Site icon Vistara News

Bajaj Auto : ಮತ್ತೆ ರಸ್ತೆಗೆ ಇಳಿಯಲಿದೆ ಬಜಾಜ್ ಅವೆಂಜರ್ 220 ಸ್ಟ್ರೀಟ್

Bajaj Avenger 220 street

#image_title

ಮುಂಬಯಿ: ಬಜಾಜ್ ಕಂಪನಿಯು ಅವೆಂಜರ್ 220 ಸ್ಟ್ರೀಟ್ ಬೈಕ್​ನ ಉತ್ಪಾದನೆಯನ್ನು 2020ರಲ್ಲಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತದೇ ಬೈಕ್​ ಭಾರತದ ರಸ್ತೆಗೆ ಇಳಿಯಲಿದೆ ಎಂಬುದಾಗಿ ವರದಿಯಾಗಿದೆ. ಈ ಹಿಂದೆ ಬಳಸುತ್ತಿದ್ದ ಅವೆಂಜರ್ 220 ಕ್ರೂಸ್​​ನ ಎಂಜಿನ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಅಂದಾಜಿನ ಪ್ರಕಾರ ಪಲ್ಸರ್​ 220ಯಲ್ಲಿರುವ ಎಂಜಿನ್​ ಅದಾಗಿರಬಹುದು.

220 ಸ್ಟ್ರೀಟ್ ಬೈಕಿನಲ್ಲಿ ಏರ್ ಅಥವಾ ಆಯಿಲ್ ಕೂಲ್ಡ್, 220ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಇರಬಹುದು ಎನ್ನಲಾಗಿದೆ. ಇದು 8,500 ಆರ್​​ಪಿಎಂನಲ್ಲಿ 19 ಬಿಹೆಚ್​​​ಪಿ ಪವರ್ ಮತ್ತು 7,000 ಆರ್​​ಪಿಎಂನಲ್ಲಿ 17.55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. . ಇದು ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್​ಗಳ ಜತೆ ಮಾರುಕಟ್ಟೆಗೆ ಇಳಿಬಹುದು. ಈ ಮೂಲಕ ಬೇಸಿಸ್​ ಸಸ್ಪೆನ್ಷನ್​ ಸ್ಥಗಿತಗೊಳ್ಳಬಹುದು ಎನ್ನಲಾಗಿದೆ. 220 ಕ್ರೂಸ್ ಬೈಕ್​ನಂತೆಯೇ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್​ ಬ್ರೇಕ್​ ಇರಲಿದೆ.

ಪ್ರಸ್ತುತ ಮಾರಾಟವಾಗುತ್ತಿರುವ ಅವೆಂಜರ್ 220 ಕ್ರೂಸ್ ಗೆ ಹೋಲಿಸಿದರೆ, 220 ಸ್ಟ್ರೀಟ್ ಹೆಚ್ಚು ಕಪ್ಪುಬಣ್ಣದ ಔಟ್ ಬಾಡಿವರ್ಕ್, ಅಲಾಯ್ ವೀಲ್​ಗಳನ್ನು ಹೊಂದಿರಲಿವೆ. ಬ್ಯಾಕ್​ರೆಸ್ಟ್​ ಮತ್ತು ಮುಂಭಾಗದ ವಿಂಡ್​ ಸ್ಕ್ರೀನ್​ ಕೂಡ ಇರುವುದಿಲ್ಲ. ಅವೆಂಜರ್ 160 ಸ್ಟ್ರೀಟ್​ನಂತೆಯೇ ಅದರ ವಿನ್ಯಾಸವೂ ಇರಲಿದೆ.

ಇದನ್ನೂ ಓದಿ ವ: MG Moto : ಎಂಜಿ ಹೆಕ್ಟರ್ ಬೆಲೆ 61,000 ರೂಪಾಯಿವರೆಗೆ ಏರಿಕೆ; ಶೈನ್ ವೇರಿಯೆಂಟ್​ ಬಿಡುಗಡೆ

ಬಜಾಜ್ ಅವೆಂಜರ್ 220 ಸ್ಟ್ರೀಟ್​ನ ಬೆಲೆ

ಅವೆಂಜರ್ 220 ಕ್ರೂಸ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಮ್​ನಲ್ಲಿ .1,38,368 ರೂಪಾಯಿ. ಅವೆಂಜರ್ ನ ಸ್ಟ್ರೀಟ್ ವೇರಿಯೆಂಟ್​ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಬಹುದು ಎಂದು ಹೇಳಲಾಗಿದೆ.

Exit mobile version