Site icon Vistara News

Bajaj Pulsar 125 | ಕಾರ್ಬನ್‌ ಫೈಬರ್‌ ಆವೃತ್ತಿಯ ಪಲ್ಸರ್‌ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ

ನವ ದೆಹಲಿ : ಬಜಾಜ್ ಆಟೊ ಕಂಪನಿಯು ತನ್ನ ೧೨೫ ಸಿಸಿ ಪಲ್ಸರ್‌ ಬೈಕ್‌ ವಿಭಾಗದ ಕಾರ್ಬನ್‌ ಫೈಬರ್‌ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬೈಕ್‌ನ ಎಕ್ಸ್‌ಶೋ ರೂಮ್‌ ಬೆಲೆ ಸಿಂಗಲ್‌ ಸೀಟ್‌ನ ಎಡಿಷನ್‌ಗೆ ೯೧, ೬೪೨ ರೂಪಾಯಿ ನಿಗದಿ ಮಾಡಲಾಗಿದೆ. ನೀಲಿ ಹಾಗೂ ಕೆಂಪು ಬಣ್ಣದಲ್ಲಿ ಈ ಬೈಕ್‌ಗಳು ಮಾರುಕಟ್ಟೆಗೆ ಪ್ರವೇಶ ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಕೌಲ್‌, ಪೆಟ್ರೋಲ್‌ ಟ್ಯಾಂಕ್, ಫ್ರಂಟ್ ಫೆಂಡರ್‌, ಟೇಲ್‌ ಸೆಕ್ಷನ್‌ಗಳಲ್ಲಿ ಬಣ್ಣಗಳನ್ನು ನೀಡಲಾಗಿದೆ.

ಹೊಸ ಬೈಕ್‌ನಲ್ಲಿ ಯಾವುದೇ ಕಾಸ್ಮೆಟಿಕ್‌ ಬದಲಾವಣೆಗಳನ್ನು ಮಾಡಲಾಗಿಲ್ಲ. ೧೨೪. ೪ ಸಿಸಿಯ ಸಿಂಗಲ್‌ ಸಿಲಿಂಡರ್ ಎಂಜಿನ್ ಹೊಂದಿದ್ದು, ೮೫೦೦ ಆರ್‌ಪಿಎಮ್‌ನಲ್ಲಿ ೧೧.೬೪ ಬಿಎಚ್‌ಪಿ ಪವರ್‌ ಹಾಗೂ ೬೫೦೦ ಆರ್‌ಪಿಎಮ್‌ನಲ್ಲಿ ೧೦.೮ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಎಂಜಿನ್‌ಗೆ ಫ್ಯುಯಲ್‌ ಇಂಜೆಕ್ಟರ್ ಸಿಸ್ಟಮ್ ಅಳವಡಿಸಲಾಗಿದ್ದು, ೫ ಸ್ಪೀಡ್‌ನ ಗೇರ್‌ ಬಾಕ್ಸ್‌ ಇದೆ.

ಟೆಲಿಸ್ಕೋಪಿಕ್‌ ಫ್ರಂಟ್‌ ಫೋರ್ಕ್‌ಗಳು ಹಾಗೂ ಡ್ಯುಯಲ್‌ ಶಾಕ್‌ ಅಬ್ಸಾರ್ಬರ್‌ ಹಿಂದೆ ಇದೆ. ಮುಂಬದಿ ಚಕ್ರದಲ್ಲಿ ೨೪೦ ಎಮ್‌ಎಮ್‌ ಡಿಸ್ಕ್‌ ಬ್ರೇಕ್‌ ಇದ್ದು, ಹಿಂಬದಿಯಲ್ಲಿ ಡ್ರಮ್‌ ಬ್ರೇಕ್‌ ನೀಡಲಾಗಿದೆ. ಇದರಲ್ಲಿ ಆರು ಸ್ಪೋಕ್‌ನ ಚಕ್ರಗಳಿವೆ.

ಹೊಸ ಬಜಾಜ್‌ ಪಲ್ಸರ್‌ ಫೈಬರ್ ಎಡಿಷನ್‌ ಜತೆ ಪಲ್ಸರ್‌ ೧೨೫ ಬೈಕ್‌ ಕೂಡ ಲಭ್ಯವಿದೆ. ಪಲ್ಸರ್‌ ಬೈಕ್‌ ಭಾರತದಲ್ಲಿ ಅತಿ ಹೆಚ್ಚು ಪ್ರಯೋಗಕ್ಕೆ ಒಳಗಾದ ಬೈಕ್‌ ಹಾಗೂ ಅತ್ಯಂತ ಅಗ್ಗದ ದರಕ್ಕೆ ಲಭಿಸುವ ಬೈಕ್‌ ಎನಿಸಿಕೊಂಡಿದೆ. ಪಲ್ಸರ್‌ ೧೨೫ ಸಿಸಿ ಬೈಕ್‌ಗಳು ಹೋಂಡಾ ಎಸ್‌ಪಿ ೧೨೫ ಹಾಗೂ ಹೀರೋ ಗ್ಲಾಮರ್ ೧೨೫ ಬೈಕ್‌ಗೆ ಸ್ಪರ್ಧೆ ನೀಡುತ್ತದೆ.

ಇದನ್ನೂ ಓದಿ | Honda Activa | ಹೋಂಡಾ ಆಕ್ಟಿವಾ ಪ್ರೀಮಿಯಮ್‌ ಎಡಿಷನ್‌ ಭಾರತದಲ್ಲಿ ಬಿಡುಗಡೆ

Exit mobile version