ಮುಂಬಯಿ: ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ ಹೋಂಡಾ ತನ್ನ ಪ್ರೀಮಿಯಮ್ ಸೆಡಾನ್ ಕಾರು ಹೋಂಡಾ ಸಿಟಿಯನ್ನು (Honda City) ಮಾರುಕಟ್ಟೆಗೆ ಇಳಿಸಿದೆ. ಇದು ಆರನೇ ಪೀಳಿಗೆಯ ಹೋಂಡಾ ಸಿಟಿ ಎಂದು ಕಂಪನಿ ಹೇಳಿದೆ. ಹೆಚ್ಚು ಬದಲಾವಣೆ ಮಾಡದ ಹೊರತಾಗಿಯೂ ಕಾರಿನ ಗ್ರಾಹಕರ ಪಾಲಿಗೆ ಹೊಚ್ಚ ಹೊಸ ಅನುಭವ ನೀಡಬಲ್ಲದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕಾರಿನಲ್ಲಿ ಕುರಿತ ಐದು ವಿಷಯಗಳನ್ನು ಇಲ್ಲಿ ಈ ಕೆಳಗೆ ವಿವರಿಸಲಾಗಿದೆ.
ಹೋಂಡಾ ಸಿಟಿ 2023 ಎಕ್ಸ್ಟೀರಿಯರ್
ಹೊರ ಭಾಗದಲ್ಲಿ ಕಾಸ್ಮೆಟಿಕ್ ಚೇಂಜ್ಗಳನ್ನು ಮಾತ್ರ ಮಾಡಲಾಗಿದೆ. ಸ್ಪೋರ್ಟಿ ಫ್ರಂಟ್ ಗ್ರಿಲ್ಗಳನ್ನು ನೀಡಲಾಗಿದ್ದು, ಬಂಪರ್ ಮರು ವಿನ್ಯಾಸ ಮಾಡಲಾಗಿದೆ. ಕಾರ್ಬನ್ ಮೌಲ್ಡಿಂಗ್ ಮೂಲಕ ಅತ್ಯಾಕರ್ಷಕಗೊಳಿಸಲಾಗಿದೆ. ಹೊಸ ಮಾದರಿಯ ಫಾಗ್ ಲ್ಯಾಂಪ್ ಹಾಗೂ ಬಾಡಿ ಕಲರ್ ಸ್ಪಾಯಿಲರ್ ನೀಡಲಾಗಿದೆ. ಹಿಂದಿನ ಬಂಪರ್ ಕೂಡ ಮರು ವಿನ್ಯಾಸ ಮಾಡಿದ್ದು, ಫಾಕ್ಸ್ ಕಾರ್ಬನ್ ಡಿಫ್ಯೂಸರ್ ಕೂಡ ಇದೆ. 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ನೊಂದಿಗೆ ಕಾರು ಮಾರುಕಟ್ಟೆಗೆ ಇಳಿದಿದೆ. ಒಬ್ಸಿಡಿಯಾನ್ ಬ್ಯ್ಲೂ ಪರ್ಲ್ ಬಣ್ಣ ಹೊಸ ಸೇರ್ಪಡೆಯಾಗಿದೆ.
ಹೋಂಡಾ ಸಿಟಿ 2023 ಫೀಚರ್ಗಳು
ಆಂಬಿಯೆಂಟ್ ಲೈಟಿಂಗ್ ಮೂಲಕ ಕಾರಿಗೆ ಹೊಸ ಲುಕ್ ನೀಡಲಾಗಿದೆ. ರೈನ್ ಸೆನ್ಸಿಂಗ್ ವೈಪರ್, ವೈರ್ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ಕಾರ್ ಪ್ಲೇ ಹಾಗೂ ವೈರ್ಲೆಸ್ ಚಾರ್ಜರ್ ಕೂಡ ನೀಡಲಾಗಿದೆ.
