ಬೆಂಗಳೂರು : ಇತ್ತೀಚೆಗೆ ಅನಾವರಣಗೊಂಡ ರಾಯಲ್ ಎನ್ ಫೀಲ್ಡ್ (royal Enfield bike price) ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರ ರೂ.2.69 ಲಕ್ಷ ರೂಪಾಯಿಗಳಾಗಿವೆ. ಡಿಸೆಂಬರ್ 31ರವರೆಗೆ ಈ ಬೆಲೆಯಲ್ಲಿ ಬೈಕ್ ದೊರೆಯಲಿದೆ. ಹಿಮಾಲಯನ್ 450 ಸರಣಿಯ ಬೇಸ್ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 2.74 ಲಕ್ಷ ರೂಪಾಯಿಗಳಾದರೆ, ಪಾಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.79 ಲಕ್ಷ ರೂಪಾಯಿಗಳಾಗಿದೆ. ಬೈಕ್ಗಳು ಏಕ ರೂಪದಲ್ಲಿ ಇರುವ ಹೊರತಾಗಿಯೂ ಪ್ರತಿ ವೇರಿಯೆಂಟ್ ವಿಭಿನ್ನ ಬಣ್ಣಗಳನ್ನು ಹೊಂದಿದೆ. ಅಂದ ಹಾಗೆ ಈ ಬೆಲೆಗಳು ಪರಿಚಯಾತ್ಮಕ ಬೆಲೆಯಾಗಿದೆ.
ಈ ಮಾಡೆಲ್ಗಳು ಗ್ರೌಂಡ್ ಲೆವೆಲ್ ಅಭಿವೃದ್ಧಿಯಾಗಿದ್ದು. ರಾಯಲ್ ಎನ್ ಫೀಲ್ಡ್ ನಿಂದ ಹೊಸ ಸರಣಿಯ ಉತ್ಪನ್ನಗಳ ಪ್ರಾರಂಭವನ್ನು ಸೂಚಿಸುತ್ತದೆ. ಟ್ವಿನ್ ಸ್ಪಾರ್ ಫ್ರೇಮ್ ಹೊಂದಿರುವ ಈ ಬೈಕ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ ಶೆರ್ಪಾ 450 ಎಂಜಿನ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ :
ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಹಿಮಾಲಯನ್ ನ 452 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ ಈ ಎಂಜಿನ್ 39.4 ಬಿ ಹೆಚ್ ಪಿ ಪವರ್ ಮತ್ತು 40 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಎಂಜಿನ್ ಸಾಮರ್ಥ್ಯ ಎಷ್ಟು?
ಹಿಮಾಲಯನ್ 450 ಬೈಕಿನ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ ಯುಎಸ್ ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಈ ಬೈಕ್ 230 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸೀಟ್ ಎತ್ತರವನ್ನು ಸರಿಹೊಂದಿಸಬಹುದು, 825 ಎಂಎಂ ನಿಂದ 845 ಎಂಎಂ ವರೆಗೆ ಏರಿಸಲು ಸಾಧ್ಯ. 805 ಎಂಎಂ ಸೀಟ್ ಅಕ್ಸೆಸರಿಯಾಗಿ ಲಭ್ಯವಿದೆ. ರಾಯಲ್ ಎನ್ ಫೀಲ್ಡ್ ಅಡ್ವೆಂಚರ್ ರೇಂಜ್ ಸೇರಿದಂತೆ ಅಡ್ವೆಂಚರ್ ಬೈಕ್ ಗಾಗಿ ವಿವಿಧ ಅಕ್ಸೆಸರಿಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಎತ್ತರದ ಸೀಟ್ ಹಾಗೂ ಸುಧಾರಿತ ರಕ್ಷಣಾ ರ್ಯಾಲಿ ಕಿಟ್ ಆಯ್ಕೆ ನೀಡಲಾಗಿದೆ.
