ಮುಂಬಯಿ: ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಇರುವ ದಂಪತಿಯ ಕುಟುಂಬದ ಪ್ರಯಾಣಕ್ಕೆ ಐದು ಸೀಟಿನ ಕಾರುಗಳು ಸಾಕಾಗುವುದಿಲ್ಲ. ಮಕ್ಕಳು ದೊಡ್ಡದಾಗುತ್ತಿದ್ದಂತೆ ಅವರನ್ನು ತೊಡೆಯ ಮೇಲೆ ಕೂರಿಸಿಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ಏಳು ಸೀಟಿನ ಕಾರುಗಳು ಬೇಕಾಗುತ್ತದೆ. ಅದೇ ಕಾರಣಕ್ಕೆ ಭಾರತದಲ್ಲಿ 7 ಸೀಟ್ ಎಮ್ಪಿವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜತೆಗೆ ಕಾರು ಕಂಪನಿಗಳು ಕೂಡ ಏಳು ಸೀಟ್ನ ಕಾರು ಸೆಗ್ಮೆಂಟ್ಗಳ ಕಡೆಗೆ ಗಮನ ಹರಿಸುತ್ತಿವೆ. ಇದರಿಂದಾಗಿ ಈ ಕಾರಿನ ಸೆಗ್ಮೆಂಟ್ನಲ್ಲಿ ಪೈಪೋಟಿ ಹೆಚ್ಚಾಗಿದೆ. ಹಾಗಾದರೆ ಭಾರತದ ಮಾರಕಟ್ಟೆಯಲ್ಲಿ ಲಭ್ಯವಿರುವು ಏಳು ಸೀಟಿನಕಾರುಗಳು ಯಾವುದೆಲ್ಲ ಎಂದು ನೋಡೋಣ.
ರಿನೋ ಟ್ರೈಬರ್ (Renault Triber)
ರಿನೋ ಕಂಪನಿಯ ಟ್ರೈಬರ್ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಏಳು ಸೀಟ್ನ ಕಾರಾಗಿದೆ. ಈ ಕಾರಿನ ಆರಂಭಿಕ ಬೆಲೆ 6.33 ಲಕ್ಷ ರೂಪಾಯಿಗಳಾಗಿದ್ದು, ಟಾಪ್ ಎಂಡ್ ಕಾರಿನ ಬೆಲೆ 8.97 ಲಕ್ಷ ರೂಪಾಯಿಗಳು. (ಎಕ್ಸ್ಶೋರೂಮ್). ಇದರಲ್ಲಿ 1.0 ಲೀಟರ್ನ ಪೆಟ್ರೋಲ್ ಎಂಜಿನ್ ಇದೆ.
ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)
ಇದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಏಳು ಸೀಟಿನ ಕಾರು. ಇದರ ಆರಂಭಿಕ ಬೆಲೆ 8.35 ಲಕ್ಷ ರೂಪಾಯಿ. ಗರಿಷ್ಠ ಬೆಲೆ 12.79 ಲಕ್ಷ ರೂಪಾಯಿ. ಇದರಲ್ಲಿ 1.5 ಲೀಟರ್ ಸಾಮರ್ಥ್ಯದ ಎಂಜಿನ್ ಇದ್ದು, ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಇದರಲ್ಲಿ ಸಿಎನ್ಜಿ ಕಿಟ್ ಕೂಡ ಲಭ್ಯವಿದೆ.
ಮಹಿಂದ್ರಾ ಬೊಲೆರೊ ನಿಯೊ (Mahindra Bolero neo)
ಮಹೀಂದ್ರಾ ಬೊಲೆರೊ ಕಡಿಮೆ ಬೆಲೆಗೆ ದೊರೆಯುವ ಎಸ್ಯುವಿ ಏಳು ಸೀಟಿನ ಕಾರು. ಇದರ ಆರಂಭಿಕ ಬೆಲೆ 9.63 ಲಕ್ಷ ರೂಪಾಯಿ. ಇದರಲ್ಲಿ ಲ್ಯಾಡರ್ ಫ್ರೇಮ್ ಹಾಗೂ ಆರ್ಡಬ್ಲ್ಯುಡಿ ಕಾನ್ಫಿಗರೇಷನ್ ಇರುತ್ತದೆ. ಇದರಲ್ಲಿ 1.5 ಲೀಟರ್ನ ಡಿಸೆಲ್ ಎಂಜಿನ್ ಇದೆ.
ಮಹೀಂದ್ರಾ ಬೊಲೆರೊ (Mahindra Bolero)
ಇದು ಮಹೀಂದ್ರಾ ಕಂಪನಿಯ ಅತಿ ಹೆಚ್ಚು ಮಾರಾಟ ಮಾಡುವ ಎಸ್ಯುವಿ. ಈ ಕಾರಿನ ಆರಂಭಿಕ ಬೆಲೆ 9.87 ಲಕ್ಷ ರೂಪಾಯಿ. ಇದು 1.5 ಲೀಟರ್ನ ಡಿಸೆಲ್ ಎಂಜಿನ್ ಹೊಂದಿದೆ. ಆದರೆ, ಪವರ್ ವಿಚಾರಕ್ಕೆ ಬಂದಾಗ ನಿಯೋಗಿಂತ ಸ್ವಲ್ಪ ಕಡಿಮೆಯಿದೆ.
ಕಿಯಾ ಕರೆನ್ಸ್ (Kia Carens)
ಕಿಯಾ ಕಂಪನಿಯ ಕರೆನ್ಸ್ಗೂ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಬರುತ್ತಿದೆ. ಇದರಲ್ಲಿ 1.5 ಲೀಟರ್ ಸಾಮರ್ಥ್ಯದ ಟರ್ಬೊ ಎಂಜಿನ್ ಇದೆ. ಈ ಎಂಪಿವಿ ಕಾರಿನ ಆರಂಭಿಕ ಬೆಲೆ 10.45 ಲಕ್ಷ ರೂಪಾಯಿ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ (Mahindra Scorpia Classic)
ಮಹೀಂದ್ರಾದ ಜನಪ್ರಿಯ ಕಾರು ಸ್ಕಾರ್ಪಿಯೊ ಕ್ಲಾಸಿಕ್ನ ಆರಂಭಿಕ ಬೆಲೆ 12.64 ಲಕ್ಷ ರೂಪಾಯಿ. ಎಸ್ ಹಾಗೂ ಎಸ್11 ಎಂಬ ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಇದರಲ್ಲಿ 2.2 ಲೀಟರ್ನ ಡೀಸೆಲ್ ಎಂಜಿನ್ ಇದ್ದು 132 ಪಿಎಸ್ ಪವರ್ ಹಾಗೂ 300 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ : Compact SUV’s | ಎಸ್ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಈ ಎಲ್ಲ ಕಾರುಗಳು ಬೆಲೆ ಇಳಿಕೆ?