Site icon Vistara News

Volkswagen : ಫೋಕ್ಸ್​​ವ್ಯಾಗನ್​ ಕಾರುಗಳಿಗೆ ಭರ್ಜರಿ 1.4 ಲಕ್ಷ ರೂಪಾಯಿ ತನಕ ಡಿಸ್ಕೌಂಟ್​!

Volkswagen Virtus and Taigun

#image_title

ಮುಂಬಯಿ: ಫೋಕ್ಸ್ ವ್ಯಾಗನ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಗ್ರಾಹಕರು ಗರಿಷ್ಠ 1.4 ಲಕ್ಷ ತನಕವೂ ರಿಯಾಯಿತಿ ಪಡೆಯಲು ಸಾಧ್ಯವಿದೆ. ತನ್ನ ಪ್ರೀಮಿಯಮ್​ ಎಸ್​ಯುವಿ ಟೈಗುನ್ ಮೇಲೆ ರೂ.1.40 ಲಕ್ಷ ರೂಪಾಯಿವರೆಗೆ ಹಾಘೂ ವರ್ಟಸ್ ಮೇಲೆ ರೂ.1.20 ಲಕ್ಷಗಳವರೆಗೆ ಆಕರ್ಷಕ ರಿಯಾಯಿತಿ ಪ್ರಕಟಿಸಿದೆ. ಈ ರಿಯಾಯಿತಿಗಳು ಮಧ್ಯಮ ಗಾತ್ರದ ಎಸ್​​ಯುವಿ ಮತ್ತು ಸೆಡಾನ್ ಕಾರುಗಳ 2022 ಮತ್ತು 2023 ಮಾಡೆಲ್​ಗಳು ಹಾಗೂ ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾಡೆಲ್​​ಗಳಿಗೂ ಅನ್ವಯಿಸುತ್ತವೆ.

ಇದು ಡೀಲರ್​ಶಿಪ್ ಹಂತದಲ್ಲಿ ನೀಡುವ ರಿಯಾಯಿತಿಯಾಗಿದೆ. ಹೀಗಾಗಿ ಖರೀದಿಯನ್ನು ಅಂತಿಮಗೊಳಿಸುವ ಮೂದಲು ರಿಯಾಯಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮೂಲಗಳು ತಿಳಿಸಿವೆ. ಈ ಆಫರ್​​ಗಳು ಡೀಲರ್ ನಿಂದ ಡೀಲರ್​ಗೆ ಬದಲಾಗುವುದರಿಂದ ಮೊದಲೇ ಖಚಿತಪಡಿಸಿಕೊಳ್ಳುವುದು ಉತ್ತಮ ಎಂದು ಹೇಳಲಾಗಿದೆ.

ಟೈಗುನ್​ ಕಾರಿನ ರಿಯಾಯಿತಿಗಳು

2022 ರ ಮಾಡೆಲ್​ನ ಟೈಗುನ್ ಕಾರಿಗೆ ವೇರಿಯೆಂಟ್​ ಅವಲಂಬಿಸಿ 65,000 ರೂಪಾಯಿತಮ 1.40 ಲಕ್ಷ ರೂ.ಗಳ ವರೆಗೆ ರಿಯಾಯಿತಿ ನೀಡಲಾಗಿದೆ. ಟೈಗುನ್ ಟಾಪ್ಲೈನ್ ಮ್ಯಾನುವಲ್ ವೇರಿಯೆಂಟ್​ಗೆ ಹೆಚ್ಚಿನ ರಿಯಾಯಿತಿ ಲಭ್ಯವಿದ್ದರೆ, ಕಂಫರ್ಟ್ಲೈನ್ ಮ್ಯಾನುವಲ್ ರೂಪಾಂತರವು ಕಡಿಮೆ ರಿಯಾಯಿತಿ ಪಡೆಯಲಿದೆ.