ಟ್ಯೂಬ್ ಟಯರ್ಗಳು
ಹಿಮಾಲಯನ್ 450 ಬೈಕ್ 21 ಇಂಚಿನ ಫ್ರಂಟ್ ಮತ್ತು 17 ಇಂಚಿನ ರಿಯರ್ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಟ್ಯೂಬ್ ಮಾದರಿಯ ಟೈರ್ ಗಳನ್ನು ಹೊಂದಿದೆ. ರಾಯಲ್ ಎನ್ ಫೀಲ್ಡ್ ಮುಂದಿನ ವರ್ಷ ಟ್ಯೂಬ್ ಲೆಸ್ ಟೈರ್ ಗಳನ್ನು ಸ್ವಲ್ಪ ಹೆಚ್ಚಿನ ಬೆಲೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಹೊಸ ಹಿಮಾಲಯನ್ ಬೈಕಿನ ವಿತರಣೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೆಟಿಎಂ 390 ಅಡ್ವೆಂಚರ್, ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.
ಎನ್ಫೀಲ್ಡ್ ಶಾಟ್ಗನ್ 650 ಅನಾವರಣ
ರಾಯಲ್ ಎನ್ ಫೀಲ್ಡ್ ಕಂಪನಿಯು 2023ರ ಮೋಟೊವರ್ಸ್ ನಲ್ಲಿ ಶಾಟ್ ಗನ್ 650 ಬೈಕ್ ಅನ್ನು ಅನಾವರಣಗೊಳಿಸಿದೆ. ಈಗಾಗಲೇ ಇಂಟರ್ ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಸೂಪರ್ ಮೆಟಿಯೋರ್ ಬೈಕುಗಳನ್ನು ಒಳಗೊಂಡಿರುವ 650 ಸಿಸಿ ಸರಣಿಯನ್ನು ವಿಸ್ತರಿಸಿದೆ.
ಈ ಬೈಕ್ ಬುಲೆಟ್ 350 ಬೈಕಿನಲ್ಲಿ ಕೈಯಿಂದ ಮಾಡಿದ ಪಿನ್ ಸ್ಟ್ರೈಪಿಂಗ್ ನಂತೆಯೇ. ವೈಶಿಷ್ಟ್ಯ ಹೆಚ್ಚಿಸಲು ಕೈಯಿಂದ ಬಣ್ಣ ಬಳಿಯಲಾಗಿದೆ. ವಿಶೇಷವೆಂದರೆ, ಎಂಜಿನ್ ಕೇಸಿಂಗ್ ಅನ್ನು ಹೊಳಪುಳ್ಳ ಕಪ್ಪು ಫಿನಿಶ್ ನಲ್ಲಿ ನೀಡಲಾಗಿದೆ. ಇದು ರಾಯಲ್ ಎನ್ ಫೀಲ್ಡ್ ನಲ್ಲಿ ಸಿಗುವ ಹೊಸ ವಿನ್ಯಾಸವಾಗಿದೆ.
ವಿಶೇಷ ಆವೃತ್ತಿಯ ಶಾಟ್ ಗನ್ 650 ಮೋಟಾರ್ ವರ್ಸ್ ಎಡಿಷನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.25 ಲಕ್ಷಗಳಾಗಿದೆ. 2024ರ ಜನವರಿಯಿಂದ ಈ ಬೈಕಿನ ಡೆಲಿವರಿ ಆರಂಭವಾಗಲಿದೆ. ಈ ಬೆಲೆಯನ್ನು ಒಳಗೊಂಡಂತೆ, ಈ ಬೈಕಿನಲ್ಲಿ ಬಾರ್-ಎಂಡ್ ಮಿರರ್ ಗಳು ಮತ್ತು ಎಲ್ ಇಡಿ ಟರ್ನ್ ಇಂಡಿಕೇಟರ್ ಗಳಂತಹ ಆಯ್ದ ನೈಜ ಬಿಡಿಭಾಗಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಸೀಮಿತ ಆವೃತ್ತಿಯ ಮೋಟಾರ್ ಸೈಕಲ್ ವಿಸ್ತರಿತ ವಾರಂಟಿ ಸೇವೆಯನ್ನು ಹೊಂದಿರುತ್ತದೆ.