ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಮ್ ಹ್ಯಾಚ್ ಬ್ಯಾಟ್ ಆಲ್ಟ್ರೋಜ್ ಸಿಎನ್ಜಿ ಕಾರಿನ ಬುಕಿಂಗ್ ಇತ್ತೀಚೆಗೆ ಆರಂಭಿಸಿದೆ. 21 ಸಾವಿರ ರೂಪಾಯಿ ಪಾವತಿ ಮಾಡಿ ಕಾರ್ ಬುಕ್ ಮಾಡಿಕೊಳ್ಳಬಹುದು ಎಂದು ಹೇಳಿದೆ. ಆದರೆ ಕಾರಿನ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಆದರೂ ಹೊಸ ತಾಂತ್ರಿಕತೆ ಹಾಗ ಬೂಟ್ ಸ್ಪೇಸ್ನಿಂದಾಗಿ ಈ ಕಾರು ಜನರ ಮನಸ್ಸನ್ನು ಗೆಲ್ಲುವ ಸಾಧ್ಯತೆಗಳಿವೆ.
ವರ್ಷದ ಆರಂಭದಲ್ಲಿ ಗ್ರೇಟರ್ ನೊಯ್ದಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಈ ಸಿಎನ್ಜಿ ಆಲ್ಟ್ರೋಜ್ ಅನ್ನು ಪರಿಚಯ ಮಾಡಲಾಗಿತ್ತು. ಈ ವೇಳೆ ಡ್ಯುಯಲ್ ಸಿಲಿಂಡರ್ ಮೂಲಕ ಬೂಟ್ ಸ್ಪೇಸ್ ಕಡಿಮೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಇದೇ ಕಾರಣಕ್ಕೆ ಕಾರು ಹೆಚ್ಚು ಆಕರ್ಷಣೆಗೆ ಒಳಗಾಗಲಿದೆ. ಈ ಕಾರಿನಲ್ಲಿ ಏನೇನು ವಿಶೇಷತೆಗಳು ಇರಬಹುದು ಎಂಬುದನ್ನು ನೋಡೋಣ.
ಬುಕಿಂಗ್ ಆರಂಭಗೊಂಡಿದೆ
ಟಾಟಾ ಮೋಟಾರ್ಸ್ ಆಲ್ಟ್ರೋಜ್ ಸಿಎನ್ಜಿ ಕಾರಿನ ಬುಕಿಂಗ್ ಮಾತ್ರ ಆರಂಭಿಸಿದೆ. ಬೆಲೆ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಬುಕ್ ಮಾಡುವ ಮೊದಲು ರಿಯಲ್ ಟೈಮ್ ಎಕ್ಸ್ಪೀರಿಯನ್ಸ್ ಪಡೆಯಲು ಸಾಧ್ಯವಿಲ್ಲ. ಕಾರಿನ ಬೂಟ್ಸ್ಪೇಸ್ ನಷ್ಟವಾಗದ ಹಾಗೆ ನೋಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಆದರೂ ಪೆಟ್ರೋಲ್ ಕಾರಿನಷ್ಟು ಸಿಗದು. ಕಾರಿನ ಬಗ್ಗೆ ಆಸಕ್ತಿ ಇದ್ದರೆ 21 ಸಾವಿರ ರೂಪಾಯಿ ಪಾವತಿ ಮಾಡಿ ಬುಕ್ ಮಾಡಬಹುದು.
