Site icon Vistara News

Hyundai Exter : ಟಾಟಾ ಪಂಚ್​ಗೆ ಪಂಚ್​ ಕೊಡಲು ಬರುತ್ತಿರುವ ಕಾರಿನ ಇಂಟೀರಿಯರ್​ ರಿವೀಲ್​

Hyundai Exter interior

#image_title

ನವ ದೆಹಲಿ: ಹ್ಯುಂಡೈ ಕಂಪನಿಯು ಜುಲೈ 10ರಂದು ತನ್ನ ಬಹುನಿರಿಕ್ಷಿತ ಸಬ್​ಕಾಂಪಾಕ್ಟ್​ ಎಸ್​ಯುವಿ ಎಕ್ಸ್​​ಟೆರ್​ (Hyundai Exter) ಬಿಡುಗಡೆ ಮಾಡಲಿದೆ. ಅದಕ್ಕಿಂತ ಮೊದಲು ಒಂದೊಂದಾಗಿ ಅದರ ವಿವರಗಳನ್ನು ಬಹಿರಂಗ ಮಾಡುತ್ತಿದೆ. ಮೊದಲಿಗೆ ಕೇವಲ ಟೀಸರ್ ಬಿಟ್ಟಿದ್ದ ಕಂಪನಿ ನಂತರ ಮೂಲಕ ವಿನ್ಯಾಸ ತೋರಿಸಿತ್ತು. ಬಳಿಕ ಹಿಂದೆ ಮುಂದೆ ಹಾಗೂ ಸೈಡ್​ ಪ್ರೊಫೈಲ್ ಚಿತ್ರವನ್ನು ಅನಾವರಣ ಮಾಡಿಕೊಂಡಿತ್ತು. ಇದೀಗ ಅದರ ಹಿಂಬದಿ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳು ಈ ಹಿಂದೆಯೇ ಆನ್​ಲೈನ್​ನಲ್ಲಿ ಸೋರಿಕೆಯಾಗಿದ್ದವು. ಇದೀಗ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.

ಎಕ್ಸ್​ಟೆರ್​ನ ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್ ಬೋರ್ಡ್ ವಿನ್ಯಾಸವು ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾದಂತಿದೆ. ಆದಾಗ್ಯೂ, ಕೆಲವು ವಿಶಿಷ್ಟ ಅಂಶಗಳನ್ನು ಗುರುತಿಸಬಹುದಾಗಿದೆ. ಮೊದಲನೆಯದಾಗಿ, ನಿಯೋಸ್ ಮತ್ತು ಔರಾದಲ್ಲಿ ಕಂಡುಬರುವ ಬೂದು/ ಕಪ್ಪು ಅಥವಾ ಕಂಚು/ ಕಪ್ಪು ಒಳಾಂಗಣದ ಬದಲು ಇಂಟೀರಿಯರ್​ ಆಲ್-ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಎಕ್ಸ್ಟರ್ 4.2 ಇಂಚಿನ ಎಂಐಡಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್​ಸ್ಟ್ರುಮೆಂಟ್​ ಕ್ಲಸ್ಟರ್​ ಹೊಂದಿದೆ. ಇದು ಹ್ಯುಂಡೈನ ದುಬಾರಿ ಕಾರುಗಳಾದ ಇದು ಐ 20 ಮತ್ತು ವೆರ್ನಾದಲ್ಲಿ ಲಭ್ಯವಿದೆ.

ಟಾಪ್​ ವೇರಿಯೆಂಟ್​ ಕಾರಿನಲ್ಲಿ 8.0-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ನೀಡಲಾಗಿದೆ. ಡ್ಯಾಶ್​ಬೋರ್ಡ್ ಮತ್ತು ಗೇರ್ ಲಿವರ್ ಸುತ್ತಲೂ ಪ್ಯಾಟರ್ನ್​ ಎಫೆಕ್ಟ್​ ನೀಡಲಾಗಿದೆ. ಇದು ಎರಡೂ ತುದಿಗಳಲ್ಲಿ ವೃತ್ತಾಕಾರದ ಎಸಿ ವೆಂಟ್​​​ಗಳನ್ನು ಮತ್ತು ಆಲಿವ್ ಹಸಿರು ಬಣ್ಣವನ್ನು ಹೊಂದಿರುವ ಅರೆ-ಲೆದರ್ಲೆಟ್ ಸೀಟ್ ಅಪ್ ಹೋಲ್​ಸ್ಟ್ರಿಯನ್ನು ಪಡೆದುಕೊಂಡಿದೆ. ಎಕ್ಸ್​ಟೆರ್​​ ಕಾರಿನ ಹಿಂಭಾಗದ ಮೂರು ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ಮತ್ತು ಎರಡನೇ ಸಾಲಿಗೆ ಎಸಿ ವೆಂಟ್ ನೀಡಲಾಗಿದೆ. ಆದರೆ ಇದು ಹಿಂಭಾಗದ ಪ್ರಯಾಣಿಕರಿಗೆ ಅರ್ಮ್​ರೆಸ್ಟ್​ ನೀಡಲಾಗಿಲ್ಲ.

