ನವ ದೆಹಲಿ: ಕಾರಿನ ಬ್ಯಾಟರಿ ಡ್ರೈ ಆದಾಗ ಗೇರ್ ಮತ್ತು ಕ್ಲಚ್ ಲಿವರ್ ಹಿಡಿದು ಜರ್ಕ್ ಸ್ಟಾರ್ಟ್ ಮಾಡುವುದು ಆರಂಭಿಕ ಯೋಚನೆಯಾಗಿರುತ್ತದೆ. ಈ ಕೆಲಸವನ್ನು ಸಣ್ಣ ಹ್ಯಾಚ್ ಬ್ಯಾಕ್, ಕಾಂಪಾಕ್ಸ್ ಸೆಡಾನ್ ಅಥವಾ ಎಸ್ ಯುವಿಯೊಂದಿಗೆ ಸರಳವಾಗಿ ಮಾಡಬಹುದು. ಆದರೆ ಐಷಾರಾಮಿ ದೊಡ್ಡ ಗಾತ್ರದ ಕಾರುಗಳು ಪೂರ್ಣ ಪ್ರಮಾಣದ ಎಸ್ಯುವಿಗಳನ್ನು ಅಷ್ಟೊಂದು ಸುಲಭವಲ್ಲ. ಇಂಥ ಕಾರುಗಳನ್ನು ತಳ್ಳುವುದಕ್ಕೆ ಸಾಕಷ್ಟು ಜನ ಬೇಕಾಗುತ್ತದೆ. ನವದೆಹಲಿಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಕಾರಿನ ಬ್ಯಾಟರಿ ವಿಫಲವಾದ ನಂತರ ಅದನ್ನು ಸ್ಟಾರ್ಟ್ ಮಾಡಲು ಸುಮಾರು ಹತ್ತು ಜನರು ಅದನ್ನು ತಳ್ಳಿದ ಪ್ರಸಂಗ (Viral Video) ನಡೆದಿದೆ.
ಈ ಘಟನೆಯ ದೃಶ್ಯಗಳನ್ನು ಒಳಗೊಂಡಿರುವ ವಿಡಿಯೊ ‘supercars_in_india’ ಇನ್ಸ್ಟಾಗ್ರಾಮ್ ಪುಟದಲ್ಲಿ ಅಪ್ಲೋಡ್ ಆಗಿದೆ. ವಿಶ್ವದ ಅತ್ಯಂತ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ಪೂರ್ಣ ಗಾತ್ರದ ಎಸ್ ಯುವಿಗಳಲ್ಲಿ ಒಂದೆಂದು ಕರೆಯಲ್ಪಡುವ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಕಾರನ್ನು ಸರಿಸುಮಾರು ಹತ್ತು ಜನರು ತಳ್ಳುತ್ತಿರುವುದನ್ನು ನಾವು ವೀಡಿಯೊದಲ್ಲಿದೆ.
ಸರಿಸುಮಾರು 2.5 ಟನ್ ತೂಕ ಹೊಂದಿದೆ ಈ ಕಾರು. ಅದು ಬಾಕ್ಸ್ ರಚನೆಯನ್ನು ಹೊಂದಿರುವ ಜಿ-ಕ್ಲಾಸ್ ಕಾರು. ಇದನ್ನು ತಳ್ಳುವುದು ಸವಾಲಿನ ಸಂಗತಿ. ಇಷ್ಟೊಂದು ದೊಡ್ಡ ಗಾತ್ರದ ಕಾರು ನಿಂತಾಗ ಅದನ್ನು ಕ್ರ್ಯಾಂಕ್ ಮಾಡಿ ಸ್ಟಾರ್ಟ್ ಮಾಡುವುದು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಆದರೆ, ಇದು ಸ್ಟಾರ್ಟ್ ಮಾಡುವ ಪ್ರಯತ್ನವೂ ಆಗಿರಲಿಕ್ಕಿಲ್ಲ ಎನ್ನಲಾಗುತ್ತದೆ. ಯಾಕೆಂದರೆ ಇದರಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತವೆ. ಹೀಗಾಗಿ ಕ್ಲಚ್ ಪೆಡಲ್ ಇಲ್ಲ. ಅದು ಗೇರ್ ಬಾಕ್ಸ್ ನಲ್ಲಿ ಓಪನ್ ಕ್ಲಚ್ ಹೊಂದಿದೆ. ಇಂಥ ಸಂದರ್ಭದಲ್ಲಿ ಕಾರನ್ನು ಸ್ಟಾರ್ಟ್ ಮಾಡುವ ಏಕೈಕ ಕಾರ್ಯಸಾಧು ವಿಧಾನವೆಂದರೆ ಜಂಪ್ ಸ್ಟಾರ್ಟ್.
