Site icon Vistara News

Indian Bikes : 2 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಸ್ಪೋರ್ಟಿ ಬೈಕ್​ಗಳ ಪಟ್ಟಿ ಇಲ್ಲಿದೆ

here-is-a-list-of-sporty-bikes-available-under-rs-2-lakh

#image_title

ಬೆಂಗಳೂರು: ಸ್ಪೋರ್ಟಿ ಲುಕ್​ ಹೊಂದಿರುವ ಬೈಕ್​​ಗಳಿಗೆ (Indian Bikes) ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಯುವ ಸಮುದಾಯದ ಗ್ರಾಹಕರು ಇಂಥ ಬೈಕ್​ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಭಾರತದಲ್ಲಿರುವ ಪ್ರತಿಯೊಂದು ಕಂಪನಿಗಳೂ ಸ್ಪೋರ್ಟಿ ಲುಕ್​ ಹೊಂದಿರುವ ಹಲವು ಬೈಕ್​ಗಳನ್ನು ರಸ್ತೆಗಳಿಸಿವೆ. ಇವುಗಳಲ್ಲಿ ಈ ಕೆಳಗೆ ಪಟ್ಟಿ ಮಾಡಿರುವ ಬೈಕ್​ಗಳು ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.

ಕೆಟಿಎಮ್​ 125 ಡ್ಯೂಕ್​

ಕೆಟಿಎಮ್ ಕಂಪನಿಯ ಈ 124. 7 ಸಿಸಿಯ ಬೈಕ್​ ಅತಿವೇಗದ ಸವಾರಿಗೆ ಹೇಳಿ ಮಾಡಿಸಿದಂತಿದೆ. ಇದರಲ್ಲಿ ಲಿಕ್ವಿಡ್​ ಕೂಲ್ಡ್​ ಡಿಒಎಚ್​​ಸಿ ಎಂಜಿನ್​ ಇದೆ. ಇದು 9,250 ಆರ್​ಪಿಎಮ್​ನಲ್ಲಿ 14.3 ಎಚ್​ಪಿ ಪವರ್​ ಬಿಡುಗಡೆ ಮಾಡಿದರೆ, 8000 ಆರ್​ಪಿಎಮ್​ನಲ್ಲಿ 12 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರ ಬೆಲೆ 1.79 ಲಕ್ಷ ರೂಪಾಯಿ (ಡೆಲ್ಲಿ ಎಕ್ಸ್​ ಶೋರೂಮ್​).

ಬಜಾಜ್​ ಪಲ್ಸರ್​ ಎನ್​ಎಸ್​200, ಆರ್​ಎಸ್​ 200

ಎರಡೂ ಬೈಕ್​​ಗಳು 199. 5 ಸಿಸಿಯ ಎಂಜಿನ್​ ಹೊಂದಿದೆ. ಇದು ಗರಿಷ್ಠ 24.16 ಎಚ್​ಪಿ ಪವರ್​ ಹಾಗೂ 18.74 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಬಜಾಜ್​ ಪಲ್ಸರ್​ನ ಎನ್​​ಎಸ್​ ಬೈಕ್​ 1.47 ಲಕ್ಷ ರೂಪಾಯಿಯಿಂದ ಆರಂಭಗೊಂಡರೆ, ಆರ್​​ಎಸ್​ ಬೈಕ್​ನ ಬೆಲೆ 1.71 ಲಕ್ಷ ರೂಪಾಯಿಗೆ ಶುರುವಾಗುತ್ತದೆ.

ಟಿವಿಎಸ್​ ಅಪಾಚೆ ಆರ್​ಟಿಆರ್​ 200 4ವಿ

ಟಿವಿಎಸ್​ ಅಪಾಚೆ ಆರ್​ಟಿಆರ್​ 160 ಹಾಗೂ ಆರ್​ಟಿಆರ್​ 200 4ವಿ ಬೈಕ್​ಗಳು 2 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. 160 ಬೈಕ್ 17.3 ಎಚ್​ಪಿ ಪವರ್​ ಹಾಗೂ 14.52 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಬೈಕ್​ನ ಗರಿಷ್ಠ ಬೆಲೆ 1.31 ಲಕ್ಷ ರೂಪಾಯಿ (ಎಕ್ಸ್ ಶೋರೂಮ್​ ಡೆಲ್ಲಿ). ಅದೇ ರೀತಿ 200 ಸಿಸಿಯ ಬೈಕ್ 20.5 ಎಚ್​ಪಿ ಪವರ್ ಬಿಡುಗಡೆ ಮಾಡುತ್ತದೆ. ಈ ಬೈಕ್​ನ ಎಕ್ಸ್​ಶೋರೂಮ್​ ಬೆಲೆ 1.40 ಲಕ್ಷ ರೂಪಾಯಿ.

