Site icon Vistara News

Tata Altroz CNG : ಮೈಲೇಜ್​ ರೇಸ್​ನಲ್ಲಿ ಬಲೆನೊ ಮುಂದೆ ಸೋತ ಆಲ್ಟ್ರೊಜ್​ ಸಿಎನ್​ಜಿ ಕಾರು!

Tata Altroz CNG

ನವ ದೆಹಲಿ: ಟಾಟಾ ಮೋಟಾರ್ಸ್ ತನ್ನ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ನ ಸಿಎನ್​​ಜಿ ಆವೃತ್ತಿಯನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಆಲ್ಟ್ರೊಜ್ ಐಸಿಎನ್​ಜಿ ಎಂದು ಕರೆಯುವ ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ .7.55 ಲಕ್ಷದಿಂದ ರೂಪಾಯಿಂದ 10.55 ಲಕ್ಷ ರೂಪಾಯಿಗಳಾಗಿವೆ. ಈ ಪ್ರೀಮಿಯಮ್​ ಹ್ಯಾಚ್​ ಬ್ಯಾಕ್​ ಸಿಎನ್​ಜಿ ಇಂಧನದಲ್ಲಿ ಎಷ್ಟು ಮೈಲೇಜ್ ಕೊಡುತ್ತದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದು ಪೆಟ್ರೋಲ್​ ಎಂಜಿನ್​ಗಿಂತ ಶೇಕಡಾ 50ರಷ್ಟು ಹೆಚ್ಚು. ಹೀಗಾಗಿ ನಿತ್ಯ ಬಳಕೆಯ ಸವಾರರಿಗೆ ಇದು ದೊಡ್ಡ ಮಟ್ಟದ ಮೈಲೇಜ್​ ಗ್ಯಾರಂಟಿ ಕೊಡಲಿದೆ.

ಆಲ್ಟ್ರೋಜ್ ಸಿಎನ್ ಜಿ 1.2-ಲೀಟರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್​ಗೆ ಜೋಡಿಸಲಾಗಿದೆ. ಪೆಟ್ರೋಲ್ ಮೋಡ್​ನಲ್ಲಿ ಇದು 88 ಬಿಎಚ್ ಪಿ ಮತ್ತು 115 ಎನ್ಎಂ ಟಾರ್ಕ್​ ಅನ್ನು ಉತ್ಪಾದಿಸಿದರೆ, ಸಿಎನ್​​ಜಿ ಮೋಡ್​​ನಲ್ಲಿ ಇದು 77 ಬಿಎಚ್​ಪಿ ಮತ್ತು 103 ಎನ್ಎಂ ಟಾರ್ಕ್​ ಅನ್ನು ಉತ್ಪಾದಿಸುತ್ತದೆ. ಹೋಲಿಕೆಯಲ್ಲಿ, ಅದರ ನೇರ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಬಲೆನೊ ಸಿಎನ್ ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್ ಜಿ – ಇದೇ ರೀತಿಯ 77 ಬಿಹೆಚ್ ಪಿ ಉತ್ಪಾದಿಸುತ್ತವೆ ಆದರೆ ಅವುಗಳು ಸಿಎನ್ ಜಿ ಮೋಡ್​​ಗಳಲ್ಲಿ ಕೇವಲ 98.5 ಎನ್ಎಂ ಉತ್ಪಾದಿಸುತ್ತವೆ.