ಹ್ಯುಂಡೈ ಎಕ್ಸ್​ಟೆರ್ ಕಾರು​ ಕನೆಕ್ಟೆಡ್ ಕಾರ್ ಟೆಕ್ ಹೊಂದಿದೆ. ಬಹು ಭಾಷೆಗಳಲ್ಲಿ ಧ್ವನಿ-ಸಕ್ರಿಯ ಆದೇಶಗಳು (ವಾಯ್ಸ್​ ಆಕ್ಟಿವೇಟೆಡ್​ ಕಮಾಂಡ್​) ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ನಕ್ಷೆಗಳಿಗಾಗಿ ಓವರ್-ದಿ-ಏರ್ (ಒಟಿಎ) ಅಪ್​ಗ್ರೇಡ್​ ಕೂಡ ನೀಡಲಾಗಿದೆ. ಟಾಪ್​ ವೇರಿಯೆಂಟ್​​ಗಳಲ್ಲಿ ಆಟೋಮ್ಯಾಟಿಕ್​ ಕ್ಲೈಮೇಟ್ ಕಂಟ್ರೋಲ್, ಆಪಲ್ ಕಾರ್​ಪ್ಲೇ, ಆಂಡ್ರಾಯ್ಡ್ ಆಟೋ, ಇನ್-ಬಿಲ್ಟ್ ನ್ಯಾವಿಗೇಷನ್ ಮತ್ತು ಸನ್ ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

ಹ್ಯುಂಡೈ ಎಕ್ಸ್ಟರ್ ಪವರ್ ಟ್ರೇನ್​

ಎಕ್ಸ್​ಟೆರ್ ಕಾರಿನಲ್ಲಿ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ​83 ಬಿಎಚ್​​ಪಿ ಪವರ್ ಬಿಡುಗಡೆ ಮಾಡುತ್ತದೆ ಈ ಎಂಜಿನ್​ ವೆನ್ಯೂ, ಮತ್ತು ನಿಯೋಸ್​ನಲ್ಲಿದೆ. ಅದೇ ರೀತಿ ಫ್ಯಾಕ್ಟರಿ ಫಿಟೆಡ್​​ ಸಿಎನ್ ಜಿ ಕಿಟ್ ಅನ್ನು ಪಡೆಯುತ್ತದೆ. ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಆಟೋಮ್ಯಾಟಿಕ್ ಟ್ರಾನ್ಸ್​​ಮಿಷನ್​ ಜತೆ ಬರುತ್ತದೆ. ಸಿಎನ್​​ಜಿಯಲ್ಲಿ ಮ್ಯಾನುವಲ್ ಗೇರ್​ ಬಾಕ್ಸ್ ಮಾತ್ರ ಇದೆ.

ಬುಕಿಂಗ್​ ವಿವರ

ಎಕ್ಸ್​ಟೆರ್​​ ಡೆಲಿವರಿಗಳು ಜುಲೈ ಮಧ್ಯದ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಪ್ರಸ್ತುತ 11,000 ರೂ.ಗಳಿಗೆ ಬುಕಿಂಗ್ ನಡೆಯುತ್ತಿದೆ. ಬಿಡುಗಡೆಯಾದ ನಂತರ, ಎಕ್ಸ್​ಟೆರ್​​ ಟಾಟಾ ಪಂಚ್, ಸಿಟ್ರೋಯೆನ್ ಸಿ3 ಮತ್ತು ಮಾರುತಿ ಇಗ್ನಿಸ್ ಪೈಪೋಟಿ ಒಡ್ಡಲಿದೆ.

Exit mobile version