ನವ ದೆಹಲಿ: ಫ್ರೆಂಚ್ ಮೂಲದ ಕಾರು ತಯಾರಿಕಾ ಕಂಪನಿ ಸಿಟ್ರಾನ್ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರು ಸಿಟ್ರಾನ್ ಇ-ಸಿ3 ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ 11.15 ಲಕ್ಷ ರೂಪಾಯಿಗಳಾಗಿದ್ದು, ಲೈವ್, ಫೀಲ್, ಫೀಲ್ ವೈಬ್ ಪ್ಯಾಕ್ ಮತ್ತು ಫೀಲ್ ಡ್ಯಯಲ್ ಟೋನ್ ಎಂಬ ನಾಲ್ಕು ವೇರಿಯೆಂಟ್ನಲ್ಲಿ ಲಭ್ಯವಿದೆ. ಟಾಪ್ ವೇರಿಯೆಂಟ್ ಕಾರಿನ ಬೆಲೆ 12.43 ಲಕ್ಷ ರೂಪಾಯಿಗಳಾಗಿವೆ.
ಈ ಕಾರು ಟಾಟಾ ಮೋಟಾರ್ಸ್ನ ಟಿಯಾಗೊ ಕಾರಿಗೆ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಟಿಯಾಗೊಗಿಂತ ಈ ಕಾರಿನ ಬೆಲೆ ಹೆಚ್ಚಿದೆ. ಟಿಯಾಗೊ ಟಾಪ್ ಎಂಡ್ ಕಾರಿನ ಬೆಲೆ 12 ಲಕ್ಷ ರೂಪಾಯಿಗಳು.
ಇದನ್ನೂ ಓದಿ : Tata Nexon EV | ಟಾಟಾದ ನೆಕ್ಸಾನ್ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್ ಕೂಡ ಏರಿಕೆ
ಸಿಟ್ರಾನ್ ಕಾರು 29.2 ಕಿಲೋ ವ್ಯಾಟ್ ಬ್ಯಾಟರಿಯನ್ನು ಹೊಂದಿದೆ. ಇದು ಒಂದು ಬಾರಿ ಚಾರ್ಜ್ ಆದರೆ 320 ಕಿಲೋ ಮೀಟರ್ ಸಾಗುತ್ತದೆ ಎಂದು ಹೇಳಲಾಗಿದೆ. ಇದು 57 ಪಿಎಸ್ ಪವರ್ ಹಾಗೂ 143 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಕೇವಲ 6.8 ಸೆಕೆಂಡ್ಗಳಲ್ಲಿ 60 ಕಿಲೋ ಮೀಟರ್ ವೇಗ ಪಡೆಯಲು ಇದರಿಂದ ಸಾಧ್ಯ. ಇದರ ಟಾಪ್ ಸ್ಪೀಡ್ 107 ಕಿಲೋ ಮೀಟರ್. ಎಲೆಕ್ಟ್ರಿಕ್ ಬ್ಯಾಟರಿ ಡಿಸಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದ್ದು 10ರಿಂದ 80 ಶೇಕಡಾದಷ್ಟು 57 ನಿಮಿಷಗಳಲ್ಲಿ 15 A ಚಾರ್ಜಿಂಗ್ ಬಳಸಿದರೆ 10.5 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.