Site icon Vistara News

Harley- Davidson | ಭಾರತಕ್ಕೆ ಮರಳಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್‌; ಹೀಗಿದೆ ಯೋಜನೆ?

harley davidson

ನವ ದಹಲಿ : ಅಮೆರಿಕ ಮೂಲದ ಪ್ರೀಮಿಯಮ್‌ ಬೈಕ್‌ ಕಂಪನಿಯಾಗಿರುವ ಹಾರ್ಲೆ-ಡೇವಿಡ್ಸನ್‌ (Harley- Davidson) ಮರಳಿ ಭಾರತಕ್ಕೆ ಬರಲಿದೆ ಎಂಬುದಾಗಿ ವರದಿಯಾಗಿದೆ. ಈ ಬಾರಿ ಹಾರ್ಲೆ ನೇರವಾಗಿ ಭಾರತೀಯ ಮಾರುಕಟ್ಟೆಗೆ ಇಳಿಯುತ್ತಿಲ್ಲ. ಬದಲಾಗಿ ಭಾರತದ ನಂಬರ್‌ ಒನ್‌ ದ್ವಿ ಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಹೀರೊ ಮೋಟೋಕಾರ್ಪ್‌ ಸಹಯೋಗದೊಂದಿಗೆ ಲಕ್ಸುರಿ ಬೈಕ್‌ ಅನ್ನು ರಸ್ತೆಗಿಳಿಸಲಿದೆ.

ಹೀರೊ ಮೋಟೋಕಾರ್ಪ್‌ ಹಾಗೂ ಹಾರ್ಲೆ-ಡೇವಿಡ್ಸನ್‌ ನಡುವೆ ಒಪ್ಪಂದವೊಂದು ನಡೆದಿದ್ದು, ಅದರ ಪ್ರಕಾರ ೨೦೨೪ರ ವೇಳೆಗೆ ಎರಡೂ ಕಂಪನಿಗಳು ಜತೆಯಾಗಿ ಭಾರತದ ಮಾರುಕಟ್ಟೆಗೆ ಐಷಾರಾಮಿ ಬೈಕೊಂದನ್ನು ಇಳಿಸಲಿದೆ. ಹೀರೊ ಮೋಟೊಕಾರ್ಪ್‌ನ ಸಿಎಫ್‌ಒ ನಿರಂಜನ್‌ ಗುಪ್ತಾ ಅವರು ಈ ಒಂದು ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ. ಭಾರತದ ಪ್ರೀಮಿಯಮ್‌ ಬೈಕ್‌ ಮಾರುಕಟ್ಟೆಗೆ ಪ್ರವೇಶ ಪಡೆಯುವ ಯೋಜನೆಯಂತೆ ಹೀರೊ ಕಂಪನಿಯು ಈ ಒಪ್ಪಂದಕ್ಕೆ ಮುಂದಾಗಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಹೀರೊ ಮೋಟೊಕಾರ್ಪ್‌ ೧೦೦ ಹಾಗೂ ೧೧೦ ಸಿಸಿ ಬೈಕ್‌ಗಳ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಗಳಿಸಿದೆ. ಅದರೆ, ೧೬೦ ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಗಳ ಬೈಕ್‌ಗಳ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಹಾರ್ಲೆ-ಡೇವಿಡ್ಸನ್‌ ಜತೆ ಒಪ್ಪಂದ ಮಾಡಿಕೊಂಡು ಆ ಸೆಗ್ಮೆಂಟ್‌ಗೆನಲ್ಲಿ ತಳವೂರುವುದು ಹೀರೊ ಕಂಪನಿಯ ಚಿಂತನೆಯಾಗಿದೆ.

ಹಾರ್ಲೆ ಡೇವಿಡ್ಸನ್‌ ಕಂಪನಿಯು ೨೦೨೦ರಲ್ಲಿ ಭಾರತದ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ಈ ವೇಳೆ ಹೀರೋ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ರೀತಿಯಾಗಿ ಆರಂಭಗೊಂಡ ಒಪ್ಪಂದವು ಹೊಸ ಮಾಡೆಲ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಇಳಿಸುವ ತನಕ ಮುಂದುವರಿದಿದೆ.

ಹೊಸ ಒಪ್ಪಂದದ ಪ್ರಕಾರ ಹೀರೊ ಮೋಟೊಕಾರ್ಪ್‌ ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಬ್ರಾಂಡ್‌ನಡಿ ನಾನಾ ಶ್ರೇಣಿಯ ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ. ಅದೇ ರೀತಿ ಹಾರ್ಲೆ ಬೈಕ್‌ಗಳ ಸರ್ವಿಸ್ ಹಾಗೂ ಬಿಡಿಭಾಗಗಳನ್ನೂ ಮಾರಾಟ ಮಾಡಲಿದೆ. ಅದೂ ಅಲ್ಲದೆ, ಹಾರ್ಲೆ ಕಂಪನಿಯ ಆಕ್ಸೆಸರಿಗಳನ್ನೂ ಮಾರಾಟ ಮಾಡಲಿದೆ.

ಇದನ್ನೂ ಓದಿ | Innova Hycross | 21 ಕಿ.ಮೀ ಮೈಲೇಜ್‌ ಕೊಡುತ್ತದೆ ಹೊಸ ಇನ್ನೋವಾ; 50 ಸಾವಿರ ರೂ. ಕೊಟ್ಟು ಬುಕ್‌ ಮಾಡಿ

Exit mobile version