ಹೋಂಡಾ ಸಿಟಿ 2023 ಎಡಿಎಎಸ್
2023ನೇ ಹೋಂಡಾ ಸಿಟಿಯು ಅಡ್ವಾನ್ಸ್ಡ್ ಡ್ರೈವರ್ ಏಯಿಡ್ಸ್ ಸಿಸ್ಟಮ್ (ಎಡಿಎಸ್) ಹೊಸ ಹೋಂಡಾ ಸಿಟಿ ಕಾರಿನಲ್ಲಿ ಬಂದಿರುವ ಪ್ರಮುಖ ಫೀಚರ್. ಕೊಯಿಲೇಷನ್ ಮಿಟಿಗೇಷನ್ ಬ್ರೇಕಿಂಗ್ ಸಿಸ್ಟಮ್ (ಸಿಎಮ್ಬಿಎಸ್), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ವಿತ್ ಲೋ ಸ್ಪೀಡ್ ಫಾಲೊ, ರೋಡ್ ಡಿಪಾರ್ಚರ್ ಮಿಟಿಗೇಷನ್ ಸಿಸ್ಟಮ್, ಲೇನ್ ಕೀಪ್ ಅಸಿಸ್ಟ್ ಸಿಸ್ಟಮ್ (ಎಲ್ಕೆಎಎಸ್), ಲೀಡ್ ಕಾರ್ ಡಿಪಾರ್ಚರ್ ನೋಟಿಫಿಕೇಷನ್ ಸಿಸ್ಟಮ್ ಹಾಗೂ ಆಟೋ ಹೈ ಬೀಮ್ ವ್ಯವಸ್ಥೆ ಇದರಲ್ಲಿದೆ.
ಹೋಂಡಾ ಸಿಟಿ 2023 ವೇರಿಯೆಂಟ್ಗಳು ಹಾಗೂ ಬೆಲೆ
ಹೊಸ ಹೋಂಡಾ ಸಿಟಿ ಎಸ್ವಿ ಎಂಬ ಹೊಸ ವೇರಿಯೆಂಟ್ ಅನ್ನು ಸೇರಿಕೊಂಡಿದ್ದು, ಅದರನ್ನು ಹೊರತುಪಡಿಸಿ ವಿ, ವಿಎಕ್ಸ್, ಜಡ್ ಎಕ್ಸ್ ಎಂಬ ವೇರಿಯೆಂಟ್ನಲ್ಲಿ ಲಭ್ಯವಿದೆ. 2023ನೇ ಹೋಂಡಾ ಸಿಟಿಯ ಬೆಲೆ 11. 49 ಲಕ್ಷ ರೂಪಾಯಿಗಳಾಗಿದ್ದು, 14.72 ಲಕ್ಷ ರೂಪಾಯಿಗಳಷ್ಟಿವೆ. ಎರಡೂ ಎಕ್ಸ್ಶೋರೂಮ್ ಬೆಲೆಗಳಾಗಿವೆ.
ಹೋಂಡಾ ಸಿಟಿ 2023 ಎಂಜಿನ್
ಹೊಸ ಹೋಂಡಾ ಸಿಟಿಯಲ್ಲಿ 1.5 ಲೀಟರ್ನ i-VTEC ಎಂಜಿನ್ ಇದ್ದು ಹಳೆ ಮಾಡೆಲ್ಗಿಂತ ಯಾವುದೇ ಬದಲಾವಣೆ ಮಾಡಿಲ್ಲ. ಇದು 6600 ಆರ್ಪಿಎಮ್ನಲ್ಲಿ 119 ಬಿಎಚ್ಪಿ ಪವರ್ ಹಾಗೂ 4,300 ಆರ್ಪಿಎಮ್ನಲ್ಲಿ 145 ಎನ್ಎಮ್ ಟಾರ್ಕ್ ನೀಡುತ್ತದೆ. ಇದರಲ್ಲಿ ಆರು ಸ್ಪೀಡ್ನ ಮ್ಯಾನುಯಲ್ ಹಾಗೂ 7 ಸ್ಪೀಡ್ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ. ಇದು 17.8 ಹಾಗೂ 18.4 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ.