ಬೆಂಗಳೂರು: ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಏಥರ್ ಎನರ್ಜಿ ತನ್ನ ಮಹತ್ವಾಕಾಂಕ್ಷೆಯ ಅಥೆರ್ 450 ಎಕ್ಸ್ ಅಪ್ಡೇಟೆಡ್ ಆವೃತ್ತಿ (Ather 450S) 450 ಎಸ್ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಸೆಗ್ಮೆಂಟ್ನಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಂಪನಿಯು ಏಥರ್ 450 ಎಸ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.30 ಲಕ್ಷ ರೂಪಾಯಿ. ಅದೇ ಸಮಯದಲ್ಲಿ, ಬ್ರಾಂಡ್ ಜನಪ್ರಿಯ ಅಥೆರ್ 450 ಎಕ್ಸ್ ಅಪ್ಡೇಟೆಡ್ ವರ್ಷನ್ ಕೂಡ ಮಾರುಕಟ್ಟೆಗೆ ಇಳಿಸಿದೆ. ಹಲವಾರು ವಿಶೇಷಗಳು ಹಾಗೂ ಹೊಸ ಪವರ್ ಟ್ರೇನ್ ಆಯ್ಕೆಯೊಂದಿಗೆ ಈ ಸ್ಕೂಟರ್ ರಸ್ತೆಗಿಳಿದಿದೆ. ಕೋರ್ ಮತ್ತು ಪ್ರೊ ಎಂದು ಕರೆಯಲ್ಪಡುವ ಏಥರ್ 450 ಎಕ್ಸ್ ವೇರಿಯೆಂಟ್ಗಳನ್ನು ಕ್ರಮವಾಗಿ ರೂ.1.37 ಲಕ್ಷ ಮತ್ತು ರೂ.1.52 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಪರಿಚಯಿಸಲಾಗಿದೆ.
ಏಥರ್ 450 ಎಸ್ ಸ್ಕೂಟರ್ಗೂ ತನ್ನ ಸಿಗ್ನೇಚರ್ ಏಥರ್ ವಿನ್ಯಾಸವನ್ನು ಉಳಿಸಿಕೊಂಡಿದೆ. ಕಂಪನಿಯ ಜನಪ್ರಿಯ ಸ್ಕೂಟರ್ ಅಥೆರ್ 450 ಎಕ್ಸ್ನಂತೆಯೇ ಬಾಗಿದ ಮುಂಭಾಗದ ಕೌಲ್, ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. 450 ಎಸ್ 450 ಎಕ್ಸ್ ನಲ್ಲಿ ಕಂಡುಬರುವ ಪ್ರೀಮಿಯಂ ಟಚ್ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬದಲಿಗೆ ಜಾಯ್ ಸ್ಟಿಕ್-ಸುಸಜ್ಜಿತ ಸ್ವಿಚ್ ಗೇರ್ ಮತ್ತು ನಾನ್-ಟಚ್ ಎಲ್ ಸಿಡಿ ಡಿಸ್ ಪ್ಲೇಯಂತಹ ಸೂಕ್ಷ್ಮ ವ್ಯತ್ಯಾಸಗಳನ್ನು ನೀಡಲಾಗಿದೆ. ಈ ಬದಲಾವಣೆಯನ್ನು ಸ್ಕೂಟರ್ ನ ಬೆಲೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾಡಲಾಗಿದೆ.
ಬೆಲ್ಟ್ ಡ್ರೈವ್ ಮೋಡ್
ವಿನ್ಯಾಸದ ಕೆಳಗೆ ಶಕ್ತಿಯುತ ಬೆಲ್ಟ್ ಡ್ರೈವ್ ಮೋಟರ್ ಇದೆ. ಇದು 7.24 ಬಿಎಚ್ಪಿ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪ್ರಭಾವಶಾಲಿ ಕಾರ್ಯಕ್ಷಮತೆಯು ಅಥೆರ್ 450 ಎಸ್ ಸ್ಪೋರ್ಟ್ ಮೋಡ್ 90 ಕಿ.ಮೀ ವೇಗದಲ್ಲಿ ಸವಾರಿ ಮಾಡಲು ಅನುಕೂಲ ಮಾಡಿಕೊಡುತ್ತದೆ/ ಆದರೆ ಇಕೋ ಮತ್ತು ರೈಡ್ ಮೋಡ್ನಲ್ಲಿ ಸ್ವಲ್ಪ ಕಡಿಮೆ ವೇಗವನ್ನು ನೀಡುತ್ತವೆ. ಸ್ಕೂಟರ್ ನ 2.9 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 115 ಕಿ.ಮೀ ಸಾಗುತ್ತದೆ. ಆದಾಗ್ಯೂ ರಿಯಲ್ ಟೈಮ್ನಲ್ಲಿ ಇಕೋ ಮೋಡ್ನಲ್ಲಿ ಸುಮಾರು 90 ಕಿ.ಮೀ ರೇಂಜ್ ನೀಡುತ್ತದೆ.
