Site icon Vistara News

Union Budget 2023 | ಐಷಾರಾಮಿ ಕಾರು ಪ್ರಿಯರಿಗೆ ನಿರಾಸೆ, ಆಮದು ಮಾಡುವ ಕಾರುಗಳಿಗೆ ತೆರಿಗೆ ಹೆಚ್ಚಳ

laxury car

#image_title

ಮುಂಬಯಿ: ಐಷಾರಾಮಿ ಕಾರು ಪ್ರಿಯರಿಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್​ (Union Budget 2023) ನಿರಾಸೆ ಮೂಡಿಸಿದೆ. ಎಲೆಕ್ಟ್ರಿಕ್​ ಸೇರಿದಂತೆ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮರ್ಸಿಡೀಸ್​ ಬೆಂಜ್​, ಆಡಿ, ಪೋರ್ಶೆ, ಲ್ಯಾಂಬೊರ್ಗಿನಿ ಕಾರುಗಳ ದರ ಹೆಚ್ಚಳವಾಗಲಿದೆ.

ವಿದೇಶದಲ್ಲಿ ಉತ್ಪಾದನೆಯಾಗಿ ಭಾರತದಲ್ಲಿ ಮಾರಾಟವಾದರೆ ಮಾತ್ರ ಈ ತೆರಿಗೆ ನೀತಿ ಅನ್ವಯವಾಗಲಿದೆ. ಹೀಗಾಗಿ ಮೇಕ್​ ಇನ್​ ಇಂಡಿಯಾ ಯೋಜನೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ವಿದೇಶದಲ್ಲಿ ಸಂಪೂರ್ಣವಾಗಿ ನಿರ್ಮಾಣಗೊಂಡ ಕಾರಿನ ಮೇಲೆ ಶೇಕಡಾ 70ರಷ್ಟು ತೆರಿಗೆ ವಿಧಿಸಿದ್ದರೆ, ಭಾರತದಲ್ಲಿ ಕಾರುಗಳ ಜೋಡಣೆ ಮಾಡಿದ್ದರೆ ಅಂಥ ಕಾರುಗಳ ಬೆಲೆಯನ್ನೂ ಶೇಕಡಾ 35ರಷ್ಟು ಹೆಚ್ಚಳ ಮಾಡಲಾಗಿದೆ.

ಎಲೆಕ್ಟ್ರಿಕ್​ ಕಾರುಗಳ ಅಬಕಾರಿ ಸುಂಕವನ್ನು ಶೇ. 70ರಷ್ಟು ಏರಿಕೆ ಮಾಡಿದ್ದರೆ, 3 ಲೀಟರ್​ನ ಪೆಟ್ರೋಲ್​ ಹಾಗೂ 2.5 ಲೀಟರ್​ನ ಡೀಸೆಲ್​ ಎಂಜಿನ್​ ಹೊಂದಿರುವ ಕಾರುಗಳ ಮೇಲಿನ ತೆರಿಗೆಯನ್ನು ಶೇಕಡಾ 100ರಷ್ಟು ಏರಿಕೆ ಮಾಡಲಾಗಿದೆ.

ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಐಷಾರಾಮಿ ಕಾರುಗಳ ಮಾರಾಟ ಗಣನೀಯವಾಗಿ ಏರಿಕೆಯಾಗಿದೆ. ಪೋರ್ಶೆ ಇಂಡಿಯಾ 2022ರಲ್ಲಿ 799 ಕಾರುಗಳನ್ನು ಮಾರಾಟ ಮಾಡಿದ್ದರೆ, ಲ್ಯಾಂಬೊರ್ಗಿನಿ 92 ಕಾರುಗಳನ್ನು ಮಾರಾಟ ಮಾಡಿತ್ತು. ಹೀಗಾಗಿ ಸರಕಾರ ಈ ತೆರಿಗೆಯ ಮೇಲೆ ಕಣ್ಣಿಟ್ಟಿದೆ. ಇದೇ ವೇಳೆ ತೆರಿಗೆ ಹೆಚ್ಚಳದ ಕಾರಣ ವಿದೇಶೀ ಕಾರು ಕಂಪನಿಗಳು ನಿರಾಸೆ ವ್ಯಕ್ತಪಡಿಸಿವೆ. ಟೆಸ್ಲಾ ಕಾರುಗಳು ಭಾರತಕ್ಕೆ ಬರದೇ ಇರುವುದಕ್ಕೆ ತೆರಿಗೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Union Budget 2023 : ಲೀಥಿಯಮ್​ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ

Exit mobile version