ವಾಹನದ ಬ್ಯಾಟರಿಯನ್ನು ಜಂಪ್ ಸ್ಟಾರ್ಟ್ ಮಾಡಲು, ಬ್ಯಾಟರಿ ಹೊಂದಿರುವ ಮತ್ತೊಂದು ವಾಹನ ಅಗತ್ಯವಿರುತ್ತದೆ. ಆರಂಭಿಕ ಹಂತವು ಬೂಸ್ಟರ್ ಕೇಬಲ್ ಗಳನ್ನು ಬಳಸಿಕೊಂಡು ಬ್ಯಾಟರಿಗಳ ಟರ್ಮಿನಲ್ ಗಳನ್ನು ಸಂಪರ್ಕಿಸಿ ಸ್ಟಾರ್ಟ್ ಮಾಡಲಾಗುತ್ತದೆ. ಈ ಮೂಲಕ ಚಾರ್ಚ್ ಇರುವ ಬ್ಯಾಟರಿಯಿಂದ ಖಾಲಿಯಾದ ಬ್ಯಾಟರಿಗೆ ಪವರ್ ವರ್ಗಾವಣೆಗೆ ಮಾಡಲಾಗುತ್ತದೆ. ಆದರೆ ವೋಲ್ಟೇಜ್ ಕೂಡ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇನ್ನೊಂದು ವಾಹನದ ಬ್ಯಾಟರಿ ಹೆಚ್ಚು ವೋಲ್ಟೇಜ್ ಹೊಂದಿದ್ದರೆ ಶಾರ್ಕ್ ಸರ್ಕೀಟ್ ಆಗುವ ಸಾಧ್ಯತೆಗಳಿರುತ್ತವೆ.
ಮರ್ಸಿಡಿಸ್ G63 AMG
ಮರ್ಸಿಡಿಸ್ ಜಿ63 ಎಎಂಜಿ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ನ ಅತ್ಯಂತ ಜನಪ್ರಿಯ ಎಸ್ಯುವಿಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಜಿ-ವಾಗನ್ ಎಂದು ಕರೆಯಲಾಗುತ್ತದೆ. ಹಲವು ವರ್ಷಗಳಾದರೂ ಜಿ-ವಾಗೆನ್ ವಿನ್ಯಾಸವು ಹೆಚ್ಚಾಗಿ ಬದಲಾಗದೆ ಉಳಿದಿದೆ. ಇದು ಶಕ್ತಿಯುತ ಎಂಜಿನ್ನೊಂದಿಗೆ ತನ್ನ ವಿಶಿಷ್ಟ, ಬಾಕ್ಸ್ ನೋಟವನ್ನು ಉಳಿಸಿಕೊಂಡಿದೆ.
ಹೊಸ ತಲೆಮಾರಿನ ಜಿ 63 ಎಎಂಜಿ ಭಾರತೀಯ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರು. ಪ್ರೀಮಿಯಂ ಇಂಟೀರಿಯರ್ ಹೊಂದಿರುವ ಎಸ್ಯುವಿ ತನ್ನ ರಗಡ್ ಲುಕ್ ಹೊಂದಿದೆ. ಇದು ಈಗ 4.0-ಲೀಟರ್, ಬೈ-ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 576 ಬಿಎಚ್ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ ನೊಂದಿಗೆ 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಜಿ63 ಎಎಂಜಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.30 ಕೋಟಿ ರೂಪಾಯಿ.