ಇದನ್ನೂ ಓದಿ : IPL 2023 : ಟಾಟಾ ಟಿಯಾಗೊ ಇವಿ ಐಪಿಎಲ್ನ ಅಧಿಕೃತ ಪಾಲುದಾರ ಕಾರು ಬ್ರ್ಯಾಂಡ್
ಅಥೆರ್ 450 ಎಕ್ಸ್ ಸ್ಕೂಟರ್ನ ಸುಧಾರಿತ ಆವೃತ್ತಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನ ಮತ್ತು ಪವರ್ ಟ್ರೇನ್ ಅನ್ನು ಕೇಂದ್ರೀಕರಿಸಿದ ಅಪ್ಡೇಟ್ ಮಾಡಲಾಗಿದೆ. ಮಾದರಿಗಳು 2.9 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಕ್ರಮವಾಗಿ 8.58 ಬಿಹೆಚ್ ಪಿ ಮತ್ತು 26 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಏಥೆರ್ 450 ಎಕ್ಸ್ 1000:1 ಕಾಂಟ್ರಾಸ್ಟ್ ಅನುಪಾತದೊಂದಿಗೆ ಸರಾಸರಿಗಿಂತ ದೊಡ್ಡದಾದ ಎಲ್ಸಿಡಿ ಪ್ಯಾನಲ್ ಹೊಂದಿದೆ. ಸುಧಾರಿತ ನ್ಯಾವಿಗೇಷನ್ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.
ಬ್ರೇಕಿಂಗ್ ವ್ಯವಸ್ಥೆ ಹೇಗಿದೆ?
ಎಲ್ಲಾ ಮೂರು ವೇರಿಯೆಂಟ್ಗಳಲ್ಲಿ ಬ್ರೇಕಿಂಗ್ ಅನ್ನು ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದೆ. ಪರಿಣಾಮಕಾರಿ ಮತ್ತು ಸುರಕ್ಷಿತೆಯ ಬ್ರೇಕಿಂಗ್ಗಾಗಿ ಶಕ್ತಿಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅನ್ನು ಕೊಡಲಾಗಿದೆ. ಅಥೆರ್ 450 ಎಸ್ ಪ್ರಸ್ತುತ ಎಬಿಎಸ್ ಅನ್ನು ಹೊಂದಿಲ್ಲ ಆದರೆ ಭವಿಷ್ಯದಲ್ಲಿ ಈ ಫೀಚರ್ ಸ್ವೀಕಾರಕ್ಕೆ ಕಂಪನಿ ಸಿದ್ಧವಾಗಿದೆ. ಏಥೆರ್ 450 ಎಸ್ ನಲ್ಲಿನ ಮತ್ತೊಂದು ಗಮನಾರ್ಹ ಸುರಕ್ಷತಾ ವೈಶಿಷ್ಟ್ಯವೆಂದರೆ ಅದರ ಫಾಲ್-ಸೇಫ್ ಕಾರ್ಯವಿಧಾನ,. ಇದು ಆಪಲ್ ನ ಐಫೋನ್ 14 ನಲ್ಲಿ ಪರಿಚಯಿಸಲಾದ ಪರಿಕಲ್ಪನೆಗೆ ಹೋಲುತ್ತದೆ. ಸ್ಕೂಟರ್ ಏನಾದರೂ ಗಂಭೀರ ಅಪಘಾತಕ್ಕೆ ಒಳಗಾದರೆ ಅದರಲ್ಲಿ ಪ್ರೀಸೆಟ್ ಮಾಡಿರುವ ಸಂಖ್ಯೆಗೆ ಫೋನ್ ಹೋಗುತ್ತದೆ.