Site icon Vistara News

ನಿಸ್ಸಾನ್ ಮೋಟಾರ್ ಇಂಡಿಯಾ ವತಿಯಿಂದ ದೇಶಾದ್ಯಂತ ಗ್ರಾಹಕರಿಗೆ ಉಚಿತ ಎಸಿ ತಪಾಸಣೆ ಶಿಬಿರ

#image_title

ಬೆಂಗಳೂರು: ಗ್ರಾಹಕ ಕೇಂದ್ರಿತ ಮತ್ತು ಉತ್ಕೃಷ್ಟ ಸೇವೆಯ ಮೇಲೆ ನಿರಂತರ ಗಮನ ಹೊಂದಿರುವ ನಿಸ್ಸಾನ್ ಮೋಟಾರ್ ಇಂಡಿಯಾ ತನ್ನೆಲ್ಲ ಗ್ರಾಹಕರ ಕಾರುಗಳಿಗೆ ಉಚಿತ ಎಸಿ ತಪಾಸಣೆ ಶಿಬಿರಗಳನ್ನು ಘೋಷಿಸಿದೆ. ಭಾರತದಾದ್ಯಂತ ಇರುವ ನಿಸ್ಸಾನ್ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಏಪ್ರಿಲ್ 15ರಿಂದ ಜೂನ್ 15, 2023ರ ವರೆಗೆ ಕಾರುಗಳ ಎಸಿ ತಪಾಸಣೆ ಶಿಬಿರಗಳನ್ನು ನಿಸ್ಸಾನ್ ನಡೆಸಲಿದೆ. ನಿಸ್ಸಾನ್ ಮತ್ತು ಡಟ್ಸನ್ ವಾಹನ ಮಾಲೀಕರು ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆಗಾಗಿ ಸಮಯವನ್ನು ಸುಲಭವಾಗಿ ಬುಕ್ ಮಾಡಬಹುದು. ಪ್ರಸ್ತುತ ನಿಸ್ಸಾನ್ ಮತ್ತು ದಟ್ಸನ್ ಬ್ರಾಂಡ್ ವಾಹನಗಳಿಗೆ ಸೇವೆ ನೀಡುತ್ತಿರುವ 122-ವರ್ಕ್‌ಶಾಪ್ ಜಾಲದಲ್ಲಿ ಈ ಸೇವಾ ಶಿಬಿರಗಳು ನಡೆಯಲಿವೆ.

ನಿಸ್ಸಾನ್-ತರಬೇತಿ ಪಡೆದ ವೃತ್ತಿಪರ ಮೆಕ್ಯಾನಿಕ್‌ಗಳು ಎಸಿ-ತಪಾಸಣೆ ಶಿಬಿರಗಳನ್ನು ನಡೆಸಿ, ಸೇವೆಯ ಗುಣಮಟ್ಟವನ್ನು ಖಚಿತಪಡಿಸಲಿದ್ದಾರೆ. ಅಧಿಕೃತ ಬಿಡಿಭಾಗಗಳನ್ನೇ ಬಳಸಲಿದ್ದಾರೆ. ಶಿಬಿರವು ಸಮಗ್ರ 20-ಅಂಶಗಳ ತಪಾಸಣೆಯನ್ನು ಒಳಗೊಂಡಿರುತ್ತದೆ. ಉಚಿತ ಎಸಿ ತಪಾಸಣೆ, ವಾಹನದ ಆಂತರಿಕ, ಬಾಹ್ಯ ಮತ್ತು ತಳಭಾಗದ ತಪಾಸಣೆ ಹಾಗೂ ರೋಡ್ ಟೆಸ್ಟ್ ಕೂಡ ನಡೆಸಲಿದ್ದಾರೆ. ಇದಲ್ಲದೆ, ಗ್ರಾಹಕರ ವಾಹನಗಳಿಗೆ ಟಾಪ್ ವಾಶ್ ಕಾಂಪ್ಲಿಮೆಂಟರಿ ಕೊಡುಗೆಯೂ ಸಿಗಲಿದೆ. ಹೆಚ್ಚುವರಿಯಾಗಿ, ಗ್ರಾಹಕರು ಲೇಬರ್ ವೆಚ್ಚಗಳ ಮೇಲೆ 20% ಮತ್ತು ಮೌಲ್ಯವರ್ಧಿತ ಸೇವೆಗಳ (VAS) ಮೇಲೆ 10% ವರೆಗೆ ರಿಯಾಯಿತಿ ಪ್ರಯೋಜನ ಪಡೆಯಲಿದ್ದಾರೆ.

ಇದನ್ನೂ ಓದಿ : Tata Nexon EV : ನಾಲ್ಕು ದಿನದಲ್ಲಿ 4000 ಕಿ. ಮೀ ಪ್ರಯಾಣ, ಟಾಟಾ ನೆಕ್ಸಾನ್​ ಇವಿ ಕಾರಿನ ದಾಖಲೆ

ನಿಸ್ಸಾನ್ ಮೋಟಾರ್ ಇಂಡಿಯಾ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡಬಲ್ಲ ಪ್ರಿ-ಪೇಯ್ಡ್ ಮೆಂಟೆನೆನ್ಸ್ ಪ್ಯಾಕೇಜ್ (PMP) ಅನ್ನು ಸೇವಾ ಶಿಬಿರಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಿದೆ. ಇದು ಗ್ರಾಹಕರಿಗೆ ನಿರ್ವಹಣಾ ವೆಚ್ಚದಲ್ಲಿ 20% ವರೆಗೆ ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ ಹಾಗೂ ಜಂಜಾಟವಿಲ್ಲದ ಸವಾರಿ ಅನುಭವವನ್ನು ಖಾತ್ರಿಪಡಿಸುತ್ತದೆ. ದೇಶಾದ್ಯಂತ ಯಾವುದೇ ನಿಸ್ಸಾನ್ ಅಧಿಕೃತ ವರ್ಕ್‌ಶಾಪ್‌ನಲ್ಲಿ ನಗದು ರಹಿತ ನಿರ್ವಹಣೆ, 5 ವರ್ಷಗಳವರೆಗೆ ಕವರೇಜ್, ಹಣದ ನಿರ್ವಹಣಾ ಸೇವೆಗಳು ಮತ್ತು ಕಾರನ್ನು ಮಾರಾಟ ಮಾಡಿದಾಗ ಹೊಸ ಮಾಲೀಕರಿಗೆ ಈ ಸೌಲಭ್ಯವನ್ನು ವರ್ಗಾಯಿಸಬಹುದಾದ ಅಸಾಧಾರಣ ಪ್ರಯೋಜನಗಳನ್ನು ನೀಡುತ್ತದೆ. .

ಯೋಜನೆ ವಿಶೇಷತೆಗಳೇನು?

Exit mobile version