Site icon Vistara News

CNG CAR | ಸ್ವಿಫ್ಟ್‌ ಸಿಎನ್‌ಜಿ ಬಿಡುಗಡೆ, 10 ಲಕ್ಷ ರೂಪಾಯಿ ದರದ ಐದು ಕಾರುಗಳು ಪಟ್ಟಿ ಇಂತಿದೆ

CNG CAR

ನವದೆಹಲಿ : ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಒಂದು ಕಡೆಯಾದರೆ, ಬ್ಯಾಟರಿ ಚಾಲಿತ ವಾಹನಗಳು ದುಬಾರಿ ಮತ್ತು ವಿಶ್ವಾಸ ಮೂಡಿಸದೇ ಇರುವುದು ಇನ್ನೊಂದು ಕಡೆ. ಇದು ಹೊಸ ಕಾರು ಖರೀದಿ ಮಾಡಲು ಮುಂದಾಗಿರುವ ಗ್ರಾಹಕರಿಗೆ ಎದುರಾಗುವ ಗೊಂದಲ. ಇದಕ್ಕೆ ಪರಿಹಾರ ಎಂಬಂತೆ ಕಾರು ತಯಾರಕ ಕಂಪನಿಗಳು ಸಿಎನ್‌ಜಿ (CNG CAR) ಆಯ್ಕೆಯನ್ನು ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಅಂತೆಯೆ ಭಾರತದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಯವರ ಸ್ವಿಫ್ಟ್‌ ಕೂಡ ಸಿಎನ್‌ಜಿ ಅವತರಣಿಕೆಯೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಪೆಟ್ರೋಲ್‌ ಹಾಗೂ ಸಿಎನ್‌ಎಜಿ ಎರಡೂ ಆಯ್ಕೆಗಳನ್ನು ಈ ಕಾರು ಹೊಂದಿದ್ದು ಹೆಚ್ಚು ಮೈಲೇಜ್ ನೀಡುವ ಈ ಮಾದರಿ ಅತ್ಯುತ್ತಮ ಆಯ್ಕೆ ಎನಿಸಿದೆ. ಇದು ೧೦ ಲಕ್ಷ ರೂಪಾಯಿಗಿಂತ ಕಡಿಮೆ ದರದಲ್ಲಿ ದೊರೆಯುವ ಸಿಎನ್ಎಜಿ ಕಾರು. ಇದೇ ರೀತಿ ಸಿಎನ್‌ಜಿ ಆಯ್ಕೆಯಲ್ಲಿ ಸಿಗುವ ಒಟ್ಟು ಐದು ಕಾರುಗಳ ಪಟ್ಟಿ ಇಂತಿದೆ.

ಮಾರುತಿ ಸುಜುಕಿ ಸ್ವಿಪ್ಟ್‌

ಹ್ಯಾಚ್‌ಬ್ಯಾಕ್‌ ಕಾರುಗಳ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರು ಇದು. ಈ ಕಾರು ಇದೀಗ ಸಿಎನ್‌ಜಿ ಕಿಟ್‌ ಸಮೇತ ಮಾರುಕಟ್ಟೆಗೆ ಇಳಿಯಲಿದೆ. VXI ಹಾಗೂ ‍ ZXI ಮಾದರಿಯಲ್ಲಿ CNG ಕಾರುಗಳು ಲಭ್ಯವಿದೆ. vxi ಮಾದರಿ ಸಿಎನ್‌ಜಿಗೆ ೭.೭ ಲಕ್ಷ ರೂಪಾಯಿ ಹಾಗೂ zxi ಮಾದರಿಗೆ ೮.೪೫ ಲಕ್ಷ ರೂಪಾಯಿ ಎಕ್ಸ್‌ಶೋ ರೂಮ್‌ ಬೆಲೆ ನಿಗದಿ ಮಾಡಲಾಗಿದೆ.

ಟಾಟಾ ಟಿಯಾಗೊ

ಟಾಟಾ ಕಂಪನಿಯು ತನ್ನ ಟಿಯಾಗೊ ಕಾರಿಗೆ ಇತ್ತೀಚೆಗೆ ಸಿಎನ್‌ಜಿ ಆಯ್ಕೆಯನ್ನು ನೀಡಿದೆ. ಈ ಕಾರು ಕೆ.ಜಿ ಸಿಎನ್‌ಜಿಗೆ ೨೬ ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ ಎಂದು ಹೇಳಿದೆ. ಕಾರಿನ ಎಕ್ಸ್‌ ಶೋ ರೂಮ್‌ ೬.೨೯ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಸುಜುಕಿ ಸೆಲೆರಿಯೊ

