Site icon Vistara News

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

Air Purifier

ವಾಯು ಮಾಲಿನ್ಯವು (Air pollution) ಈಗ ಜಾಗತಿಕವಾಗಿ ಒಂದು ಸಮಸ್ಯೆಯಾಗಿದೆ. ಹೊರಾಂಗಣ ಪರಿಸರವನ್ನು ಮಾತ್ರವಲ್ಲದೆ ಇದು ನಮ್ಮ ಮನೆ (home) ಮತ್ತು ವಾಹನಗಳ (vehicles) ಒಳಗಿನ ಗಾಳಿಯ ಮೇಲೂ ಪರಿಣಾಮ ಬೀರುತ್ತಿದೆ. ಒಳಾಂಗಣ ವಾಯು ಮಾಲಿನ್ಯವನ್ನು ಎದುರಿಸಲು ಅನೇಕ ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು (Air Purifier) ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳ ಅಗತ್ಯವನ್ನು ಸಾಮಾನ್ಯವಾಗಿ ಹೆಚ್ಚಿನವರು ಕಡೆಗಣಿಸುತ್ತಾರೆ.

ಕಲುಷಿತ ಗಾಳಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ವಾಹನಗಳಲ್ಲಿ ಏರ್ ಪ್ಯೂರಿಫೈಯರ್ ಗಳ ಪ್ರಾಮುಖ್ಯತೆಯು ಎಲ್ಲರ ಗಮನ ಸೆಳೆಯುತ್ತಿದೆ. ಸ್ವಂತ ವಾಹನ ಚಾಲನೆ ಮಾಡುವಾಗ ವಿಶೇಷವಾಗಿ ಭಾರೀ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಸುತ್ತಮುತ್ತ ನಿರಂತರವಾಗಿ ಹಾನಿಕಾರಕ ಅನಿಲಗಳು ಮತ್ತು ಕಣಗಳು ಹೊರಸೂಸುತ್ತಿರುತ್ತದೆ. ಈ ಮಾಲಿನ್ಯಕಾರಕಗಳು ಕಾರಿನ ಕ್ಯಾಬಿನ್ ಅನ್ನು ಪ್ರವೇಶಿಸಬಹುದು. ಇದು ಒಳಗೆ ಕಲುಷಿತ ಗಾಳಿಯ ಸಂಗ್ರಹಕ್ಕೆ ಕಾರಣವಾಗುತ್ತದೆ. ಪರಿಸರದಲ್ಲಿರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದ ಇದು ಮತ್ತಷ್ಟು ಹದಗೆಡುತ್ತದೆ.
ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ.


1. ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ

ಗಾಳಿಯ ಶುದ್ಧೀಕರಣವು ಕಾರಿನೊಳಗಿನ ಗಾಳಿಯಿಂದ ಧೂಳು, ಹೊಗೆ, ಪರಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತದೆ. ಚಾಲನೆ ಮಾಡುವಾಗ ನೀವು ಉಸಿರಾಡುವ ಹಾನಿಕಾರಕ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

2. ಅಲರ್ಜಿಕಾರಕಗಳನ್ನು ತೆಗೆದು ಹಾಕುತ್ತದೆ

ಅಲರ್ಜಿ ಅಥವಾ ಆಸ್ತಮಾದಂತಹ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಕಲುಷಿತ ಗಾಳಿಯು ಅಸ್ವಸ್ಥತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಏರ್ ಪ್ಯೂರಿಫೈಯರ್ ಗಾಳಿಯಿಂದ ಅಲರ್ಜಿಯನ್ನು ತೆಗೆದುಹಾಕುತ್ತದೆ. ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.

3. ವಾಸನೆ ತೊಡೆದು ಹಾಕುವುದು

ಮಾಲಿನ್ಯಕಾರಕಗಳ ಜೊತೆಗೆ ಏರ್ ಪ್ಯೂರಿಫೈಯರ್‌ಗಳು ಕಾರಿನೊಳಗಿನ ಅಹಿತಕರ ವಾಸನೆಯನ್ನು ತೆಗೆದು ಹಾಕುತ್ತದೆ. ಅದು ಹೊಗೆ, ಆಹಾರ ಅಥವಾ ಇತರ ವಾಸನೆಯ ಪದಾರ್ಥಗಳು ತೊಡೆದು ಹಾಕಿ ಗಾಳಿ ಶುದ್ಧೀಕರಣ ಮಾಡಿ ಸುವಾಸನೆಯನ್ನು ಬೀರುತ್ತದೆ. ವಾಹನ ಚಾಲನೆಯ ಅನುಭವವನ್ನು ಹೆಚ್ಚಿಸುತ್ತದೆ.

4. ಆರೋಗ್ಯದ ಅಪಾಯಗಳ ವಿರುದ್ಧ ರಕ್ಷಣೆ

ಕಲುಷಿತ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಿನೊಳಗಿನ ಗಾಳಿಯನ್ನು ಶುದ್ಧೀಕರಿಸುವ ಮೂಲಕ ಈ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಚಾಲನಾ ವಾತಾವರಣವನ್ನು ಉತ್ತೇಜಿಸಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ.

5. ಚಾಲನಾ ಸೌಕರ್ಯವನ್ನು ಹೆಚ್ಚಿಸುವುದು

ಕಾರಿನೊಳಗೆ ಶುದ್ಧ ಮತ್ತು ತಾಜಾ ಗಾಳಿಯು ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ ಚಾಲನಾ ಅನುಭವಕ್ಕೆ ಕೊಡುಗೆ ನೀಡುತ್ತದೆ. ವಿಶೇಷವಾಗಿ ದೀರ್ಘ ಪ್ರಯಾಣದ ಸಮಯದಲ್ಲಿ ಅಥವಾ ಸವಾಲಿನ ಚಾಲನಾ ಪರಿಸ್ಥಿತಿಗಳಲ್ಲಿ ಇದು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

6. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌

ಕಾರು ತಯಾರಕರು ಈಗ ತಮ್ಮ ವಾಹನದ ವೈಶಿಷ್ಟ್ಯಗಳ ಭಾಗವಾಗಿ ಇನ್‌ಬಿಲ್ಟ್‌ ಆಗಿ ಏರ್ ಪ್ಯೂರಿಫೈಯರ್‌ಗಳನ್ನು ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಕಾರುಗಳಲ್ಲಿ ಬಳಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ಏರ್ ಪ್ಯೂರಿಫೈಯರ್‌ಗಳು ಇವೆ. ಚಾಲಕರು ತಮ್ಮ ವಾಹನದ ಮಾದರಿಯನ್ನು ಲೆಕ್ಕಿಸದೆಯೇ ಶುದ್ಧ ಗಾಳಿಯನ್ನು ಆನಂದಿಸಲು ಇದು ಅನುವು ಮಾಡಿಕೊಡುತ್ತದೆ.

Exit mobile version