ಇಂಧನ ದಕ್ಷತೆಗೆ ಸಂಬಂಧಿಸಿದಂತೆ, ಟಾಟಾ ಆಲ್ಟ್ರೋಜ್ ಸಿಎನ್ ಜಿ 26.2 ಕಿ.ಮೀ / ಕೆಜಿ (ಎಆರ್​​ ಎಐ) ಮೈಲೇಜ್​ ನೀಡುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಮುಖ್ಯ ಪ್ರತಿಸ್ಪರ್ಧಿಗಳಾದ ಬಲೆನೊ ಸಿಎನ್ ಜಿ ಮತ್ತು ಗ್ಲಾಂಝಾ ಸಿಎನ್ ಜಿ – ಗಮನಾರ್ಹವಾಗಿ 30.61 ಕಿ.ಮೀ / ಕೆಜಿ ಮೈಲೇಜ್​ ಹೊಂದಿವೆ. ಆದಾಗ್ಯೂ, ರಿಯಲ್ ಟೈಮ್​ನಲ್ಲಿ ಈ ಎಲ್ಲಾ ಮಾದರಿಗಳ ಮೈಲೇಜ್ ಘೋಷಿಸಿಕೊಂಡ ಅಂಕಿಅಂಶಗಳಿಗಿಂತ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಇದನ್ನೂ ಓದಿ : Expensive Scooters: Here Is A List Of The Most Expensive Scooters In The Indian Market

ಆಲ್ಟ್ರೋಜ್ ವಿಶೇಷತೆಗಳೇನು?

ಆಲ್ಟ್ರೋಜ್ ಸನ್ ರೂಫ್ ನೀಡುವ ಮೊದಲ ಸಿಎನ್ ಜಿ ಚಾಲಿತ ಹ್ಯಾಚ್ ಬ್ಯಾಕ್ ಕಾರಾಗಿದೆ. ಇದು ಸಿಎನ್ ಜಿ ಟ್ಯಾಂಕ್ ಗಳಿಗಾಗಿ ಟಾಟಾ ಮೋಟಾರ್ಸ್ ನ ಪೇಟೆಂಟ್ ಪಡೆದ ಡ್ಯುಯಲ್ ಸಿಲಿಂಡರ್ ಸೆಟ್ ಅಪ್ ಪಡೆದುಕೊಂಡಿದೆ. ಇದು ಈ ವಿಭಾಗದಲ್ಲಿಯೇ ಹೊಸತು ವಿಶಿಷ್ಟ ಸೆಟ್ ಅಪ್ ನ ಪರಿಣಾಮವಾಗಿ, ಆಲ್ಟ್ರೊಜ್​​ನ ಲಗೇಜ್​ ಸ್ಪೇಜ್​ ಚೆನ್ನಾಗಿದೆ. ಸಿಲಿಂಡರ್ ಅಳವಡಿಸಿರುವ ಹೊರತಾಗಿಯೂ 210 ಲೀಟರ್ ಬೂಟ್ ಸ್ಪೇಸ್ ಅನ್ನು ಸಿಗುತ್ತದೆ. ಆದಾಗ್ಯೂ ಇದು ಸ್ಟ್ಯಾಂಡರ್ಡ್ ಆಲ್ಟ್ರೊಜ್ ನ 345-ಲೀಟರ್ ಬೂಟ್ ಗಿಂತ 135 ಲೀಟರ್ ಕಡಿಮೆ. ಇದಲ್ಲದೆ, ಅದರ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಆಲ್ಟ್ರೋಜ್ ಕಾರನ್ನು ನೇರವಾಗಿ ಸಿಎನ್ ಜಿ ಮೋಡ್​ನಲ್ಲಿಯೇ ಸ್ಟಾರ್ಟ್​ ಮಾಡಬಹುದು. ಪ್ರಸ್ತುತ, ಟಾಟಾ ಆಲ್ಟ್ರೋಜ್ ಸಿಎನ್ ಜಿ ಆರು ವೇರಿಯೆಂಟ್​ಗಳಲ್ಲಿ ಲಭ್ಯವಿದೆ – ಎಕ್ಸ್ ಇ, ಎಕ್ಸ್ ಎಂ +, ಎಕ್ಸ್ ಎಂ + (ಎಸ್), ಎಕ್ಸ್ ಝಡ್, ಎಕ್ಸ್ ಝಡ್ + (ಎಸ್) ಮತ್ತು ಎಕ್ಸ್ ಝಡ್ + ಒ (ಎಸ್).

Exit mobile version