ಮುಂಬಯಿ: ಭಾರತದ ನಂಬರ್ ಒನ್ ಕಾರು ತಯಾರಿಕ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಹ್ಯಾಚ್ಬ್ಯಾಕ್ ಸೆಗ್ಮೆಂಟ್ಗಳ ಜನಪ್ರಿಯ ಕಾರುಗಳಾದ ವ್ಯಾಗನ್ಆರ್, ಸೆಲೆರಿಯೊ ಹಾಗೂ ಆಲ್ಟೊ ಕೆ10ಗೆ ಭರ್ಜರಿಗೆ ಡಿಸ್ಕೌಂಟ್ ಘೋಷಿಸಿದೆ. ಏಪ್ರಿಲ್ ತಿಂಗಳಲ್ಲಿ ಕಾರು ಕೊಳ್ಳುವಂತ ಗ್ರಾಹಕರಿಗೆ ಈ ಸೌಲಭ್ಯ ದೊರಕಿದ್ದು ನೀವೇನಾದರೂ ಈ ಮಾಡೆಲ್ನ ಕಾರು ಕೊಳ್ಳುವುದಕ್ಕೆ ಇಚ್ಛೆ ಪಟ್ಟಿದ್ದರೆ ಎಷ್ಟು ಹಣ ಉಳಿಸಬಹುದು ಎಂಬುದನ್ನು ಚೆಕ್ ಮಾಡಿ.
ಮಾರುತಿ ವ್ಯಾಗನ್ ಆರ್
ಮಾರುತಿ ಸುಜುಕಿ ತನ್ನ ವ್ಯಾಗನ್ ಆರ್ ಕಾರಿಗೆ ಗರಿಷ್ಠ 54 ಸಾವಿರ ರೂಪಾಯಿ ರಿಯಾಯತಿ ಘೋಷಣೆ ಮಾಡಿದೆ. ವೇರಿಯೆಂಟ್ ಮೇಲೆ ಈ ಡಿಸ್ಕೌಂಟ್ ವ್ಯತ್ಯಾಸವಾಗಲಿದೆ. ಈ ಲಾಭ ಸಿಎನ್ಜಿ 1.0 ಲೀಟರ್ ಎಂಜಿನ್ ಹಾಗೂ ಸಿಎನ್ಜಿ 1.2 ಲೀಟರ್ ಎಂಜಿನ್ ಇರುವ ಕಾರಿಗೆ ಲಭ್ಯವಿದೆ. ಆದರೆ, ಸಿಎನ್ಜಿಗೆ ಕಾರಿಗೆ ಕಾರ್ಪೊರೇಟ್ ಆಫರ್ 4000 ರೂಪಾಯಿ ಹೊರತುಪಡಿಸಿ 15 ಸಾವಿರ ರೂಪಾಯಿ ಡಿಸ್ಕೌಂಟ್ ದೊರೆಯಲಿದೆ. ಕಂಪನಿಯು 15 ಸಾವಿರ ರೂಪಾಯಿಂದ ಆರಂಭಗೊಂಡು 20 ಸಾವಿರ ರೂಪಾಯಿ ತನಕ ಎಕ್ಸ್ಚೇಂಜ್ ಬೋನಸ್ ಕೂಡ ನೀಡುತ್ತಿದೆ. ಇದು ಕೂಡ ವೇರಿಯೆಂಟ್ ಮೇಲೆ ಡಿಸ್ಕೌಂಟ್. 1.0 ಲೀಟರ್ನ ವೇರಿಯೆಂಟ್ನ ವ್ಯಾಗನ್ ಆರ್ ಕಾರು 30 ಸಾವಿರ ರೂಪಾಯಿ ನಗದು ರಿಯಾಯಿತಿ ಹಾಗೂ ಕಾರ್ಪೊರೇಟ್ ಹಾಗೂ ಎಕ್ಸ್ಚೇಂಜ್ ಲಾಭವನ್ನು ಪಡೆಯಲಿದೆ. 1.2 ಲೀಟರ್ನ ವೇರಿಯೆಂಟ್ಗೆ 25 ಸಾವಿರ ರೂಪಾಯಿ ನಗದು ರಿಯಾಯಿತಿ ಹಾಗೂ ಉಳಿದೆಲ್ಲ ಲಾಭಗಳನ್ನು ನೀಡಲಾಗಿದೆ.