ಡ್ಯುಯಲ್ ಸಿಲಿಂಡರ್ ಟೆಕ್ನಾಲಜಿ
ಸಿಎನ್ಜಿ ಕಾರುಗಳಲ್ಲಿ ಸಿಂಗಲ್ ಸಿಲಿಂಡರ್ಗಳನ್ನು ಬಳಸಲಾಗುತ್ತದೆ. ಟಾಟಾ ಮೋಟಾರ್ಸ್ ಅದರ ಬದಲಾಗಿ ಎರಡು ಸಿಲಿಂಡರ್ಗಳನ್ನು ಬಳಸಿಕೊಂಡಿದೆ. ಪ್ರತಿಯೊಂದು ಸಿಲಿಂಡರ್ 30 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಸಿಂಗಲ್ ಸಿಲಿಂಡರ್ ಬಳಸುವುದರಿಂದ ಬೂಟ್ ಸ್ಪೇಸ್ ಹೆಚ್ಚು ಲಭ್ಯವಿದೆ. ಸಿಎನ್ಜಿ ಆಲ್ಟ್ರೋಜ್ನಲ್ಲಿ 300 ಲೀಟರ್ ಬೂಟ್ ಸ್ಪೇಸ್ ನೀಡುತ್ತೇವೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಹೀಗಾಗಿ ಪ್ರತಿಸ್ಪರ್ಧಿ ಕಾರುಗಳಾದ ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಜಾಕ್ಕೆ ಹೋಲಿಸಿದರೆ ಬೂಟ್ ಸ್ಪೇಸ್ನಲ್ಲಿ ಗೆಲುವು ಗ್ಯಾರಂಟಿ.
ಇದನ್ನೂ ಓದಿ : Tata Motors : ಕಾರುಗಳ ಎಂಜಿನ್ಗಳನ್ನು ಅಪ್ಗ್ರೇಡ್ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಐಸಿಎನ್ಜಿ ಸಿಂಗಲ್ ಅಡ್ವಾನ್ಸ್ಡ್ ಇಸಿಯು ತಾಂತ್ರಿಕತೆ ಇದೆ. ಇದು ಡೈರೆಕ್ಟ್ ಸ್ಟಾರ್ಟ್ ಸಿಎನ್ಜಿ ಮೋಡ್ ಹೊಂದಿದೆ. ಇದು ನೇರವಾಗಿ ಸಿಎನ್ಜಿ ಮೂಲಕವೇ ಸ್ಟಾರ್ಟ್ ಆಗುತ್ತದೆ. ಅದೇ ರೀತಿ ಗ್ಯಾಸ್ ಲೀಕೇಜ್ ಡಿಟೆಕ್ಷನ್, ಮೈಕ್ರೋ ಸ್ವಿಚ್ ವ್ಯವಸ್ಥೆಯೂ ಇದೆ. ರೀಫಿಲ್ ಮಾಡುವ ವೇಳೆ ಕಾರಿನ ಎಂಜಿನ್ ಬಂದ್ ಆಗುತ್ತದೆ.
ಕಲರ್ ಆಯ್ಕೆಗಳು
ಟಾಟಾ ಮೋಟಾರ್ಸ್ ಆಲ್ಟ್ರೋಜ್ ಸಿಎನ್ಜಿಯಲ್ಲಿ ನಾಲ್ಕು ವೇರಿಯೆಂಟ್ಗಳನ್ನು ನೀಡಿದೆ. ಎಕ್ಇ, ಎಕ್ಸ್ಎಮ್ಪ್ಲಸ್, ಎಕ್ಸ್ಝಡ್, ಮತ್ತು ಎಕ್ಸ್ಝಡ್ ಪ್ಲಸ್ ಅಯ್ಕೆಯಲ್ಲಿ ಲಭ್ಯವಿದೆ. ಒಪೆರಾ ಬ್ಲ್ಯು, ಡೌನ್ಟೌನ್ ರೆಡ್, ಆರ್ಕೆಡ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
ಆಲ್ಟ್ರೂಜ್ ಐ ಸಿಎನ್ಜಿ ಫೀಚರ್ಗಳು
ಲೆದರೆಟ್ ಸೀಟ್ಗಳು, ಐಆರ್ಎ ಕನೆಕ್ಟೆಡ್ ಟೆಕ್ನಾಲಜಿ, ಕ್ರೂಸ್ ಕಂಟ್ರೋಲ್, ಆಟೋ ಮ್ಯಾಟಿಕ್ ಹೆಡ್ ಲ್ಯಾಂಪ್ ಸೇರಿದಂತೆ ಹಲವು ಫೀಚರ್ಗಳು ಲಭ್ಯವಿದೆ. ಎಲೆಕ್ಟ್ರಿಕ್ ಸನ್ರೂಫ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಹೊಸದಾಗಿದ್ದು ಹೊಸ ಫೀಚರ್ಗಳನ್ನು ಹೊಂದಿದೆ.