Site icon Vistara News

ಕೆಡುಕಲ್ಲೂ ಒಳಿತನ್ನು ಕಾಣುವ ಆನಂದ್‌ ಮಹಿಂದ್ರಾ: ಮನಸ್ಸಿದ್ದರೆ ಮಾರ್ಗ ಎಂದ ಉದ್ಯಮಿ

ಮುಂಬೈ: ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಸಾಕಷ್ಟು ಹಾಸ್ಯಪ್ರಜ್ಞೆ ಮತ್ತು ಸ್ಫೂರ್ತಿಯ ಸಂದೇಶಗಳಿಗೆ ಹೆಸರುವಾಸಿಯದವರು. ಸಾಮಾನ್ಯರಿಗೆ ನಕಾರಾತ್ಮಕವಾಗಿ ಕಾಣುವ ಅನೇಕ ವಿಚಾರಗಳಲ್ಲಿ ಆನಂದ್‌ ಮಹಿಂದ್ರಾ ಅವರಿಗೆ ಧನಾತ್ಮಕತೆ ಹಾಗೂ ಸ್ಫೂರ್ತಿ ಕಾಣುತ್ತವೆ. ಸ್ವತಃ ತಮ್ಮ ಸಂಸ್ಥೆ ಬಗ್ಗೆಯೂ ಅವರದ್ದು ಇದೇ ಧೋರಣೆ.

ಹಳೆಯ ಮಹಿಂದ್ರಾ ಜೀಪನ್ನು ತಳ್ಳು ಗಾಡಿಯೊಂದರ ಮೇಲೆ ಕೂರಿಸಿದರೂ ಆನಂದ್‌ ಅವರಿಗೆ ಬೇಸರವಾಗುವುದಿಲ್ಲ. ಸ್ನೇಹಿತರೊಬ್ಬರಿಂದ ಆನಂದ್‌ ಮಹಿಂದ್ರಾ ಅವರಿಗೆ ಫೋಟೊ ಒಂದು ಲಭಿಸಿದೆ. ಅದರಲ್ಲಿ, ಹಳೆಯ ಮಹಿಂದ್ರಾ ಜೀಪನ್ನು ನಾಲ್ಕು ಚಕ್ರದ ತಳ್ಳು ಗಾಡಿಯ ಮೇಲೆ ಕೂರಿಸಿದ್ದಾರೆ. ಬೇರೆ ಯಾವುದಾದರೂ ಕಂಪನಿಯ ಮಾಲೀಕರಾಗಿದ್ದರೆ ಇದಕ್ಕೆ ಬೇಸರ ಮಾಡಿಕೊಳ್ಳುತ್ತಿದ್ದರೇನೊ. ಆದರೆ ಆನಂದ್‌ ಮಹಿಂದ್ರಾ ಎಲ್ಲದರಲ್ಲೂ ಧನಾತ್ಮಕತೆ ಹುಡುಕುವ ವ್ಯಕ್ತಿ.

ತಮ್ಮ ಭಾವನೆಗಳನ್ನು ಜಗತ್ತಿಗೆ ಹೊರಹಾಕಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಆನಂದ್‌ ಈ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಷೇರ್‌ ಮಾಡಿದ್ದಾರೆ. “ನನ್ನ ಸ್ನೇಹಿತರೊಬ್ಬರು ಈ ಫೋಟೊ ಕಳಿಸಿದ್ದಾರೆ. ಯಾವುದಾದರೂ ಒಂದು ರೀತಿಯಲ್ಲಿ ಮಹಿಂದ್ರಾ ಮುನ್ನಡೆಯುತ್ತಲೇ ಇರುತ್ತದೆ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ನನಗೆ ಇದು ಇಷ್ಟವಾಗಿದೆ. ಇದು ಸತ್ಯ. ನಾಉ ನಿರಂತರ ಮುಂದುವರಿಯುತ್ತಲೇ ಇರುತ್ತೇವೆ. ಮನಸ್ಸಿದ್ದರೆ ಮಾರ್ಗ” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಆ ಪೋಸ್ಟ್ ಗೆ ಇದುವರೆಗೆ 13,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಇದನ್ನೂ ಓದಿ | ಬಂಧಿತ ನಾಲ್ವರು ಖಲಿಸ್ತಾನ್ ಉಗ್ರರ ಜತೆ ನಂಟು ಹೊಂದಿದ್ದ ಪಂಜಾಬ್ ನ ಇಬ್ಬರ ಬಂಧನ

Exit mobile version