ಮಾರುತಿ ಆಲ್ಟೊ ಕೆ10
ಮಾರುತಿ ಸಣ್ಣ ಗಾತ್ರದ ಹ್ಯಾಚ್ಬ್ಯಾಕ್ ದೊಡ್ಡ ಪ್ರಮಾಣದ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. 40 ಸಾವಿರ ರೂಪಾಯಿ ನಗದು ರಿಯಾಯಿತಿ, 15 ಸಾವಿರ ರೂಪಾಯಿ ಎಕ್ಸ್ಚೇಂಜ್ ಡಿಸ್ಕೌಂಟ್ ಸೇರಿದಂತೆ ಒಟ್ಟಾರೆ 55 ಸಾವಿರ ರೂಪಾಯಿ ರಿಯಾಯಿತಿಯಲ್ಲಿ ದೊರೆಯುತ್ತಿದೆ. ಆದರೆ, ಮ್ಯಾನುಯಲ್ ವೇರಿಯೆಂಟ್ನ ಕಾರಿಗೆ ಮಾತ್ರ ಈ ಸೌಲಭ್ಯವಿದೆ. ಸಿಎನ್ಜಿ ಆಲ್ಟೊ ಕಾರಿಗೆ ಗರಿಷ್ಠ 35 ಸಾವಿರ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.
ಇದನ್ನೂ ಓದಿ : Tata Nexon : ಟಾಟಾ ನೆಕ್ಸಾನ್ ಇವಿ ಡಾರ್ಕ್ ಎಡಿಷನ್ ಬಿಡುಗಡೆ, ಏನಿದೆ ಇದರಲ್ಲಿ ವಿಶೇಷ?
ಮಾರುತಿ ಸೆಲೆರಿಯೊ
ಮಾರುತಿಯ ಸೆಲೆರಿಯೊ ಕಾರಿಗೆ ಗರಿಷ್ಠ 45 ಸಾವಿರ ರೂಪಾಯಿ ಡಿಸ್ಕೌಂಟ್ ದೊರೆಯುತ್ತಿದೆ. ಇದರಲ್ಲಿ ಸಿಎನ್ಜಿ ಆವೃತ್ತಿಗೆ 30 ಸಾವಿರ ರೂಪಾಯಿ ನಗದು ರಿಯಾಯಿತಿ ಲಭ್ಯವಿದೆ. ಜತೆಗೆ ಎಕ್ಸ್ಚೇಂಜ್ ಬೋನಸ್ 15 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಕಾರಿಗೆ 25 ಸಾವಿರ ರೂಪಾಯಿ ನಗದು ಹಾಗೂ ಎಕ್ಸ್ಚೇಂಜ್ ಬೋನಸ್ ಇದೆ. ಆದರೆ, ಆಟೋಮ್ಯಾಟಿಕ್ ವೇರಿಯೆಂಟ್ಗೆ ಎಕ್ಸ್ಚೇಂಜ್ ಬೋನಸ್ ಮಾತ್ರ ಇದೆ.
ಮಾರುತಿ ಎಸ್-ಪ್ರೆಸ್ಸೊ
ಸೆಲೆರಿಯೊ ಕಾರಿಗೆ ನೀಡಿದ ಆಫರ್ಗಳನ್ನು ಮಾತ್ರ ಎಸ್- ಪ್ರೆಸ್ಸೊ ಕಾರಿಗೆ ನೀಡಲಾಗಿದೆ. ಈ ಕಾರಿನ ಮ್ಯಾನುಯಲ್ ವೇರಿಯೆಂಟ್ಗೆ ಗರಿಷ್ಠ 45 ಸಾವಿರ ರೂಪಾಯಿ ತನಕ ರಿಯಾಯಿತಿ ಘೋಷಿಸಲಾಗಿದೆ.