ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಅತ್ಯಂತ ಬೇಡಿಕೆಯ ಎಮ್ಪಿವಿ ಕಾರು ಇನ್ನೋವಾ ಕ್ರಿಸ್ಟಾದ ಬೆಲೆಯನ್ನು ಅನಾವರಣ ಮಾಡಿದೆ. ಇದು ಡೀಸೆಲ್ ಎಂಜಿನ್ ಹೊಂದಿರುವ ಕಾರಾಗಿದ್ದು ಬೇಡಿಕೆಯೂ ಜಾಸ್ತಿಯಿದೆ. ಇದೀಗ ಇನ್ನೋವಾ ಕ್ರಿಸ್ಟಾ ಕಾರು ಜಿ, ಜಿಎಕ್ಸ್, ವಿಎಕ್ಸ್ ಹಾಗೂ ಜಡ್ಎಕ್ಸ್ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಇದರಲ್ಲಿ ಜಿ ಮತ್ತು ಜಿಎಕ್ಸ್ ವೇರಿಯೆಂಟ್ಗಳ ಬೆಲೆಯನ್ನು ಕಳೆದ ತಿಂಗಳು ಘೋಷಣೆ ಮಾಡಲಾಗಿತ್ತು. ಇದೀಗ ವಿಎಕ್ಸ್ ಹಾಗೂ ಜಡ್ಎಕ್ಸ್ ಮಾಡೆಲ್ಗಳ ಬೆಲೆಯನ್ನು ಪ್ರಕಟಿಸಲಾಗಿದೆ.
ಟಾಪ್ ಎಂಡ್ ಜಡ್ಎಕ್ಸ್ ಮಾಡೆಲ್ 7 ಸೀಟ್ಗಳ ಲೇಔಟ್ನಲ್ಲಿ ಲಭ್ಯವಿದ್ದು, ಎಕ್ಸ್ಶೋರೂಮ್ಬೆಲೆ 25.43 ಲಕ್ಷ ರೂಪಾಯಿಗಳು. ವಿಎಕ್ಸ್ ವೇರಿಯೆಂಟ್ನ 8 ಸೀಟ್ ಲೇಔಟ್ ಕಾರು 23.84 ಲಕ್ಷ ರೂಪಾಯಿಗೆ ಲರ್ಭಯವಿದ್ದರೆ, 7 ಸೀಟ್ನ ಲೇಔಟ್ 23.79 ಲಕ್ಷ ರೂಪಾಯಿಗೆ ಲಭ್ಯವಿದೆ. ಈ ಕಾರುಗಳ ಬುಕಿಂಗ್ ಈಗಾಲೇ ಆರಂಭಗೊಂಡಿದ್ದು, ಸಮೀಪದ ಶೋರೂಮ್ಗೆ ತೆರಳಿ ಬುಕ್ ಮಾಡಿಕೊಳ್ಳಬಹುದು. ಬುಕಿಂಗ್ ಮೊತ್ತ 50 ಸಾವಿರ ರೂಪಾಯಿಗಳು.
2023ರ ಇನ್ನೋವಾ ಕ್ರಿಸ್ಟಾ ಕೆಲವೊಂದು ಕಾಸ್ಮೆಟಿಕ್ ಅಪ್ಡೇಟ್ಗಳನ್ನು ಪಡೆದುಕೊಂಡಿದೆ. ಈ ಎಮ್ಪಿವಿ ಟ್ರೇಪ್ಜಾಯಿಡಲ್ ಪಿಯಾನೊ ಬ್ಲ್ಯಾಕ್ ಗ್ರಿಲ್ ಹೊಂದಿದ್ದು, ಕ್ರೋಮ್ ಇನ್ಸರ್ಟ್ಗಳನ್ನು ಹೊಂದಿದೆ. ಬಂಪರ್ನಲ್ಲಿ ಸಣ್ಣ ಮಾರ್ಪಾಟು ಮಾಡಲಾಗಿದ್ದರೂ, ಹೆಡ್ಲ್ಯಾಂಪ್ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಂಟೀರಿಯರ್ನಲ್ಲಿ ಲೇಔಟ್ ಹಾಗೂ ಡಿಸೈನ್ ಹಾಗೆಯೇ ಉಳಿಸಲಾಗಿದೆ. ಆದರೆ, ಹಿಂದಿಗಿಂತ ದೊಡ್ಡ ಗಾತ್ರದ ಇನ್ಫೋಟೈನ್ಮೆಂಟ್ ಸಿಸ್ಟಮ್ ಇಡಲಾಗಿದೆ.
ಏಳು ಏರ್ಬ್ಯಾಗ್ಗಳು, ಫ್ರಂಟ್ ರಿಯರ್ ಪಾರ್ಕಿಂಗ್ ಸೆನ್ಸರ್, ಎಬಿಎಸ್, ಇಬಿಡಿ ಫೀಚರ್ಗಳಿವೆ. ಜತೆಗೆ ಎಂಟು ರೀತಿಯಲ್ಲಿ ಅಡ್ಜೆಸ್ಟ್ ಮಾಡಬಹುದಾದ ಸೀಟ್ಗಳು, ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದು ಹೊಂದಿದ್ದು, ಆ್ಯಪರ್ ಕಾರ್ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಫೀಚರ್ ಅಳವಡಿಕೆಯಾಗಿದೆ. ವೆಹಿಕಲ್ ಟ್ರ್ಯಾಕಿಂಗ್, ಜಿಯೊ ಫೆನ್ಸಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತಿತರ ಫೀಚರ್ಗಳಿವೆ.
ಎಂಜಿನ್ ಹೇಗಿದೆ?
ಇನ್ನೋವಾ ಕ್ರಿಸ್ಟಾ ಈಗ ಡೀಸೆಲ್ ಎಂಜಿನ್ನಲ್ಲಿ ಮಾತ್ರ ಲಭ್ಯವಿದೆ. ಇದರಲ್ಲಿ 2.4 ಲೀಟರ್ನ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ಇದ್ದು, 150 ಪಿಎಸ್ ಪವರ್ ಹಾಗೂ 343 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು ರಿಯರ್ ವೀಲ್ ಡ್ರೈವ್ ಆಗಿದ್ದು, 5 ಸ್ಪೀಡ್ನ ಗೇರ್ ಬಾಕ್ಸ್ ಹೊಂದಿದೆ.
ಎಷ್ಟು ಬಣ್ಣಗಳಲ್ಲಿ ಲಭ್ಯ?
ಸೂಪರ್ ವೈಟ್, ಅಟಿಟ್ಯೂಡ್ ಬ್ಲ್ಯಾಕ್ ಮಿಕಾ. ಅವಂಟ್ ಗ್ರೇಡ್ ಬ್ರಾಂಜ್ ಮೆಟಾಲಿಕ್, ಸಿಲ್ವರ್ ಮೆಟಾಲಿಕ್, ಪ್ಲಾಟಿನಮ್ ವೈಟ್ ಪರ್ಲ್ ಬಣ್ಣಗಳಲ್ಲಿ ಲಭ್ಯವಿದೆ.