Site icon Vistara News

Innova Hycross : ಟಾಪ್​ ಎಂಡ್​ ವೇರಿಯೆಂಟ್​ ಇನ್ನೋವಾ ಕಾರುಗಳ ಬುಕಿಂಗ್​ ಸ್ಥಗಿತ

bookings-of-top-end-variant-innova-cars-have-stopped

#image_title

ಬೆಂಗಳೂರು: ಟೊಯೋಟಾ ಕಂಪನಿಯ ಬಹುಬೇಡಿಕೆಯ ಎಂಪಿವಿ ಇನ್ನೋವಾ ಹೈಕ್ರಾಸ್​ (Innova Hycross) 2022ರ ನವೆಂಬರ್​ನಲ್ಲಿ ಬಿಡುಗಡೆಯಾಗಿತ್ತು. ಮೊದಲೇ ಭಾರತದಲ್ಲಿ ಇನ್ನೋವಾ ಕಾರುಗಳಿಗೆ ಭಯಂಕರ ಬೇಡಿಕೆ. ಇನ್ನು ಹೈಬ್ರಿಡ್​ ಎಂಜಿನ್​ ಎಂದರೆ ಕೇಳಬೇಕೆ. ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ತೊಂದರೆ ಎದುರಾಗುತ್ತದೆ ಎಂಬ ಕಾರಣಕ್ಕೆ ಟಾಪ್​ ಎಂಡ್ ಕಾರುಗಳ ಬುಕಿಂಗ್​ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಂಪನಿ ಮುಂದಾಗಿದೆ.

ಹೈಕ್ರಾಸ್​ ಬಿಡುಗಡೆಗೊಂಡ ಬಳಿಕ ಏಕಾಏಕಿ ಬೇಡಿಕೆ ಹೆಚ್ಚಾಗಿದೆ. ಕಾಯುವಿಕೆಯ ಅವಧಿ (ವೇಟಿಂಗ್​ ಪಿರಿಯೆಡ್​) 24ರಿಂದ 30 ತಿಂಗಳ ತನಕ ಮುಂದುವರಿದಿದೆ. ಗ್ರಾಹಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹೈಬ್ರಿಡ್​ ಕಾರುಗಳ ಬುಕಿಂಗ್​ ಕೂಡ ಸ್ಥಗಿತಗೊಳಿಸಿದೆ.

ಕಾರಣವೇನು?

ಹೈಬ್ರಿಡ್ ಕಾರುಗಳು ಹಲವಾರು ಹೊಸ ಫೀಚರ್​​ಗಳನ್ನು ಹೊಂದಿವೆ. ಈ ಫೀಚರ್​ಗಳನ್ನು ನೀಡಬೇಕಾದರೆ ಕಾರುಗಳ ನಿರ್ಮಾಣದಲ್ಲಿ ಸೆಮಿ ಕಂಡಕ್ಟರ್​​ಗಳ ಬಳಕೆ ಹೆಚ್ಚಿದೆ. ಆದರೆ ಕಳೆದ ಎರಡು ವರ್ಷಗಳಿಂದ ಭಾರತದ ಆಟೋಮೊಬೈಲ್ ಕ್ಷೇತ್ರ ಸೆಮಿ ಕಂಡಕ್ಟರ್​​ಗಳ ಕೊರತೆಯಿಂದ ನಲುಗಿದೆ. ಇದರಿಂದಾಗಿ ಹೈಕ್ರಾಸ್ ಕಾರುಗಳು ನಿರ್ಮಾಣಕ್ಕೆ ತೊಂದರೆ ಉಂಟಾಗಿದೆ. ಇದರಿಂದಾಗಿ ಕಾಯುವಿಕೆಯ ಅವಧಿಯೂ ಹೆಚ್ಚಳವಾಗಿದೆ. ಇದು ಮುಂದುವರಿದರೆ ಬ್ರಾಂಡ್​ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವ ಕಾರಣ ಬುಕಿಂಗ್​ ಸ್ಥಗಿತಗೊಳಿಸಲಾಗಿದೆ.

ಇನೋವಾ ಹೈಕ್ರಾಸ್​ ಎಕ್ಸ್​ಜಡ್​ ಹಾಗೂ ಎಕ್ಸ್​ಜಡ್​ (ಒ) ಕಾರುಗಳಲ್ಲಿ ಗರಿಷ್ಠ ಫೀಚರ್​ಗಳಿವೆ. ವೆಂಟಿಲೇಟೆಡ್​ ಸೀಟ್​ಗಳು, ಪವರ್ಡ್​ ಟೈಲ್​ಗೇಟ್​, 8ವೇ ಪವರ್ಡ್​​ ಡ್ರೈವರ್ ಸೀಟ್​, ಅಡಾಸ್​ ಫೀಚರ್​​ಗಳಿವೆ. ಇದಕ್ಕೆಲ್ಲ ಹೆಚ್ಚುವರಿ ಸೆಮಿ ಕಂಡಕ್ಟರ್​​ಗಳು ಬೇಕಾಗುತ್ತವೆ. ಹೀಗಾಗಿ ಇದರ ಬುಕಿಂಗ್​ ನಿಲ್ಲಿಸಲಾಗಿದೆ.

