ನವ ದೆಹಲಿ: ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಹಾಗೂ ಫಿಟ್ ಆಗಿರದ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರ ಸರಕಾರದ ಗುಜರಿ ನೀತಿ-2022ಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union Budget 2023) ಹೇಳಿದರು. ಈ ಯೋಜನೆಗೆ ಉತ್ತೇಜನ ಕೊಡುವ ಉದ್ದೇಶದಿಂದ ಕೇಂದ್ರ ಸರಕಾರ ಇನ್ನಷ್ಟು ಅನುದಾನ ಮೀಸಲಿಡಲಿದೆ ಹಾಗೂ ರಾಜ್ಯ ಸರಕಾರಗಳಿಗೂ ಬೆಂಬಲ ನೀಡಲಿದೆ ಎಂದು ಹೇಳಿದರು.
ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತರಾಮನ್ ಅವರು 2021-2022ರ ಬಜೆಟ್‌ನಲ್ಲಿ ಘೋಷಿಸಲಾದ ಗುಜರಿ ನೀತಿಗೆ ಪೂರಕವಾಗಿ ಕೇಂದ್ರ ಸರಕಾರ ಇನ್ನಷ್ಟು ಅನುದಾನ ಒದಗಿಸಲಿದೆ. ರಾಜ್ಯ ಸರಕಾರ ಅಧೀನದಲ್ಲಿರುವ ಹಳೆ ವಾಹನಗಳು ಆಂಬ್ಯುಲೆನ್ಸ್ಗಳನ್ನು ಗುಜರಿಗೆ ಹಾಕುವ ನಿಟ್ಟಿನಲ್ಲಿಯೂ ಬೆಂಬಲ ಒದಗಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : Union Budget 2023: ಬಜೆಟ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
15 ವರ್ಷಕ್ಕಿಂತ ಹಳೆಯದಾಗಿರುವ ಹಾಗೂ ಪರಿಸರಕ್ಕೆ ಮಾರಕವಾಗಿರುವ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹೊಸ ನೀತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿತ್ತು. ಅದೇ ರೀತಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸೇವೆಯಲ್ಲಿರುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ನಿಯಮವನ್ನೂ ಜಾರಿಗೆ ತಂದಿತ್ತು.