮೆಂಟ್ನ ಕಾರು ಟಿಗೋರ್ ಮೇಲೆಯೂ 33,000 ರೂ.ಗಳವರೆಗೆ ಆಫರ್ ನೀಡುತ್ತಿದೆ ಟಾಟಾ ಮೋಟಾರ್ಸ್. ಪೆಟ್ರೋಲ್-ಎಎಂಟಿ ಜೊತೆಗೆ ಸಿಎನ್ಜಿ ವೇರಿಯೆಂಟ್ಗೂ 15,000 ರೂ.ಗಳ ಕಸ್ಟಮರ್ ಬೆನಿಫಿಟ್ ಹಾಗೂ 10,000 ರೂ.ಗಳ ಎಕ್ಸ್ಚೇಂಜ್ ಬೋನಸ್ ನೀಡಲಾಗಿದೆ. ಆಟೋಮ್ಯಾಟಿಕ್ ಹಾಗೂ ಮತ್ತು ಸಿಎನ್ಜಿ ವೇರಿಯೆಂಟ್ಗಳಿಗೆ ಒಟ್ಟು 25,000 ರೂಪಾಯಿ ಕೊಡುಗೆ ಇದೆ. ಪೆಟ್ರೋಲ್-ಎಂಟಿ ವೇರಿಯೆಂಟ್ಗಳಿಗೆ 20,000 ರೂಪಾಯಿ ಕಸ್ಟಮರ್ ಬೆನಿಫಿಟ್ ನೀಡಲಾಗಿದೆ. ಒಟ್ಟಾರೆ 30 ಸಾವಿರ ರೂಪಾಯಿ ಜತೆಗೆ ಪೆಟ್ರೊಲ್ ವೇರಿಯೆಂಟ್ಗೆ 3,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯೂ ನೀಡಲಾಗಿದೆ.
ಟಿಗೋರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 86 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ ಮ್ಯಾನುಯಲ್ ಅಥವಾ ಎಎಂಟಿ ಗೇರ್ಬಾಕ್ಸ್ ಆಯ್ಕೆ ಕೊಡಲಾಗಿದೆ. ಸಿಎನ್ಜಿಯಲ್ಲಿ ಚಾಲನೆ ಪಡೆಯುವಾಗ 70 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ನ ಮ್ಯಾನುಯಲ್ ಗೇರ್ಬಾಕ್ಸ್ ಮಾತ್ರ ಇದೆ. ಟಿಗೋರ್ ಸೆಡಾನ್ ಸೆಗ್ಮೆಂಟ್ನ ಹೋಂಡಾ ಅಮೇಜ್, ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಟಿಗೋರ್ ಕಾರಿನ ಬೆಲೆ 6.30 ಲಕ್ಷ ರೂ.ಗಳಿಂದ 8.90 ಲಕ್ಷ ರೂ.ಗಳವರೆಗೆ ಇದೆ.
ಟಾಟಾ ಟಿಯಾಗೊ Tata Tiago
ಹ್ಯಾಚ್ಬ್ಯಾಕ್ ಟಿಯಾಗೊ ಕಾರಿಗೆ 30,000 ರೂ.ಗಳವರೆಗೆ ಗರಿಷ್ಠ ಡಿಸ್ಕೌಂಟ್ ಘೋಷಿಸಲಾಗಿದೆ. ಇದರಲ್ಲಿ 15,000 ರೂ.ಗಳ ಗ್ರಾಹಕ ಯೋಜನೆಯ ಪ್ರಯೋಜನ (consumer scheme benefit) ಮತ್ತು ಎಲ್ಲ ವೇರಿಯೆಂಟ್ಗಳಿಗೆ 10,000 ರೂ.ಗಳ ವಿನಿಮಯ ರಿಯಾಯಿತಿ ನೀಡಲಾಗಿದೆ. ಎಕ್ಸ್ಟಿ, ಎಕ್ಸ್ಟಿ ರಿದಮ್, ಎನ್ಆರ್ಜಿ ಮ್ಯಾನುವಲ್ ಮತ್ತು ಎಕ್ಸ್ ಜಡ್ ಪ್ಲಸ್ ಪೆಟ್ರೋಲ್ ವೇರಿಯೆಂಟ್ಗಳಿಗೆ 20,000 ರೂ.ಗಳ ಗ್ರಾಹಕ ಪ್ರಯೋಜನಗಳನ್ನು (consumer scheme benefit) ಘೋಷಿಸಲಾಗಿದೆ. ಸಿಎನ್ಜಿ ವೇರಿಯೆಂಟ್ಗಳು 10,000 ರೂ.ಗಳ ಗ್ರಾಹಕ ಯೋಜನೆಯನ್ನು ಹೊಂದಿದ್ದು, ಒಟ್ಟು ಪ್ರಯೋಜನಗಳು 20,000 ರೂಪಾಯಿ ಆಗುತ್ತದೆ. ಹೆಚ್ಚುವರಿಯಾಗಿ 5,000 ರೂ.ಗಳವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.