2023 ಮಾಡೆಲ್​​ನ ಟೈಗುನ್ 85,000 ರೂ.ಗಳವರೆಗೆ ರಿಯಾಯಿತಿ ಪ್ರಕಟಿಸಲಾಗಿದೆ. ಟಾಪ್ಲೈನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್​ ವೇರಿಯೆಂಟ್​​ಗೆ ಹೆಚ್ಚಿನ ರಿಯಾಯಿತಿ ಲಭ್ಯವಿದೆ. ಇದಲ್ಲದೆ, ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾದರಿಗಳಿಗೆ, ಫೋಕ್ಸ್ ವ್ಯಾಗನ್ 65,000 ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ.

ಫೋಕ್ಸ್ ವ್ಯಾಗನ್ ವರ್ಟಸ್ ರಿಯಾಯಿತಿಗಳು

2022 ಮಾಡೆಲ್​ನ ವರ್ಟಸ್ ಮೇಲಿನ ಗರಿಷ್ಠ ರಿಯಾಯಿತ 1.20 ಲಕ್ಷ ರೂಪಾಯಿ. ಇದು ಕಂಫರ್ಟ್ಲೈನ್ ಮ್ಯಾನುವಲ್ ಮತ್ತು ಹೈಲೈನ್ ಮ್ಯಾನುವಲ್ ವೇರಿಯೆಂಟ್​​ಗಳಿಗೆ ಲಭ್ಯವಿದೆ. ಮತ್ತೊಂದೆಡೆ, ಜಿಟಿ ಪ್ಲಸ್ ಆಟೋಮ್ಯಾಟಿಕ್ ವೇರಿಯೆಂಟ್​ನ ವಿರ್ಟಸ್ ಮೇಲೆ ಕೇವಲ 20 ಸಾವಿರ ರೂಪಾಯಿ ರಿಯಾಯಿತಿ ಮಾತ್ರ ನೀಡಲಾಗಿದೆ.

ಒದ

2023 ಮಾಡೆಲ್​ನ ವರ್ಟನ್​ ಕಾಂಫೋರ್ಲೈನ್ ಮ್ಯಾನುವಲ್, ಟಾಪ್ಲೈನ್ ಮ್ಯಾನುವಲ್ ಮತ್ತು ಟಾಪ್ಲೈನ್ ಆಟೋಮ್ಯಾಟಿಕ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ ಇದಕ್ಕೆ 85,000 ರೂ.ಗಳವರೆಗೆ ರಿಯಾಯಿತಿ ನೀಡಲಾಗಿದೆ. ಫೋಕ್ಸ್ ವ್ಯಾಗನ್ ಬಿಎಸ್ 6 ಫೇಸ್ -2 ಕಾಂಪ್ಲೈಂಟ್ ಮಾದರಿಗಳ ಮೇಲೆ 55,000 ರೂ.ಗಳವರೆಗೆ ಡಿಸ್ಕೌಂಟ್​ ಘೋಷಿಸಲಾಗಿದೆ.

ಹೊಸ ಟೈಗನ್, ವರ್ಟಸ್ ವೇರಿಯೆಂಟ್​​ಗಳು

ಫೋಕ್ಸ್ ವ್ಯಾಗನ್ ವರ್ಟಸ್ ಜಿಟಿ ಪ್ಲಸ್ ಟ್ರಿಮ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 16.89 ಲಕ್ಷ ರೂ.ಗಳಿಗೆ (ಎಕ್ಸ್ ಶೋ ರೂಂ, ಭಾರತ) ಬಿಡುಗಡೆ ಮಾಡಿತು. ಜರ್ಮನ್ ಕಾರು ತಯಾರಕ ಕಂಪನಿಯು ಟೈಗುನ್ ಗಾಗಿ ಎರಡು ಹೊಸ ವೇರಿಯೆಂಟ್ಗಳನ್ನೂ ಬಿಡುಗಡೆ ಮಾಡಿದೆ. ಜಿಟಿ ಆಟೋಮ್ಯಾಟಿಕ್ ಮತ್ತು ಜಿಟಿ ಪ್ಲಸ್ ಮ್ಯಾನುವಲ್ – ಕ್ರಮವಾಗಿ 16.89 ಲಕ್ಷ ಮತ್ತು 17.79 ಲಕ್ಷ ರೂಪಾಯಿಗಳಿಗೆ ಭಾರತದಲ್ಲಿ ಲಭ್ಯವಿದೆ.

Exit mobile version