Site icon Vistara News

Citroen C3 Aircross : ಸಿಟ್ರಯೊನ್​ ಕಾರಿನಲ್ಲಿ ಸಿಗಲಿದೆ ಬಿಗ್ ಅಪ್​ಡೇಟ್​​

Citroen

ವಿಸ್ತಾರ ನ್ಯೂಸ್​, ಬೆಂಗಳೂರು: ಸಿಟ್ರಯೊನ್ ಕಂಪನಿಯ ಕಾರಿನ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದಿದೆ. ಈ ತಿಂಗಳಾಂತ್ಯಕ್ಕೆ ಸಿಟ್ರಯೊನ್ ಸಿ3 ಏರ್​ಕ್ರಾಸ್​ (Citroen C3 Aircross) ಕಾರಿನ ಆಟೋಮ್ಯಾಟಿಕ್ ಗೇರ್​ ಬಾಕ್ಸ್​ ಅವೃತ್ತಿಯು ರಸ್ತೆಗೆ ಇಳಿಯಲಿದೆ. ಈ ಕಾರು ಕೊಳ್ಳಲು ಬಯಸಿದ್ದವರಿಗೆ ಇದೊಂದು ದೊಡ್ಡ ಕೊರತೆಯಾಗಿತ್ತು. ಅದನ್ನು ನೀಗಿಸಲು ಕಂಪನಿ ಮುಂದಾಗಿದೆ. ಅದೇ ರೀತಿ ಬೆಲೆಯೂ ಇತರ ಕಾರಿಗೆ ಹೋಲಿಸಿದರೆ ಇನ್ನಷ್ಟು ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.

ಸಿಟ್ರನ್ ಈಗಾಗಲೇ ಇಂಡೋನೇಷ್ಯಾದ ಸಿ 3 ಏರ್ ಕ್ರಾಸ್ ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡುತ್ತಿದೆ. ಇದನ್ನು ಜಪಾನಿನ ಗೇರ್​​ಬಾಕ್ಸ್​ ತಯಾರಕ ಕಂಪನಿ AISIN ನಿಂದ ಪಡೆದುಕೊಳ್ಳಲಾಗಿದೆ. ಇದೇ ಗೇರ್​ಬಾಕ್ಸ್​ ಭಾರತಕ್ಕೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಟ್ರಯೊನ್​ ಯುರೋಪಿಯನ್-ಸ್ಪೆಕ್ ಸಿ 3 ಹ್ಯಾಚ್ ಬ್ಯಾಕ್ ನಲ್ಲಿ ಈ ಐಸಿನ್ 6-ಸ್ಪೀಡ್ ಎಟಿ ಗೇರ್​ ಬಾಕ್ಸ್ ಬಳಸಲಾಗುತ್ತಿದೆ.

ಹೊಸ ಗೇರ್​ಬಾಕ್ಸ್​​ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ, ಮತ್ತು ಫೋಕ್ಸ್ ವ್ಯಾಗನ್ ಟೈಗುನ್ ಮತ್ತು ವಿರ್ಟಸ್ ತಮ್ಮ 1.0-ಲೀಟರ್ ಟಿಎಸ್ ಐ ಎಂಜಿನ್ ಗಳಿಗಾಗಿ ಮತ್ತು ಎಂಜಿ ಆಸ್ಟರ್ ತನ್ನ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಲ್ಲಿ ಬಳಸಲಾಗುವ ಗೇರ್ ಬಾಕ್ಸ್ ಗಳ ಅದೇ ಕುಟುಂಬಕ್ಕೆ ಸೇರಿದೆ. ಮಧ್ಯಮ ಗಾತ್ರದ ಎಸ್ ಯುವಿ ವಿಭಾಗದಲ್ಲಿ ಟಾರ್ಕ್ ಕನ್ವರ್ಟರ್ ಗಳು ಪ್ರಮುಖವಾಗಿದೆ. ಈ ಸೆಗ್ಮೆಂಟಿನ ಅತ್ಯಂತ ಜನಪ್ರಿಯ ಆಟೊಮ್ಯಾಟಿಕ್​ ಗೇರ್​ಬಾಕ್ಸ್​ ಸಿವಿಟಿಯಾಗಿದೆ. ಕೆಲವು ಮಾಡೆಲ್​ಗಳಲ್ಲಿ ಡಿಸಿಟಿಗಳು ಕೂಡ ಇವೆ.