ಇದನ್ನೂ ಓದಿ :Indian Cars : ರೆನೊ ಕ್ವಿಡ್, ಟ್ರೈಬರ್, ಕೈಗರ್ಗೆ ಭರ್ಜರಿ ಡಿಸ್ಕೌಂಟ್, ಇಲ್ಲಿದೆ ವಿವರ
ಟಿಯಾಗೊ ಕಾರಿನಲ್ಲಿ ಟಿಗೋರ್ನ ಎಂಜಿನ್ಗಳ ಆಯ್ಕೆಯನ್ನೇ ನೀಡಲಾಗಿದೆ. ಇದು ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ಇಗ್ನಿಸ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗೆ ಪೈಪೋಟಿ ನೀಡುತ್ತದೆ. ಟಿಯಾಗೊ ಕಾರಿನ ಬೆಲೆಯು ಪ್ರಸ್ತುತ ರೂ.5.60 ಲಕ್ಷ ರೂಪಾಯಿಂದ ಆರಂಭಗೊಂಡು ರೂ.8.11 ಲಕ್ಷ ರೂಪಾಯಿ ತನಕ ಇದೆ.
ಟಾಟಾ ಆಲ್ಟ್ರೋಜ್ (Tata Altroz)
ಟಾಟಾ ಮೋಟಾರ್ಸ್ ಆಲ್ಟ್ರೋಜ್ ಹ್ಯಾಚ್ ಬ್ಯಾಕ್ ಮೇಲೂ ಒಟ್ಟು 28,000 ರೂ.ಗಳವರೆಗೆ ಡಿಸ್ಕೌಂಟ್ ಘೋಷಿಸಿದೆ. ಪೆಟ್ರೋಲ್-ಡಿಸಿಟಿ ವೇರಿಯೆಂಟ್ಗಳು ಮತ್ತು ಎಲ್ಲಾ ಡೀಸೆಲ್ ರೂಪಾಂತರಗಳು 25,000 ರೂ.ಗಳ ರಿಯಾಯಿತಿ ಪಡೆಯುತ್ತಿದೆ. ಇದರಲ್ಲಿ 15,000 ರೂ.ಗಳ ಗ್ರಾಹಕ ಪ್ರಯೋಜನ ಯೋಜನೆ ಮತ್ತು 10,000 ರೂ.ಗಳ ವಿನಿಮಯ ರಿಯಾಯಿತಿ ಸೇರಿವೆ. , ಪೆಟ್ರೋಲ್-ಎಂಟಿ 10,000 ರೂಪಾಯಿ ಕಡಿಮೆ ಗ್ರಾಹಕ ಪ್ರಯೋಜನ ಯೋಜನೆಯನ್ನು ಹೊಂದಿದೆ.
ಹ್ಯುಂಡೈ ಐ20, ಟೊಯೊಟಾ ಗ್ಲಾಂಝಾ ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಲ್ಟ್ರೋಜ್ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 86 ಬಿಎಚ್ಪಿ ಪವರ್ 1.5 ಲೀಟರ್ ಡೀಸೆಲ್ ಎಂಜಿನ್ 90 ಬಿಎಚ್ಪಿ ಪವರ್ ಮತ್ತು 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 110 ಬಿಎಚ್ಪಿ ಪವರ್ ಪ್ರೊಡ್ಯೂಸ್ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ನ ಮ್ಯಾನುಯಲ್ ಗೇರ್ ಬಾಕ್ಸ್ ಆಯ್ಕೆಯಿದೆ. ಆಲ್ಟ್ರೋಜ್ ಪ್ರಸ್ತುತ 6.60 ಲಕ್ಷ ರೂ.ಗಳಿಂದ 10.50 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ.