ನವ ದೆಹಲಿ: ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಹೊಸ ಹೀರೋ ಎಕ್ಸ್ ಟ್ರೀಮ್ 200 ಎಸ್ 4 ವಾಲ್ವ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಮೂಲಕ ಹೀರೋ ಕಂಒನಿಯ ಎಕ್ಸ್ ಟ್ರೀಮ್ 160ಆರ್ 4ವಿ ಬೈಕಿನ ಬಿಡುಗಡೆಯ ನಂತರ ಮತ್ತೊಂದು ಪ್ರೀಮಿಯಂ ಬೈಕ್ ಬಿಡುಗಡೆಯಾಗಿದೆ. ಹೊಸ ಹೀರೋ ಎಕ್ಸ್ ಟ್ರೀಮ್ 200 ಎಸ್ 4ವಿ ಬೈಕ್ ಪವರ್ ಪ್ಯಾಕ್ಡ್ ರೈಡಿಂಗ್ ಡೈನಾಮಿಕ್ಸ್, ಸ್ಪೋರ್ಟಿ ಕ್ಯಾರೆಕ್ಟರ್ ಮತ್ತು ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಇದು ಹೊಸ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ತಂತ್ರಜ್ಞಾನ ಪಡೆಯುತ್ತದೆ. ಹೀರೋ ಎಕ್ಸ್ ಟ್ರೀಮ್ 200 ಎಸ್ 4ವಿ ಬೈಕ್ ಭಾರತದ ಹೀರೋ ಮೋಟೊಕಾರ್ಪ್ ಡೀಲರ್ ಶಿಪ್ ಗಳಲ್ಲಿ ಲಭ್ಯವಿದೆ. ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ 1,41,250 ರೂಪಾಯಿ.
ಪ್ರೀಮಿಯಂ ಬೈಕ್ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಟ್ವಿನ್ ಎಲ್ಇಡಿ ಹೆಡ್ಲೈಟ್ಗಳು, ಎಲ್ಇಡಿ ಸಿಗ್ನೇಚರ್ ಎಲ್ಇಡಿ ಟೈಲ್ ಲೈಟ್ಗಳು, ಹೊಸ ಡ್ಯುಯಲ್-ಟೋನ್ ಪೇಂಟ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಪಡೆದುಕೊಂಡಿದೆ. ಆಕರ್ಷಣೆಗಾಗಿ ಮೋಟಾರ್ ಸೈಕಲ್ಗೆ ಸ್ಪ್ಲಿಟ್ ಹ್ಯಾಂಡಲ್ ಬಾರ್ ನೀಡಲಾಗಿದೆ. ಇದು ತಿರುವುಗಳು ಮತ್ತು ನೇರ ರಸ್ತೆಗಳಲ್ಲಿ ಸುಲಭವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಫೇರಿಂಗ್ ಮೂಲಕ ಏರೂಡೈನಾಮಿಕ್ಸ್ ಹೆಚ್ಚಿಸಲಾಗಿದೆ.
ಪವರ್ ಟ್ರೇನ್ ಹೇಗಿದೆ?
ಎಕ್ಸ್ಟ್ರೀಮ್ 200ಎಸ್ 4ವಿ ಬೈಕಿನಲ್ಲಿ 199.6 ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್ಪಿ ಪವರ್ ಮತ್ತು 17.35 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಎಕ್ಸ್ ಟ್ರೀಮ್ 200ಎಸ್ 2ವಿ ಬೈಕ್ 18.08 ಬಿ ಹೆಚ್ ಪಿ ಪವರ್ ಹಾಗೂ 16.45 ಎನ್ ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ತಕ್ಷಣದಲ್ಲೇ ವೇಗ ಪಡೆಯಲು 200 ಎಸ್ 4 ವಿ ಗೇರ್ ಅನುಪಾತಗಳನ್ನು ಸಹ ಅಪ್ಡೇಟ್ ಮಾಡಲಾಗಿದೆ ಎಂದು ಹೀರೋ ಉಲ್ಲೇಖಿಸಿದೆ.
ಹೀರೋ ಎಕ್ಸ್ ಟ್ರೀಮ್ 200ಎಸ್ 4ವಿ ಕನೆಕ್ಟಿವಿಟಿ ಫೀಚರ್ಗಳು, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಬ್ಲೂಟೂತ್ ಆ್ಯಕ್ಟಿವೇಟೆಡ್ ಎಲ್ಸಿಡಿ ಡಿಸ್ಪ್ಲೆ ಹೊಂದಿದೆ. 4ವಿ ಸ್ಪ್ಲಿಟ್ ಕ್ಲಿಪ್-ಆನ್ ಹ್ಯಾಂಡಲ್ ಬಾರ್ಗಳು ಮತ್ತು ಎಲ್ಇಡಿ ಹೆಡ್ಲೈಟ್ಗಳನ್ನೂ ಪಡೆಯುತ್ತದೆ. ಹೊಸ 200ಎಸ್ 4ವಿ ಬೈಕ್ ಮೂನ್ ಯೆಲ್ಲೋ, ಪ್ಯಾಂಥರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯಿದೆ.
ಪ್ರೀಮಿಯಂ ಬೈಕ್ 7-ಸ್ಟೆಪ್ ಅಡ್ಜಸ್ಟಬಲ್ ಮೊನೊ ಶಾಕ್ ಸಸ್ಪೆಂಷನ್ ಮತ್ತು 130 ಎಂಎಂ ಅಗಲದ ರೇಡಿಯಲ್ ರಿಯರ್ ಟೈರ್ ಅನ್ನು ಹೊಂದಿದೆ. ನವೀಕರಿಸಿದ ಫ್ರಂಟ್ ಮತ್ತು ರಿಯರ್ ಪೆಟಲ್ ಡಿಸ್ಕ್ ಬ್ರೇಕ್ ಜೊತೆಗೆ ಸಿಂಗಲ್ ಚಾನೆಲ್ ಎಬಿಎಸ್ ಪರಿಣಾಮಕಾರಿ ಬ್ರೇಕಿಂಗ್ ಮತ್ತು ಸುರಕ್ಷತೆಯನ್ನು ನೀಡುತ್ತದೆ.
ಹೀರೋ ಮೋಟೊಕಾರ್ಪ್ ಇಂಡಿಯಾ ಬಿಯು ಮುಖ್ಯ ವ್ಯವಹಾರ ಅಧಿಕಾರಿ ರಂಜಿತ್ ಜಿತ್ ಸಿಂಗ್ ಮಾತನಾಡಿ, ಹೀರೋ ಎಕ್ಸ್ ಟ್ರೀಮ್ 200 ಎಸ್ ನಮ್ಮ ಪ್ರೀಮಿಯಂ ಸ್ಪೋರ್ಟ್ಸ್ ಸೆಗ್ಮೆಂಟ್ನಲ್ಲಿ ನಮ್ಮ ಪ್ರಭಾವವನ್ನು ತೋರಿಸುತ್ತದೆ. ಸವಾರಿ ಉತ್ಸಾಹಿಗಳಿಗೆ ಹೀರೋ ಎಕ್ಸ್ ಟ್ರೀಮ್ 200 ಎಸ್ 4ವಿ ಇಡೀ ದಿನದ ಸ್ಪೋರ್ಟ್ಸ್ ಮೋಟಾರ್ ಸೈಕಲ್ ಆಗಿರಲಿದೆ. ಇದು ನಗರ ಮತ್ತು ಸ್ಪೋರ್ಟಿ ಕಾರ್ಯಕ್ಷಮತೆಯನ್ನು ಒಂದುಗೂಡಿಸುತ್ತದೆ. ನಮ್ಮ ಪ್ರೀಮಿಯಂ ಬೈಕ್ಗಳು ಅಡ್ವೆಂಚರ್, ಟೂರಿಂಗ್ ಮತ್ತು ಸ್ಟ್ರೀಟ್ ಫೈಟರ್ ವಿಭಾಗದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.