ಹೊಸ ಆಟೋಮ್ಯಾಟಿಕ್​ ಗೇರ್ ಬಾಕ್ಸ್ 1.2-ಲೀಟರ್ 3 ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಗೆ ಜೋಡಣೆಯಾಗಿದೆ. ಟಾಪ್ ಎಂಡ್​ ಮತ್ತು ಮ್ಯಾಕ್ಸ್ ಟ್ರಿಮ್ ಗಳಲ್ಲಿ ಈ ಗೇರ್​ಬಾಕ್ಸ್​ಗಳನ್ನು ನೀಡಲಾಗಿದೆ. ಫೀಚರ್​ಗಳು ಇನ್ನೂ ಖಾತರಿಯಾಗಿಲ್ಲ. ಆದರೆ, ಇಂಡೋನೇಷ್ಯಾದಲ್ಲಿರುವ ಸಿ3 ಏರ್ ಕ್ರಾಸ್ ಎಟಿ ಗೇರ್ ಬಾಕ್ಸ್ ಇರುವು ಎಂಜಿನ್​​ 190 ಬಿಹೆಚ್ ಪಿ ಮತ್ತು 205 ಎನ್​ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. ಮ್ಯಾನುವಲ್ ಕಾರಿನಲ್ಲಿ ಪವರ್ ಬದಲಾಗದೆ ಉಳಿದಿದೆ. ಆದರೆ, ಟಾರ್ಕ್ 15 ಎನ್ಎಂ ಹೆಚ್ಚಿದೆ. ಗೇರ್ ಬಾಕ್ಸ್ ಮ್ಯಾನುವಲ್ ಮೋಡ್ ಅನ್ನು ಸಹ ಹೊಂದಿದೆ. ಆದರೆ ಪ್ಯಾಡಲ್ ಶಿಫ್ಟರ್ ಹೊಂದಿಲ್ಲ.

ಫೀಚರ್​ಗಳ ಕೊರತೆಯ ಹೊರತಾಗಿಯೂ ಸಿ3 ಏರ್ ಕ್ರಾಸ್ ಉತ್ತಮ ಎಂಜಿನ್​, ಅದ್ಭುತ ಸವಾರಿ ಗುಣಮಟ್ಟದೊಂದಿಗೆ ಅತ್ಯಂತ ದೃಢವಾದ ಮೆಕ್ಯಾನಿಕಲ್ ಪ್ಯಾಕೇಜ್ ಹೊಂದಿದೆ.

ಇನ್ನಷ್ಟು ಮಾಡೆಲ್​ಗಳಿಗೆ ಲಭ್ಯ


ಸಿ 3 ಏರ್ ಕ್ರಾಸ್ ಬಳಿಕ ಅದೇ ಗೇರ್ ಬಾಕ್ಸ್ ಸಿ 3 ಹ್ಯಾಚ್ ಬ್ಯಾಕ್ ನಲ್ಲಿ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಟಾರ್ಕ್ ಕನ್ವರ್ಟರ್ ಎಂಟ್ರಿ ಲೆವೆಲ್ ಸೆಗ್ ಮೆಂಟಿಗೆ ದುಬಾರಿಯಾಗಲಿದೆ. ಈ ಮೂಲಕ ಸಿ3 ಕಾರು ಹೆಚ್ಚು ಅತ್ಯಾಧುನಿಕ ಯಾಂತ್ರಿಕ ಪ್ಯಾಕೇಜ್ ಆಗಲು ಸಹಾಯ ಮಾಡುತ್ತದೆ. ಮುಂಬರುವ ಸಿ3 ಎಕ್ಸ್ ಕೂಪ್​ -ಎಸ್​​ಯುವಿ 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಬರುವ ನಿರೀಕ್ಷೆಯಿದೆ.

Exit mobile version