ಹೀರೋ ಎಕ್ಸ್ಟ್ರೀಮ್​ 160

ಹೀರೊ ಎಕ್ಸ್ಟ್ರೀಮ್ ಬೈಕ್​ 163 ಸಿಸಿಯ ಎಂಜಿನ್​ ಹೊಂದಿದೆ. ಇದು 15 ಬಿಎಚ್​ಪಿ ಪವರ್​ ಹಾಗೂ 14 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದು ನಾಲ್ಕು ವೇರಿಯೆಂಟ್​​ಗಳಲ್ಲಿ ಲಭ್ಯವಿದೆ. ಈ ಬೈಕ್​ನ ಎಕ್ಸ್​ಶೋರೂಮ್​ ಗರಿಷ್ಠ ಬೆಲೆ 1.30 ಲಕ್ಷ ರೂಪಾಯಿ. ಹೀರೋ ಎಕ್ಸ್ಟ್ರೀಮ್​ 200 ಎಸ್​ ಬೈಕ್​ ಕೂಡ 2 ಲಕ್ಷ ರೂಪಾಯಿ ಒಳಗೆ ಲಭ್ಯವಿದೆ. ಇದರ ಗರಿಷ್ಠ ಬೆಲೆ 1.35 ಲಕ್ಷ ರೂಪಾಯಿ. ಇದು 17.6 ಬಿಎಚ್​​ಪಿ ಪವರ್​, 16.45 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ.

ಹೋಂಡಾ ಹಾರ್ನೆಟ್​ 2.0

ಹೋಂಡಾ ಹಾರ್ನೆಟ್​ ಬೈಕ್​ನಲ್ಲಿ 184. 40 ಸಿಸಿಯ ಎಂಜಿನ್ ಇದ್ದು, 17 ಬಿಎಚ್​ಪಿ ಪವರ್​ ಹಾಗೂ 16.1 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಹಾರ್ನೆಟ್​ 2.0 ಬೈಕ್​ನ ಆರಂಭಿಕ ಬೆಲೆ 1.36 ಲಕ್ಷ ರೂಪಾಯಿಗಳು.

ಸುಜುಕಿ ಜಿಕ್ಸರ್​ ಎಸ್​ಎಫ್​ 150

ಸುಜುಕಿ ಜಿಕ್ಸರ್​ ಎಸ್​ಎಫ್​ನಲ್ಲಿ ಸಿಂಗಲ್​ ಸಿಲಿಂಡರ್​ 155 ಸಿಸಿಯ ಎಂಜಿನ್​ ಇದೆ. ಇದು 13.4 ಎಚ್​ಪಿ ಪವರ್​ ಹಾಗೂ 13.8 ಎನ್​ಎಮ್ ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಬೈಕ್​ನ ಗರಿಷ್ಠ ಎಕ್ಸ್​ಶೋರೂಮ್​ ಬೆಲೆ 1.48 ಲಕ್ಷ ರೂಪಾಯಿಗಳು.

ಯಮಹಾ ಎಮ್​ಟಿ 15

ಯಮಹಾ ಎಮ್​ಟಿ 15 ಬೈಕ್​ನಲ್ಲಿ 155 ಸಿಸಿ ಲಿಕ್ವಿಡ್​ ಕೂಲ್ಡ್​ ಎಂಜಿನ್​ ಇದೆ. ಇದು ಗರಿಷ್ಠ 18 ಬಿಚ್​ಪಿ ಪವರ್ ಹಾಗೂ 14.1 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಬೈಕ್​ನ ಆರಂಭಿಕ ಬೆಲೆ 1.68 ಲಕ್ಷ ರೂಪಾಯಿ.

Exit mobile version