Site icon Vistara News

Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ವಿವರ ಇಲ್ಲಿದೆ

Here are the top selling cars in February 2023

#image_title

ಬೆಂಗಳೂರು: ಸೆಮಿ ಕಂಡಕ್ಟರ್ ಚಿಪ್​ಗಳ ಕೊರತೆಯ ಹೊರತಾಗಿಯೂ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ಜನರು ಕೂಡ ಹೊಸ ಕಾರುಗಳ ಗ್ರಾಹಕರಾಗಲು ಬಯಸುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿರುವ ಎಲ್ಲ ಕಾರುಗಳ ಮಾರುಕಟ್ಟೆ ಹಿಗ್ಗುತ್ತಿದೆ. ಅಂತೆಯೇ ಮಾರುತಿ ಸುಜುಕಿಯಿಂದ (Maruti Suzuki ) ಹಿಡಿದು ಟಾಟಾದವರೆಗೆ ಕಳೆದ ಫೆಬ್ರವರಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾದ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

1. ಮಾರುತಿ ಸುಜುಕಿ ಬಲೆನೊ

ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಾರು ಮಾರುತಿ ಸುಜುಕಿಯ ಬಲೆನೊ. ಈ ಬ್ರಾಂಡ್​ನ 18,592 ಕಾರುಗಳು ಫೆಬ್ರವರಿ 2023ರಲ್ಲಿ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 12, 570 ಕಾರುಗಳು ಮಾರಾಟವಾಗಿದ್ದವು.

2. ಮಾರುತಿ ಸುಜುಕಿ ಸ್ವಿಫ್ಟ್​

ಭಾರತದ ಜನಪ್ರಿಯ ಹ್ಯಾಚ್​ಬ್ಯಾಕ್ ಕಾರು ಮಾರುತಿ ಸುಜುಕಿ ಸ್ವಿಫ್ಟ್​ನ​ 18,412 ಯೂನಿಟ್​ ಫೆಬ್ರವರಿಯಲ್ಲಿ ಮಾರಾಟವಾಗಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಡಿಮೆ. ಯಾಕೆಂದರೆ ಆ ವರ್ಷ 19,202 ಕಾರುಗಳು ಸೇಲ್​ ಆಗಿದ್ದವು.

3. ಮಾರುತಿ ಸುಜುಕಿ ಆಲ್ಟೊ

ಇದು ಭಾರತೀಯರ ಅಚ್ಚುಮೆಚ್ಚಿನ ಕಾರು. ಆದರೆ ಕಳೆದ ಫೆಬ್ರವರಿಯಲ್ಲಿ ಟಾಪ್​ 10 ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. 18,114 ಕಾರುಗಳು ಒಂದು ತಿಂಗಳಲ್ಲಿ ಮಾರಾಟವಾಗಿವೆ. ಕಳೆದ ವರ್ಷ 11, 551 ಕಾರುಗಳು ಮಾರಾಟವಾಗಿದ್ದವು.

4. ಮಾರುತಿ ಸುಜುಕಿ ವ್ಯಾಗನ್​ಆರ್​

ನಾಲ್ಕನೇ ಸ್ಥಾನ ಪಡೆದ ಕಾರು ಮಾರುತಿ ಸುಜುಕಿಯ ವ್ಯಾಗನ್​ಆರ್​. 16, 889 ಕಾರುಗಳನ್ನು ಕಂಪನಿ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯ 14,669 ಕಾರುಗಳಿಗೆ ಹೋಲಿಸಿದರೆ ಪ್ರಗತಿ ಸಾಧಿಸಿದೆ.

5. ಮಾರುತಿ ಸುಜುಕಿ ಡಿಸೈರ್​

ಟಾಪ್​ 10 ಪಟ್ಟಿಯಲ್ಲಿರುವ ಏಕೈಕ ಸೆಡಾನ್ ಕಾರು ಮಾರುತಿ ಸುಜುಕಿ ಡಿಸೈರ್​. 16, 798 ಕಾರುಗಳು ಫೆಬ್ರವರಿಯಲ್ಲಿ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 17, 438 ಕಾರುಗಳನ್ನು ಕಂಪನಿ ಮಾರಾಟ ಮಾಡಿತ್ತು.

6. ಮಾರುತಿ ಸುಜುಕಿ ಬ್ರೆಜಾ

ಟಾಪ್​ 10 ಪಟ್ಟಿಯಲ್ಲಿರುವ ಮೊದಲ ಎಸ್​ಯುವಿ. ಫೆಬ್ರವರಿ 2023ರಲ್ಲಿ 15, 787 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. 2022ರ ಫೆಬ್ರವರಿಯಲ್ಲಿ 9, 256 ಕಾರುಗಳು ಸೇಲ್​ ಅಗಿದ್ದವು.

7. ಟಾಟಾ ನೆಕ್ಸಾನ್​

ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಕಾರು. ಆದರೆ ಮಾರುತಿ ಸುಜುಕಿ ಹೊರತುಪಡಿಸಿದಂತೆ ಮೊದಲ ಕಾರು. 13,914 ನೆಕ್ಸಾನ್​ ಕಾರುಗಳು ಫೆಬ್ರವರಿ 2023ರಲ್ಲಿ ಸೇಲ್​ ಆಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 12, 259 ನೆಕ್ಸಾನ್​ ಮಾರಾಟವಾಗಿದ್ದವು.

8. ಮಾರುತಿ ಇಕೊ

ಇದು ಲಿಸ್ಟ್​​ನಲ್ಲಿರುವ ವ್ಯಾನ್​. ಒಟ್ಟು 11,352 ಕಾರುಗಳನ್ನು ಮಾರುತಿ ಸುಜುಕಿ ಫೆಬ್ವವರಿಯಲ್ಲಿ ಮಾರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,190 ಕಾರುಗಳು ರಸ್ತೆಗೆ ಇಳಿದಿದ್ದವು.

ಇದನ್ನೂ ಓದಿ: Honda Motorcycle : ಹೋಂಡಾ ಹೈನೆಸ್​ ಸಿಬಿ350, ಸಿಬಿ350ಆರ್​ಎಸ್​ ಹೊಸ ಆವೃತ್ತಿ ಬಿಡುಗಡೆ

9. ಟಾಟಾ ಪಂಚ್​

ಟಾಟಾ ಮೋಟಾರ್ಸ್​​ನ ಮಿನಿ ಎಸ್​ಯುವಿ ಪಂಚ್​ ನಿಧಾನವಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಫೆಬ್ರವರಿಯಲ್ಲಿ ಒಟ್ಟು 11,168 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 9,592 ಕಾರುಗಳನ್ನು ಮಾರಾಟ ಮಾಡಿತ್ತು ಟಾಟಾ ಮೋಟಾರ್ಸ್​.

10. ಹ್ಯುಂಡೈ ಕ್ರೆಟಾ

ಈ ಪಟ್ಟಿಯಲ್ಲಿರುವ ಏಕೈಕ ದೊಡ್ಡ ಗಾತ್ರದ ಎಸ್​ಯುವಿ ಹ್ಯುಂಡೈ ಕ್ರೆಟಾ. ಫೆಬ್ರವರಿಯಲ್ಲಿ 10, 421 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷ 9606 ಕಾರುಗಳನ್ನು ಕಂಪನಿ ಮಾರಿತ್ತು.

Exit mobile version