ದೇಶದ ಅತ್ಯಂತ ಹೆಚ್ಚು ಮೈಲೇಜ್‌ ಕೊಡುವ ಕಾರು ಸುಜುಕಿ ಸೆಲೆರಿಯೊ. ಪೆಟ್ರೋಲ್‌ ಕಾರು ೨೭ ಕಿ.ಮೀ ಮೈಲೇಜ್ ಕೊಡುತ್ತದೆ. ಸಿಎನ್‌ಜಿಯಲ್ಲಿ ಇನ್ನಷ್ಟು ಹೆಚ್ಚು ಮೈಲೇಜ್‌ ಕೊಡಲಿದೆ. ಇದರಲ್ಲಿ ೧.೦ ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ೬೫ ಎಚ್‌ಪಿ ಪವರ್‌ ಬಿಡುಗಡೆ ಮಾಡಿದರೆ, ಸಿಎನ್‌ಜಿ ೫೫ ಎಚ್‌ಪಿ ಪವರ್‌ ಬಿಡುಗಡೆ ಮಾಡುತ್ತದೆ. ಸುಮಾರು ಪ್ರತಿ ಕೆ.ಜಿಗೆ ೩೫ ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಕಾರಿನ ಆರಂಭಿಕ ಬೆಲೆ ೬.೫೮ ಲಕ್ಷ ರೂಪಾಯಿ.

ಮಾರುತಿ ಸುಜುಕಿ ವ್ಯಾಗನ್‌ ಆರ್‌

ಮಾರುತಿ ಸುಜಕಿ ವ್ಯಾಗನ್‌ ಆರ್‌ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್ಐ ಮಾದರಿಯಲ್ಲಿ ಲಭ್ಯವಿದೆ. ಇದು ಕೂಡ ಮಾರುತಿಯ ಅತ್ಯಂತ ಜನಪ್ರಿಯ ಕಾರು. ಇದು ೧೦೦೦ ಸಿಸಿ ಎಂಜಿನ್‌ ಸಾಮರ್ಥ್ಯದ ಕಾರು. ಸಿಎನ್‌ಜಿ ಮಾದರಿಯ ೫೫ ಎಚ್‌ಪಿ ಪವರ್‌ ಬಿಡುಗಡೆ ಮಾಡುತ್ತದೆ. ಈ ಕಾರು ೬.೨೪ ಲಕ್ಷ ರೂಪಾಯಿ ಬೆಲೆ ನಿಗದಿಯಾಗಿದ್ದು, ೩೪ ಕಿ.ಮೀ ಮೈಲೇಜ್‌ ನೀಡುತ್ತದೆ.

ಹ್ಯುಂಡೈ ಗ್ರಾಂಡ್‌ ಐ೧೦ ನಿಯೋಸ್‌

ಸಿಎನ್‌ಜಿ ಕಾರಿನಲ್ಲಿ ಅತ್ಯುತ್ತಮ ಆಯ್ಕೆ. ಮ್ಯಾಗ್ನಾ ಮತ್ತು ಸ್ಪೋರ್ಟ್ಸ್‌ ವೇರಿಯೆಂಟ್‌ನಲ್ಲಿ ಈ ಕಾರು ಲಭ್ಯವಿದೆ. ೧.೨ ಲೀಟರ್‌ನ ಈ ಮೋಟಾರ್‌ ೬೬ ಎಚ್‌ಪಿ ಪವರ್‌ ಸೃಷ್ಟಿಸುತ್ತದೆ. ಇದರ ಬೆಲೆ ೭.೧೦ ಲಕ್ಷ ರೂಪಾಯಿ (ಎಕ್ಸ್ ಶೋರೂಮ್‌) ಬೆಲೆ ನಿಗದಿ ಮಾಡಲಾಗಿದೆ. ಇದು ೨೮ ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ.

ಟಾಟಾ ಟಿಗೋರ್‌

ಟಾಟಾ ಟಿಗೋರ್‌ ಟಾಟಾ ಮೋಟಾರ್ಸ್‌ನ ಎರಡನೇ ಸಿಎನ್‌ಜಿ ಕಾರು. ಟಿಗೋರ್‌ ಕೂಡ ಟಿಯಾಗೊದ ಸೆಡಾನ್‌ ಮಾದರಿ ಕಾರು. ಇದು XZ, XZ+, XZ + ಹಾಗೂ ‍XT ಮಾದರಿಯ ಕಾರಿನಲ್ಲಿ ಸಿಎನ್‌ಜಿ ಲಭ್ಯವಿದೆ. ಕಾರಿನ ಎಕ್ಸ್‌ಶೋರೂಮ್‌ ಬೆಲೆ ೭.೬೯ ಲಕ್ಷ ನಿಗದಿ ಮಾಡಲಾಗಿದೆ.

ಇದನ್ನೂ ಓದಿ | Scorpio Classic : ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ ಬಿಡುಗಡೆ, ಹೊಸ ಫೀಚರ್‌ಗಳ ಸೇರ್ಪಡೆ

Exit mobile version