ಇನೋವಾ ಹೈಕ್ರಾಸ್​ ಕಾರು ಒಟ್ಟು ಆರು ವೇರಿಯೆಂಟ್​​ಗಳಲ್ಲಿ ಲಭ್ಯವಿದೆ. ಜಿ. ಜಿಎಕ್ಸ್​, ವಿಎಕ್ಸ್​, ವಿಎಕ್ಸ್ (ಒ), ಜಡ್​ ಎಕ್ಸ್​, ಮತ್ತು ಜಡ್ಸ್ ಎಕ್ಸ್​ (ಒ). ಇದರಲ್ಲಿ ಎರಡು ವೇರಿಯೆಂಟ್​​ಗಳ ಬುಕ್ಕಿಂಗ್ ಸದ್ಯಕ್ಕಿಲ್ಲ ಎಂದು ಕಂಪನಿ. ಮೊದಲೆರಡು ವೇರಿಯೆಂಟ್​ಗಳು ಸಂಪೂರ್ಣವಾಗಿ ಪೆಟ್ರೋಲ್​ ಎಂಜಿನ್ ಹೊಂದಿದ್ದರೆ, ವಿಎಕ್ಸ್​ ವೇರಿಯೆಂಟ್​ನಿಂದ ಹೈಬ್ರಿಡ್​ ಎಂಜಿನ್​ ಆರಂಭವಾಗುತ್ತದೆ. ಟಾಪ್​ ಎಂಡ್ ವೇರಿಯೆಂಟ್​ ಏಳು ಸೀಟ್​ಗಳ ಆಯ್ಕೆಯಲ್ಲಿ ಮಾತ್ರ ದೊರಕಿದರೆ, ಉಳಿದ ವೇರಿಯೆಂಟ್​​ಗಳು ಅಥವಾ ಎಂಟು ಸೀಟ್​ಗಳಲ್ಲಿ ದೊರಕುತ್ತವೆ.

ಹೈಕ್ರಾಸ್​ ಎಂಜಿನ್​ ಸಾಮರ್ಥ್ಯವೇನು?

ಇನ್ನೋವಾ ಹೈಕ್ರಾಸ್​ ಕಾರಿನಲ್ಲಿ 2.0 ಲೀಟರ್​ನ ಪೆಟ್ರೊಲ್​ ಎಂಜಿನ್​ ಇದೆ. ಪೆಟ್ರೊಲ್ ಎಂಜಿನ್​ 172 ಬಿಎಚ್​ಪಿ ಪವರ್​ ಬಿಡುಗಡೆ ಮಾಡಿದರೆ, ಹೈಬ್ರಿಡ್​ ಕಾರು 184 ಬಿಎಚ್​​ಪಿ ಪವರ್​ ಬಿಡುಗಡೆ ಮಾಡುತ್ತದೆ. ಎರೂ ಎಂಜಿನ್​ಗಳು ಆಟೋಮ್ಯಾಟಿಕ್​ ಗೇರ್​ಬಾಕ್ಸ್​ ಆಯ್ಕೆಯಲ್ಲ ಮಾತ್ರ ನೀಡಲಾಗುತ್ತದೆ. ಅದೇ ರೀತಿ ಹೈಬ್ರಿಡ್​ ಕಾರಿನಲ್ಲಿ ಇ ಡ್ರೈವ್​ ಟ್ರಾನ್ಸ್​ಮಿಷನ್​ಗಳಿವೆ. ಈ ಕಾರಿನ ಹೈಬ್ರಿಡ್​ ಎಂಜಿನ್​ 23.24 ಕಿಲೋ ಮೀಟರ್​ ಮೈಲೇಜ್​ ನೀಡಿದರೆ, ನ್ಯಾಚುರಲ್​ ಆಸ್ಪಿರೇಟೆಡ್ ಕಾರು 16.13 ಕಿಲೋ ಮೀಟರ್​ ಮೈಲೇಜ್ ನೀಡುತ್ತದೆ. ಆರಂಭಿಕ ಎರಡು ವೇರಿಯೆಂಟ್​ನ ಕಾರುಗಳ ಬೆಲೆ 18.55 ಲಕ್ಷ ರೂಪಾಯಿಂದ 19.45 ಲಕ್ಷ ರೂಪಾಯಿಗಳಾದರೆ, ಹೈಬ್ರಿಡ್ ವೇರಿಯೆಂಟ್​ ಕಾರಿನ ಬೆಲೆ 24. 76 ಲಕ್ಷ ರೂಪಾಯಿಯಿಂದ 26.78 ಲಕ್ಷ ರೂಪಾಯಿ ತನಕ ಇದೆ.

Exit mobile version